ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿಗೆ ಎಳ್ಳಂಪಳ್ಳಿ ಜಗನ್ನಾಥ ಆಚಾರ್ ಆಯ್ಕೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಫೆಬ್ರವರಿ 14 , 2015
ಫೆಬ್ರವರಿ 14, 2015

ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿಗೆ ಎಳ್ಳಂಪಳ್ಳಿ ಜಗನ್ನಾಥ ಆಚಾರ್ ಆಯ್ಕೆ

ಉಡುಪಿ : ವಜ್ರ ಮಹೋತ್ಸವ ಆಚರಿಸಿ 75 ವರ್ಷಕ್ಕೆ ಹತ್ತಿರವಿರುವ ಉಡುಪಿಯ ಅತೀ ಹಿರಿಯ ಸಾಂಸ್ಕ್ರತಿಕ ಸಂಸ್ಥೆ ಯಕ್ಷಗಾನ ಕಲಾಕ್ಷೇತ್ರ(ರಿ) ಉಡುಪಿ ಪ್ರತಿವರ್ಷ ನೀಡುತ್ತಿರುವ ಸಂಸ್ಥೆಯ ಸ್ಥಾಪಕ ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಬಣ್ಣದ ವೇಷಧಾರಿ ಶ್ರೀ ಮಂದಾರ್ತಿ ಮೇಳದ ಕಲಾವಿದ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಫೆಬ್ರವರಿ 22ರಂದು ಸಂಸ್ಥೆಯ ಆಶ್ರಯದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ.

ಬಣ್ಣದ ವೇಷದಿಂದ ಬಡವಾಗಿರುವ ಬಡಗುತಿಟ್ಟಿಗೆ ಎಳ್ಳಂಪಳ್ಳಿಯ ಜಗನ್ನಾಥ ಆಚಾರ್ಯರು ಏಕಮೇವ ಆಶಾಕಿರಣ.ಯಕ್ಷಗಾನದಲ್ಲಿ ಭಾಗವತಿಕೆ,ಹಿಮ್ಮೇಳ ಪರಿಕರ, ಮುಮ್ಮೇಳದ ವಿವಿದ ರೀತಿಯ ವೇಷಗಳು ಇಂದು ಬಹಳಷ್ಟು ಸುಧಾಹರಣೆಯೊಂದಿಗೆ ಆಕರ್ಷಣೀಯವಾಗಿ ಬೆಳೆಯುತಿದ್ದರೂ ಬಡಗುತಿಟ್ಟಿನ ಮಟ್ಟಿಗೆ ಬಣ್ಣದ ವೇಷದ ಪ್ರಾಮುಖ್ಯ ನಶಿಸುತ್ತಿದೆ ಎನ್ನುವುದು ಖೇದಕರ.ತೆಂಕು ತಿಟ್ಟಿಗೆ ಹೋಲಿಸಿದಾಗ ಬಡಗಿನಲ್ಲಿ ಬಣ್ಣದ ವೇಷದಾರಿಗಳು ಬೆರಳೆಣಿಕೆಯಷ್ಟು ಮಾತ್ರ.ಇಂತಹ ಕಾಲಘಟ್ಟದಲ್ಲಿ ಹಿರಿಯ ಬಣ್ಣದ ವೇಷದಾರಿ, ಯಕ್ಷಲೋಕದಲ್ಲಿ ಸುದೀರ್ಘ ನಲವತ್ತ ಒಂದು ಸಂವತ್ಸರಕಾಲ ಬಣ್ಣದ ವೇಷದಾರಿಯಾಗಿ ಮೆರೆದ ಆಚಾರ್ಯರು ನಮ್ಮ ಗಮನಸೆಳೆಯುತ್ತಾರೆ.

ಎಳ್ಳಂಪಳ್ಳಿಯವರು ಮುಖವರ್ಣಿಕೆ ಬಗ್ಗೆ ಬಹು ಎಚ್ಚರವಹಿಸುವ ಕಲಾವಿದರು. ದಿನವೂ ಹುಳಿ ಅಕ್ಕಿಹಿಟ್ಟಿನ ಚಿಟ್ಟೆ ಇಡುವ ಕ್ರಮ ಇವರದ್ದು. ಸುಮಾರು ಐದು ಗಂಟೆಗಳ ಕಾಲ ಚೌಕಿಯಲ್ಲಿ ಕುಳಿತು ಮುಖವರ್ಣಿಕೆಯಲ್ಲಿ ತೊಡಗುವ ಇವರ ಶ್ರದ್ದೆ ತಾಳ್ಮೆ ಇತರರಿಗೆ ಅನುಕರಣೀಯ. ಹಿರಿಯ ಬಣ್ಣದ ವೇಷದಾರಿ ದಿ. ಸಕ್ಕಟ್ಟು ಲಕ್ಶ್ಮೀನಾರಾಯಣಯ್ಯನವರ ರಂಗಪ್ರವೇಶದ ಪೂರ್ವದ ಕೂಗು, ರಂಗದಲ್ಲಿ ಅವರ ಅಭಿನಯವನ್ನು ನೆನಪಿಸುವ ಬಡಗಿನ ಏಕಮಾತ್ರ ಬಣ್ಣದ ವೇಷದಾರಿಯೆಂದು ಇವರನ್ನು ಎಲ್ಲಾ ಅಂಗಗಳಲ್ಲೂ ಗುರುತಿಸಬಹುದು.ಸಹಜ ಆಸಕ್ತಿ, ನಿರಂತರ ಶ್ರಮದಿಂದ ಸುಮಾರು 41 ವರ್ಷ ಬಡಗಿನ ಬಣ್ಣದ ಲೋಕವನ್ನು ಶ್ರೀಮಂತ ಗೊಳಿಸಿದ ಆಚಾರ್ಯರು ಅದಿಕ ವೇತನದೊಂದಿಗೆ ಇತರ ವೇಷಗಳಿಗೂ ಕರೆಬಂದಾಗ ತನ್ನ ಬಣ್ಣದ ವೇಷದ ಆಸಕ್ತಿ ಬಿಡದೆ ಆದರ್ಶಪ್ರಾಯರಾಗಿದ್ದಾರೆ. ಸಂಪ್ರದಾಯ ಮತ್ತು ಆದುನೀಕತೆಯ ಕೊಂಡಿಯಂತಿರುವ ಇವರು ಆಸಕ್ತ ತರುಣರು ಬಂದಲ್ಲಿ ಬಣ್ಣದ ವೇಷದ ಸೂಕ್ಷ್ಮಾತಿಸೂಕ್ಷ್ಮವನ್ನು ಕಲಿಸಿಕೊಡುವ ಇರಾದೆ ಹೊಂದಿದ್ದಾರೆ. ಬಡಗುತಿಟ್ಟಿನಲ್ಲಿ ನಶಿಸುತ್ತಿರುವ ಬಣ್ಣದ ವೇಷದ ಪರಂಪರೆಯ ಏಕಮೇವ ಕಲಾವಿದರಾದ ಎಳ್ಳಂಪಳ್ಳಿಯವರಿಗೆ ಪ್ರತಿಷ್ಟಿತ ಸೀತಾನದಿ ಪ್ರಶಸ್ತಿ ,ಗೋಪರಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಸನ್ಮಾನಗಳು ನಾಡಿನಾದ್ಯಂತ ಯೋಗ್ಯವಾಗಿಯೇ ಸಂದಿದೆ.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ