ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ವ್ಯಕ್ತಿ ವಿಶೇಷ
Share
ಎಲೆ ಮರೆಯ ಬಾಲಕನ ಅಸಾಧಾರಣ ಯಕ್ಷ ಕೈ ಚಳಕ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಭಾನುವಾರ, ಮಾರ್ಚ್ 29 , 2015

ಭಾಗವತರ ಸುಶ್ರಾವ್ಯ ಗಾಯನ, ಚೆಂಡೆ ಮದ್ದಳೆಗಳ ಸುಮಧುರ ವಾದನ. ಝಗಮಗಿಸುವ ರಂಗಸ್ಥಳದಲ್ಲಿ ವಿವಿಧ ರಸರಾಗಗಳ ಸನ್ನಿವೇಷಗಳ ಆವರ್ತನ, ಸುರ, ಮರ್ತ್ಯ, ಪಾತಾಳ ಲೋಕಗಳ ದೃಶ್ಯ ಸಾಕ್ಷಾತ್ಕಾರ. ಹಾಂ ಇದು ಯಾವುದೋ ವೃತ್ತಿಪರ ಮೇಳದ ರಂಗಸ್ಥಳವೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾದೀತು. ಈ ಪರಿಯ ರಂಗ ವೈಭವ ಸಾಕಾರಗೊಂಡಿದ್ದು ಬಾಲಕಲಾವಿದನೊಬ್ಬನ ಕೈಚಳಕದಲ್ಲಿ. ಈ ಕಾರ್ಟೂನ್ ರಂಗಸ್ಥಳದ ರೂವಾರಿ ಶಿವಮೊಗ್ಗ ಜಿಲ್ಲೆಯ ಯಡೂರಿನ ಬಾಲಕ ನವೀನ ಆಚಾರ್ಯನಿಂದ.

ಈ ಕೆಳಗಿನ ಚಿತ್ರಗಳನ್ನು ಗಮನಿಸಿ. ಇವೆಲ್ಲ ಬಾಲಕನ ಕೈಚಳಕದಿಂದ ಮೂಡಿಬಂದ ಅದ್ಬುತಗಳು. ಯಡೂರಿನ ನರಸಿಂಹ ಅಚಾರ್ಯ ಮತ್ತು ವಸುಮತಿಯವರ ಪುತ್ರನಾದ ನವೀನ್ ಬಾಲ್ಯದಿಂದಲೇ ಯಕ್ಷಗಾನ ಪರಿಸರದಲ್ಲಿ ಬೆಳೆದವನು. ತಂದೆಯವರ ನಿರಂತರ ಪ್ರೋತ್ಸಾಹದಿಂದ ಯಕ್ಷಗಾನ ಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡ ನವೀನ್ ತಮ್ಮದೇ ಕಲ್ಪನೆಯ ರಂಗಸ್ಥಳದ ನಿರ್ಮಾಣಕ್ಕೆ ತೊಡಗಿದ್ದು ಎಸ್. ಎಸ್, ಎಲ್. ಸಿ. ವಿಧ್ಯಾಭ್ಯಾಸ ಮಾಡುತ್ತಿರುವಾಗಲೆ. ಪ್ರಾರಂಭದಲ್ಲಿ ಸರಳ ಮತ್ತು ಹಿಮ್ಮೇಳ ಕಲಾವಿದರುಗಳ ಚಿತ್ರಗಳನ್ನು ರಚಿಸಿ ಯಕ್ಷಗಾನದ ದ್ವನಿಮುದ್ರಿಕೆಗಳನ್ನು ಬಳಸಿ ಯಕ್ಷಲೋಕ ನಿರ್ಮಾಣ ಮಾಡುತಿದ್ದರು. ಕ್ರಮೇಣ ತಮ್ಮ ಕಲೆಯನ್ನು ಅಭಿವೃದ್ದಿ ಪಡಿಸುತ್ತಾ ಬಂದ ಇವರು ಪ್ರಸ್ತುತ ಸುಮಾರು ಎರಡುವರೆ ಅಡಿ ಉದ್ದ, ಎರಡು ಅಡಿ ಅಗಲ ಹಾಗು ಎರಡುವರೆ ಅಡಿ ಎತ್ತರದ ಭವ್ಯ ರಂಗಸ್ಥಳವನ್ನು ನಿರ್ಮಿಸಿದ್ದಾರೆ.

ಯಾವುದೇ ಮೇಳದ ರಂಗಸ್ಥಳಕ್ಕೆ ಕಡಿಮೆಯಿಲ್ಲದಂತೆ ನಿರ್ಮಿಸಿರುವ ಈ ರಂಗಸ್ಥಳದಲ್ಲಿ ರಟ್ಟಿನಿಂದ ಭಾಗವತರು ಮದ್ದಳೆಗಾರರು, ಚೆಂಡೆವಾದಕರ ಪ್ರತಿಕೃತಿಗಳು, ಚೆಂಡೆ ಮದ್ದಳೆಗಳ ಮಾದರಿ ರಚಿಸಿ ಜೋಡಿಸಿದ್ದಾರೆ. ಯಕ್ಷಗಾನದ ದ್ವನಿಮುದ್ರಿಕೆಯ ಹಿನ್ನಲೆ ದ್ವನಿಗೆ ಅನುಸಾರವಾಗಿ ಸೂತ್ರದ ಸಹಾಯದಿಂದ ಏಕಕಾಲಕ್ಕೆ ಭಾಗವತರು, ಚೆಂಡೆ, ಮದ್ದಳೆವಾದಕರು ಕಾರ್ಯನಿರತವಾಗುವಂತೆ ಮಾಡಿರುವುದು ನವೀನ್ ಅವರ ಕಲಾಸೃಷ್ಟಿ, ಹಾಗು ಕೈಚಳಕಕ್ಕೆ ಒಂದು ಸಾಕ್ಷಿ. ಹಗ್ಗವನ್ನೆಳೆದಾಗ ಮೇಲೇರುವ ಮುಖ್ಯ ಪರದೆ ರಂಗಸ್ಥಳದ ಇನ್ನೊಂದು ಆಕರ್ಷಣೆ. ಇವಲ್ಲದೆ ಥರ್ಮೋಕಾಲ್ ನಿಂದ ಕಿರೀಟ, ಕೇದಗೆ ಮುಂದಲೆ, ಮುಂಡಾಸು, ಭುಜಕೀರ್ತಿ, ಎದೆಕಟ್ಟು, ವಡ್ಯಾಣ, ಇತ್ಯಾದಿಗಳ ಮಾದರಿಗಳಿವೆ. ಪ್ರಸಿದ್ದ ಹಿರಿಯ ಕಲಾವಿದರನೇಕರು ಇವರ ಮನೆಗೆ ಭೇಟಿಕೊಟ್ಟು ಇವರನ್ನು ಪ್ರೋತ್ಸಾಹಿಸಿದ್ದಾರೆ. ಎಲೆ ಮರೆಯ ಕಾಯಿಯಂತೆ ಘಟ್ಟದ ಮೇಲಿನ ಈ ಗ್ರಾಮೀಣ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಕಲಾಪ್ರೇಮಿಗಳೆಲ್ಲರ ಕರ್ತವ್ಯವೇ ಆಗಿದೆ.

*****************************
Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
suresh shetty(4/1/2015)
Great achievement.
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ