ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಬಾರಕೂರಿನಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜೂನ್ 15 , 2015
ಜೂನ್ 16, 2015

ಬಾರಕೂರಿನಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಬಾರಕೂರು : ಇಲ್ಲಿನ ಕಚ್ಚೂರು ಬಬ್ಬುಸ್ವಾಮಿ ಸನ್ನಿದಾನದಲ್ಲಿ ಮಳೆಗಾಲದ ಮುಂಗಾರು ಯಕ್ಷಸಿಂಚನದ ವತಿಯಿಂದ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರುತ ಪ್ರೋ. ಎಸ್. ವಿ ಉದಯಕುಮಾರ ಶೆಟ್ಟಿ ಮತ್ತು ಮೀನುಗಾರಿಕೆಯಲ್ಲಿ ಸಾಹಸ ಮೆರೆದ ಭೋಜ ಸುವರ್ಣ ಇವರನ್ನು ಸನ್ಮಾನಿಸಲಾಯಿತು. ಅದ್ಯಕ್ಷತೆ ವಹಿಸಿ ಮಾತನಾಡಿದ ಕೋಟ ಅಮೃತೇಶ್ವರಿ ದೇವಸ್ಥಾನದ ಮುಖ್ತೇಸರ ಆನಂದ ಕುಂದರ್ ಮಾತನಾಡಿ ಮೂಲೆ ಮೂಲೆಯಲ್ಲಿ ಇರುವ ಯಕ್ಷಗಾನ ಕಲಾವಿದರನ್ನು ಗುರುತಿಸಿ ಅವರ ಪ್ರತಿಭೆಯನ್ನು ಪತ್ರಿಕೆ ಮೂಲಕ ನಾಡಿನ ಉದ್ದಗಲಕ್ಕೂ ಪರಿಚಯಿಸಿದ ಪ್ರೋ ಎಸ್. ವಿ ಉದಯಕುಮಾರ ಶೆಟ್ಟಿಯವರ ಸೇವೆ ಶ್ಲಾಘನೀಯ ಎಂದರು. ಮೇಳಗಳಲ್ಲಿ ಕಂಡುಬರುವ ಕುಂದುಕೊರತೆಗಳನ್ನು ಆಗಾಗ ಸಂಬಂದಪಟ್ಟವರ ಗಮನಕ್ಕೆ ತರುವ ಅವರ ಯಕ್ಷಗಾನ ಕಾಳಜಿ ಶ್ಲಾಘನೀಯವಾದದ್ದು ಇಂತಹ ನಿಸ್ವಾರ್ಥ ಸೇವಕರನ್ನು ಗುರುತಿಸಿ ಮೊಗವೀರ ಸಮಾಜ ಉತ್ತಮ ಕೆಲಸ ಮಾಡಿದೆ ಎಂದರು.

ಸಮುದ್ರದಲ್ಲಿ ಸಾಹಸ ಮೆರೆದ ಭೋಜ ಸುವರ್ಣರನ್ನು ಅಭಿನಂದಿಸಿದರು. ಸನ್ಮಾನಕ್ಕೆ ಉತ್ತರಿಸಿದ ಪ್ರೋ ಶೆಟ್ಟಿಯವರು ಮೊಗವೀರ ಸಮಾಜಕ್ಕೂ ನಮ್ಮ ಕುಟುಂಬಕ್ಕೂ ತಲೆತಲಾಂತರದಿಂದ ಅನ್ಯೋನ್ಯತೆಯಿದ್ದು ಇದೇ ಸಮಾಜದ ಗತಿಸಿದ ಹಿರಿಯ ಕಲಾವಿದರಾದ ಶಿರಿಯಾರ ಮಂಜು ನಾಯ್ಕ್. ಕೋಟ ವೈಕುಂಠ ಮೊಳಹಳ್ಳಿ ಹೆರಿಯ ನಾಯ್ಕ್, ಕೊಳ್ಕೆಬೈಲು ಶೀನನಾಯ್ಕರು ನಮ್ಮ ಹಿರಿಯರಿಗೆ ತುಂಬಾ ಆತ್ಮೀಯರಾಗಿದ್ದರು ಈ ಸನ್ಮಾನ ಅಂತಹ ಹಿರಿಯರಿಗೆ ಅರ್ಪಿಸುತಿದ್ದೇನೆ ಎಂದರು.

ಉದ್ಯಮಿ ಗಣೇಶ ಪುತ್ರನ್, ಮೊಗವೀರ ಯುವಘಟಕದ ಅದ್ಯಕ್ಷ ಸದಾನಂದ ಬಳ್ಕೂರ್, ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಶ್ರೀಯಾನ , ಉದ್ಯಮಿ ಗೋಪಾಲ ಶೆಟ್ಟಿ ಹೊಸಮಠ, ಕ್ರಷ್ಣಮೂರ್ತಿ ಸಾಲಿಗ್ರಾಮ, ಗೋಕುಲದಾಸ್ ಬಾರ್ಕೂರು ಮುಂತಾದವರು ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಅನೇಕ ಮೊಗವೀರ ಸಮಾಜದ ಗಣ್ಯರು ಆಗಮಿಸಿಶುಭ ಹಾರೈಸಿದರು. ಮೊಳಹಳ್ಳಿ ಅಕ್ಷಯ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು ಹೊಸಮಠದ ದರ್ಮಶ್ರೀ ಫ಼ಿಸಿಂಗ್ ಫ಼್ರೆಂಡ್ಸ್ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು, ಬಳಿಕ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ನೆರವೇರಿತು.


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ