ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನದಲ್ಲಿ ಬರಲಿದ್ದಾನೆ ಬಾಹುಬಲಿ!

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಆಗಸ್ಟ್ 11 , 2015
ಆಗಸ್ಟ್ 11, 2015

ಯಕ್ಷಗಾನದಲ್ಲಿ ಬರಲಿದ್ದಾನೆ ಬಾಹುಬಲಿ!

ಮಂಗಳೂರು : ಎಸ್.ಎಸ್. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಈಗ ಯಕ್ಷಗಾನದಲ್ಲಿ ರಾರಾಜಿಸಲು ಸಜ್ಜಾಗುತ್ತಿದ್ದಾನೆ.

ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನ ಕಲಾಕ್ಷೇತ್ರದಲ್ಲಿ 'ಬಾಹುಬಲಿ'ಯನ್ನು ರಂಗಸ್ಥಳಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ.

ಈಗಾಗಲೇ ಯಕ್ಷಗಾನ ಕ್ಷೇತ್ರಕ್ಕೆ ಹಲವು ಹೊಸತನ ನೀಡಿರುವ ದೇವದಾಸ್ ಈ ಬಾರಿ ಭಾರತೀಯ ಚಿತ್ರರಂಗದಲ್ಲೇ ಇತಿಹಾಸ ನಿರ್ಮಿಸಿದ 'ಬಾಹುಬಲಿ' ಚಿತ್ರದ ಕಾಲ್ಪನಿಕ ಕಥೆಯನ್ನು ರಂಗಸ್ಥಳದ ಮೇಲೆ ತರಲು ಸಿದ್ಧತೆ ನಡೆಸುತ್ತಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ 58 ಯಕ್ಷಗಾನ ಪ್ರಸಂಗಗಳನ್ನು ಬರೆದಿರುವ ದೇವದಾಸ್ 59ನೇ ಪ್ರಸಂಗವಾಗಿ 'ಬಾಹುಬಲಿ'ಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಈ ಮೊದಲು ಕನ್ನಡದ 'ಆಪ್ತಮಿತ್ರ' ಚಿತ್ರವನ್ನು ನಾಗವಲ್ಲಿ ಪ್ರಸಂಗವನ್ನಾಗಿಸಿ ರಂಗಸ್ಥಳದಲ್ಲಿ ವಿಶೇಷ ಪ್ರಯೋಗ ಮಾಡಿದ್ದರು. ತಮಿಳಿನ 'ಪಡೆಯಪ್ಪ' ಚಿತ್ರವನ್ನು ಶಿವರಂಜನಿಯನ್ನಾಗಿಸಿದ್ದರು.

ಬಾಹುಬಲಿ ಚಿತ್ರದಲ್ಲಿರುವಂತೆ ಯಕ್ಷಗಾನದಲ್ಲಿ ದೃಶ್ಯ ವೈಭವಕ್ಕೆ ಆಸ್ಪದವಿಲ್ಲ. ಇಲ್ಲಿ ಕಥಾ ವೈಭವವೇ ಮುಖ್ಯವಾಗಿರುತ್ತದೆ. ಬಾಹುಬಲಿ ಚಿತ್ರ ಅರ್ಧ ಮಾತ್ರ ಇದೆ. ಯಕ್ಷಗಾನದಲ್ಲಿ ಅದನ್ನು ತಮ್ಮದೇ ಕಾಲ್ಪನಿಕ ಕಥೆಯ ಮುಖಾಂತರ ಪೂರ್ತಿಗೊಳಿಸಿದ್ದಾರೆ. ಚಿತ್ರದಲ್ಲಿ ಹಾಸ್ಯ ಪಾತ್ರಗಳು ಇಲ್ಲ. ಆದರೆ ಯಕ್ಷಗಾನಕ್ಕೆ ಅಳವಡಿಸಿಕೊಳ್ಳುವಾಗ ಹಾಸ್ಯವನ್ನು ಸೇರಿಸಿಕೊಳ್ಳಲಾಗಿದೆ ಎನ್ನುತ್ತಾರೆ ದೇವದಾಸ್.
ಕೃಪೆ : vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Gajanana(8/20/2015)
.This is Shown Ending of the yakshagana history ,
Murari Chakrakodi(8/13/2015)
The name should not be Bahubali.I recommend the name Yakshagana Vadhe-cinema Vijaya
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ