ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ರಸರಾಗ ಚಕ್ರವರ್ತಿ ಕಾಳಿಂಗ ನಾವಡರ 25ನೇ ಪುಣ್ಯ ಸಂಸ್ಮರಣೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಆಗಸ್ಟ್ 15 , 2015

ಬಡಗುತಿಟ್ಟಿನ ಮೇರು ಕಲಾವಿದರಲ್ಲಿ ಮಹಾ ಗಾಯಕ ಗುಂಡ್ಮಿ ಕಾಳಿಂಗ ನಾವಡರದ್ದು ಅಗ್ರಮಾನ್ಯ ಹೆಸರು. ತನ್ನದೇ ಶೈಲಿಯೊಂದನ್ನು ಪ್ರವರ್ತನಗೊಳಿಸಿ ಜನಮಾನಸದಲ್ಲಿ ಸ್ಥಿರಗೊಳಿಸಿ ಯುವ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟು ಅಪಾರ ಸಂಖ್ಯೆಯ ಹೊಸ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಕಾಳಿಂಗ ನಾವಡ ಎಂಬುದು ತಾರಾಮೌಲ್ಯದ ಮಾಂತ್ರಿಕ ಸ್ಪರ್ಷದ ಪವಾಡ ಸದೃಶ ಹೆಸರು. ಇಂತಹ ಕ್ರಾಂತಿಕಾರಿ ಭಾಗವತ ಯಕ್ಷಗಾನ ಜಗತ್ತನ್ನು ಅಗಲಿ ವರ್ಷ ಇಪ್ಪತ್ತ ಐದು ಸಂದಿದೆ.

ಅಲ್ಲಲ್ಲಿ 25ನೇ ವರ್ಷದ ಸಂಸ್ಮರಣೆಗಳು ನೆರವೇರುತ್ತಿವೆ. ಬೆಂಗಳೂರಿನ ಯಕ್ಷ-ಕದಂಬ ಸಂಸ್ಥೆ ಈ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಯನ್ನು ದೀರ್ಘಕಾಲ ನಾವಡರಿಗೆ ಮದ್ದಳೆ ಸಾಥ್ ನೀಡಿದ ಮದ್ದಳೆ ಮಾಂತ್ರಿಕ ಕರ್ಕಿ ಪ್ರಭಾಕರ ಭಂಡಾರಿಯವರಿಗೆ ನೀಡುತ್ತಿದೆ. ಗುರು ನಾರ್ಣಪ್ಪ ಉಪ್ಪೂರರಿಗೆ ಅಮೃತೇಶ್ವರಿ ಮೇಳದಲ್ಲಿ ದುರ್ಗಪ್ಪ ಗುಡಿಗಾರರು ಸಾಥ್ ನೀಡಿದರೆ ನಾವಡ-ಭಂಡಾರಿಯವರ ಅದ್ಭುತ ಜೋಡಿ ಸಾಲಿಗ್ರಾಮ ಮೇಳದ ಹಿಮ್ಮೇಳದ ಮೋಡಿ ಮಾಡಿತ್ತು.

ಪತ್ನಿ ವಿಜಯಶ್ರೀ ಹಾಗೂ ಪುತ್ರ ಆಗ್ನೇಯ ನಾವಡರೊ೦ದಿಗೆ ಕಾಳಿಗ ನಾವಡರು
ಉಡುಪಿ ತಾಲೂಕು ಸಾಲಿಗ್ರಾಮದ ಗುಂಡ್ಮಿಯಲ್ಲಿ 1958 ಜೂನ್ 8 ರಂದು ಕುಂಜಾಲು ಶೈಲಿಯ ಹಿರಿಯ ಭಾಗವತ ಗುಂಡ್ಮಿ ರಾಮಚಂದ್ರ ನಾವಡ ಮತ್ತು ಪದ್ಮಾವತಿ ಅಮ್ಮನವರ ಪುತ್ರನಾಗಿ ಜನಿಸಿದ ಕಾಳಿಂಗ ನಾವಡರು ತಂದೆಯಿಂದ ಪ್ರೇರಣೆಗೊಂಡು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಶಿಷ್ಯತ್ವ ಸ್ವೀಕರಿಸಿ ಅವರಿಂದಲೇ ತಾಳಾಬ್ಯಾಸ ಮಾಡಿದರು. ಅವರ ಜೊತೆಯಲ್ಲೇ ಸಹಭಾಗವತರಾಗಿ ದುಡಿದು ಅನುಭವದ ರಸದಾರೆಯಿಂದ ಪರಿಪಕ್ವವಾಗಿ ರೂಪುಗೊಂಡು ಅಮೃತೇಶ್ವರಿ, ಪೆರ್ಡೂರು ಮತ್ತು ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಭಾಗವತನ ಸೂತ್ರ ಹಿಡಿದು ಸಾರ್ವಕಾಲಿಕ ಕಿರಿಯ ಹಾಗು ಯುವ ಭಾಗವತನೆಂಬ ಹೆಮ್ಮೆಗೆ ಪಾತ್ರರಾದರು. 1977ರಲ್ಲಿ ವಿಜಯಶ್ರೀ ಎಂಬ ಪ್ರಸಂಗ ರಚಿಸಿ ಪೆರ್ಡೂರು ಮೇಳದಲ್ಲಿ ರಂಜಿಸಿದರು.

1978ರಲ್ಲಿ ಶ್ರೀ ಸಾಲಿಗ್ರಾಮ ಮೇಳ ಸೇರಿದ ಅವರು 1990ರ ತನಕ ಉನ್ನತ ಯಶಸ್ಸನ್ನು ಗಳಿಸಿದರು. ಇದು ನಾವಡರ ಬದುಕಿನ ಮತ್ತು ಯಕ್ಷಗಾನದ ಸುವರ್ಣ ಯುಗ ಎನ್ನಬಹುದು. ಗಜಗಟ್ಟಿ ಮೇಳವಾಗಿದ್ದ ಅಲ್ಲಿ ಅವರಿಗೆ ಕೆಮ್ಮಣ್ಣು ಆನಂದ , ರಾಮಕ್ರಷ್ಣ ಮಂದಾರ್ತಿ, ಕೋಟ ಶಿವಾನಂದರವರ ಚಂಡೆಯ ಸಾಥ್, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಗುಣವಂತೆ ಗಜಾನನ ಭಂಡಾರಿ, ಶಂಕರ ಭಾಗವತ ಯಲ್ಲಾಪುರ ಕರ್ಕಿ ಪ್ರಭಾಕರ ಭಂಡಾರಿಯವರ ಸಮರ್ಥ ಮದ್ದಳೆಯ ಸಾಥ್ ದೊರೆಯಿತು.

ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ ಮಂಜುನಾಯ್ಕ್, ಐರೋಡಿ ಗೋವಿಂದಪ್ಪ, ಹೊನ್ನಪ್ಪ ಗೋಕರ್ಣ, ಕಿನ್ನಿಗೋಳಿ ಮುಖ್ಯಪ್ರಾಣ. ಬಳ್ಕೂರು ಕ್ರಷ್ಣಯಾಜಿ, ತೀರ್ಥಳ್ಳಿ ಗೋಪಾಲಾಚಾರ್, ಅರಾಟೆ ಮಂಜುನಾಥ, ರಾಮ ನಾಯರಿ, ಬಾಸ್ಕರ ಜೋಶಿ ಮುಂತಾದವರ ಗಜಗಟ್ಟಿ ಮುಮ್ಮೇಳದವರೊಂದಿಗೆ ಅವರು ಬರೆದು ನಿರ್ದೇಶಿಸಿದ ನಾಗಶ್ರೀ ಪ್ರಸಂಗವು ಸುಮಾರು 2000ಕ್ಕೂ ಅದಿಕ ಪ್ರದರ್ಶನಗೊಂಡಿದ್ದು ಮಾತ್ರವಲ್ಲದೆ ಇಂದಿಗೂ ವಿವಿಧ ಮೇಳಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಯಕ್ಷಗಾನ ಕವಿಗಳಾಗಿ ಬಾಗ್ಯಶ್ರೀ, ರೂಪಶ್ರೀ, ವಿಜಯಶ್ರೀ, ಕಾಂಚನಶ್ರೀ, ನಾಗಶ್ರೀ, ಅಮ್ರತಮತಿ ಪ್ರಸಂಗಗಳನ್ನು ರಚಿಸಿ ಅತ್ಯಲ್ಪ 33 ವರ್ಷಗಳ ಜೀವಿತ ಅವದಿಯಲ್ಲಿ ಸಾದಿಸಿದ ತೋರಿಸಿದ ಅಪರೂಪದ ಅಪ್ರತಿಮ ಪ್ರತಿಭೆಯೇ ಸರಿ.

ನಾವಡರು ರಂಗದ ಹಿಡಿತದೊಂದಿಗೆ ಯಕ್ಷಗಾನದ ವರ್ಚಸ್ಸಿಗೆ ಚ್ಯುತಿ ಬಾರದ ಹಾಗೆ ಸಮಯಪ್ರಜ್ನೆಯೊಂದಿಗೆ ರಸಾಭಾಸವಾಗದಂತೆ ಹೊಸ ರಾಗಗಳನ್ನು ಬಳಸಿ ಯಕ್ಷಗಾನಕ್ಕೆ ಹೆಚ್ಚಿನ ಮೆರುಗನ್ನು ತಂದಿದ್ದಾರೆ. ತಂದೆಯಿಂದ ಬಂದ ಕುಂಜಾಲು ಶೈಲಿಯ ಭಾಗವತಿಕೆಯೊಂದಿಗೆ ಗುರುವಿನಿಂದ ಬಂದ ಮಾರ್ವಿ ಶೈಲಿಯನ್ನು ಪ್ರಸಂಗಕ್ಕನುಗುಣವಾಗಿ ಸಮರ್ಥವಾಗಿ ಬಳಸಿಕೊಂಡ ಭಾಗವತರವರು. ಪೌರಾಣಿಕ ಪ್ರಸಂಗದಲ್ಲಿ ಅಪಾರ ಹಿಡಿತವಿದ್ದ ಅವರ ಭಾಗವತಿಕೆಯಲ್ಲಿ ಜಾನುವಾರುಕಟ್ಟೆ ಭಾಗವತರ ರಾಗದಛಾಯೆಯನ್ನು ಗುರುತಿಸಬಹುದಾಗಿದೆ.

ರೇವತಿ, ಚಾಂದ್, ಬಹುದಾರಿ, ಹಂಸದ್ವನಿ, ಬೇಹಾಗ್ ಮುಂತಾದ ಯಕ್ಷಗಾನದಲ್ಲಿ ಚಾಲ್ತಿ ಇಲ್ಲದ ರಾಗವನ್ನು ಯಕ್ಷಗಾನಕ್ಕೆ ಅಳವಡಿಸಿದ್ದೂ ಅಲ್ಲದೆ, ಹಳೆಯ ರಾಗಕ್ಕೆ ಹೊಸ ಸಂಚಾರವನ್ನೂ ಮೂಡಿಸಿದವರು. ಮದ್ಯ ಪ್ರಾಂತ್ಯದ ಐರೋಡಿ ಗೋವಿಂದಪ್ಪ, ಕೊಪ್ಪಾಟೆ ಮುತ್ತ, ಅರಾಟೆ ಮಂಜುನಾಥ, ಕೋಟವೈಕುಂಟ. ನಗರ ಜಗನ್ನಾಥ ಶೆಟ್ಟಿ ರಾಮ ನಾಯರಿ, ಕೋಡಿ ವಿಶ್ವನಾಥ, ಕೋಟ ಸುರೇಶ, ಮುಂತಾದ ಕಲಾವಿದರನ್ನು ಬಳಸಿಕೊಂಡು ನಡುತಿಟ್ಟಿನ ಶೈಲಿಯ ಯಕ್ಷಗಾನವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ನೀಡಿದ ಕೀರ್ತಿ ನಾವಡರಿಗೆ ಸಲ್ಲುತ್ತದೆ.

ಕರ್ನಾಟಕ ಸರ್ಕಾರ 1990ರಲ್ಲಿ ಮರಣೋತ್ತರವಾಗಿ ಅವರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ ಲಕ್ಷಾಂತರ ಸಿ. ಡಿ, ಕ್ಯಾಸೆಟ್, ಮೊಬೈಲ್, ಇಂಟರ್ ನೆಟ್ ಮೂಲಕ ಅವರ ಕಂಠ ಸಿರಿಯನ್ನು ಅನುಭವಿಸುವ ನಾವು ಶಾಶ್ವತವಾಗಿ ಅವರ ನೆನಪಿಗೆ ಏನೂ ಮಾಡಲಿಲ್ಲ ಎಂಬುದು ದುರಂತವೇ. ಯಕ್ಷಗಾನ ರಂಗಕ್ಕೆ ನಾವಡರ ಕ್ರೆಡಿಟ್ ದೊಡ್ಡದಾದರೂ ಯಕ್ಷಗಾನ ಪ್ರೇಮಿಗಳ ಡೆಬಿಟ್ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ ಅನ್ನುವುದೇ ದೌರ್ಬಾಗ್ಯ. ನಾವಡರ ಅಗಲಿಕೆಯ 25ನೇ ವರ್ಷದ ಸಂದರ್ಭದಲ್ಲಿ ನಾವಡರನ್ನು ನೆನಪಿಸುವ ಕಾರ್ಯಕ್ರಮಗಳು ತುರ್ತಾಗಿ ಆಗಬೇಕಾಗಿರುವುದು ಅನಿವಾರ್ಯ

*********************ಚಿತ್ರ ಕೃಪೆ : ಸುದೇಶ್ ಶೆಟ್ಟಿ


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
shridhar(8/16/2015)
its nice. I know now what is the baylataa.. thank u.
srinivas poojary(8/16/2015)
nice
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ