ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಶಿರಸಿ: ರಾಮಾಂಜನೇಯ ಕಾಳಗದ ವಾಗ್ವೆಖರಿ ಆಸ್ವಾದನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಆಗಸ್ಟ್ 30 , 2015
ಆಗಸ್ಟ್ 30, 2015

ಶಿರಸಿ: ರಾಮಾಂಜನೇಯ ಕಾಳಗದ ವಾಗ್ವೆಖರಿ ಆಸ್ವಾದನೆ

ಶಿರಸಿ : ಮತ್ತೊಂದು ಹೊಸ ಆಖ್ಯಾನವು ನಗರದ ಟಿಎಂಎಸ್ ಪ್ರಾಂಗಣದಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ಶ್ರೋತಗಳಲ್ಲಿ ಕುತೂಹಲ ಮೂಡಿಸಿತು. ಸತತ ಏಳನೆಯ ದಿನದಲ್ಲಿ ಕಿಕ್ಕಿರಿದು ಸೇರಿದ್ದ ಶ್ರೋತಗಳು ಕಥೆಯ ಜಾಡು ಹಿಡಿದು ಸಾಗಿ ಅರ್ಥಧಾರಿಗಳ ವಾಗ್ವೆಖರಿಯನ್ನು ಆಸ್ವಾದಿಸಿದರು.

ಯಕ್ಷ ಸಂಭ್ರಮ ತಾಳಮದ್ದಳೆ ಕೂಟವು ಹಮ್ಮಿಕೊಂಡಿರುವ ತಾಳಮದ್ದಳೆ ಸಪ್ತಾಹದ ಕೊನೆಯ ದಿನವಾದ ಶನಿವಾರ ಶ್ರೀರಾಮ-ಆಂಜನೇಯ ಕಾಳಗನ್ನು ದಕ್ಷಿಣೋತ್ತರ ಕನ್ನಡ ಜಿಲ್ಲೆಯ ನುರಿತ ಕಲಾವಿದರು ಪ್ರಸ್ತುತ ಪಡಿಸಿದರು. ವಿವಿಧ ಪಾತ್ರಗಳನ್ನು ಮಾತಿನಲ್ಲಿ ಕಟ್ಟಿಕೊಟ್ಟು ಕೇಳುಗರಿಗೆ ಮುದ ನಿಡಿದರು.

ಶಕುಂತ ಎಂಬ ಅರಸು ಬಿಟ್ಟ ಬಾಣಕ್ಕೆ ಬಲಿಯಾದ ಪಕ್ಷಿಯು ಮಹರ್ಷಿ ವಿಶ್ವಾಮಿತ್ರ ನಡೆಸುತ್ತಿದ್ದ ಹೋಮಕುಂಡದಲ್ಲಿ ಬೀಳುವದು, ಕೆಂಡಾಮಂಡಲನಾದ ವಿಶ್ವಾಮಿತ್ರ ಋಷಿ ಈ ಅವಘಡಕ್ಕೆ ಕಾರಣನಾದ ವ್ಯಕ್ತಿಯನ್ನು ಶ್ರೀರಾಮನ ಮೂಲಕ ಕೊಲ್ಲಿಸುವದಾಗಿ ಶಪಥ ಮಾಡುವದು ಆಖ್ಯಾನದಲ್ಲಿ ಗಮನಸೆಳೆಯುವ ಪ್ರಸಂಗ.

ನಂತರದಲ್ಲಿ ಅರಸು ಶಕುಂತ ಅಂಜನಾದೇವಿಯ ಮೊರೆ ಹೋದಾಗ ಆಕೆ ತನ್ನ ಪುತ್ರ ಹನುಮಂತನ ಮೂಲಕ ರಕ್ಷಣೆ ಕೊಡಿಸುವದಾಗಿ ಭರವಸೆ ನೀಡುವದು, ರಾಮಭಕ್ತ ಹನುಮಂತ ತಾಯಿಯ ಆಸೆಯಂತೆ ಶಕುಂತ ಅರಸನ ರಕ್ಷಣೆಗೆ ತನ್ನ ಆರಾಧ್ಯ ದೆವ ಶ್ರೀರಾಮನ ವಿರುದ್ಧವೇ ಕಾಳಗ ನಡೆಸಬೇಕಾದ ಸಂದಿಗ್ಧತೆ ಎದುರಿಸುವದು ಈ ಆಖ್ಯಾನದ ಕಥಾನಕ.

ಅಂತೆಯೇ ವಿವಿಧ ಪಾತ್ರಗಳ ಅರ್ಥಗಾರಿಕೆಯನ್ನು ವಿ. ಉಮಾಕಾಂತ ಭಟ್ಟ ಕೆರೇಕೆ (ಶ್ರೀರಾಮ), ವಾಸುದೇವ ರಂಗ ಭಟ್ಟ (ಹನುಮಂತ), ಪ್ರೊ.ಎಂ.ಎ.ಹೆಗಡೆ (ಸುಗ್ರೀವ), ಅಶೋಕ ಭಟ್ಟ ಸಿದ್ದಾಪುರ ಸೀತೆ, ಅರುಣಕುಮಾರ ಬೆಂಟದಹಳ್ಳಿ (ಅಂಜನಾದೇವಿ), ಸೀತಾರಾಮ ಚಂದು (ವಿಶ್ವಾಮಿತ್ರ), ಎಂ.ವಿ.ಹೆಗಡೆ ಅಮಚಿಮನೆ (ನಾರದ) ಮತ್ತು ರವಿಶಂಕರ ದೊಡ್ನಳ್ಳಿ (ಶಕುಂತ) ಅರ್ಥಪೂರ್ಣವಾಗಿ ಪ್ರಸ್ತುತ ಪಡಿಸಿದರು. ಹಿಮ್ಮೇಳದಲ್ಲಿ ಅನಂತ ಹೆಗಡೆ ದಂತಳಿಗೆ, ಶಂಕರ ಭಾಗವತ ಯಲ್ಲಾಪುರ, ಪ್ರಸನ್ನ ವೆದ್ಯ ಮುಂತಾದ ಕಲಾವಿದರು ಭಾಗವಹಿಸಿದ್ದರು.

ಹಿರಿಯ ಕಲಾವಿದನಿಗೆ ಸನ್ಮಾನದ ಗೌರವ ಟಿಎಂಎಸ್ ಸಭಾಂಗಣದಲ್ಲಿ ಸತತ ಏಳು ದಿನಗಳ ಕಾಲ ನಡೆದ ತಾಳಮದ್ದಳೆ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಯಕ್ಷಗಾನದ ಆಟ ಮತ್ತು ತಾಳಮದ್ದಳೆಯ ಎರಡೂ ಪ್ರಕಾರಗಳಲ್ಲಿ ನುರಿತ ಹಿರಿಯ ಕಲಾವಿದ ರಾಧಾಕಷ್ಣ ಭಟ್ಟ ಸೂರನಕೇರಿ ಅವರನ್ನು ಸನ್ಮಾನಿಸಲಾಯಿತು. ಕಲೆಯನ್ನು ಶ್ರದ್ಧೆಯಿಂದ ಪೂಜಿಸಿದ್ದಕ್ಕೆ ಪ್ರಸಾದವಾಗಿ ಸನ್ಮಾನದ ಗೌರವ ದೊರೆತಿದೆ ಎಂದು ಭಾವಿಸುತ್ತೇನೆ. ಚಾರಿತ್ರ್ಯ ಶುದ್ಧರಾಗಿ ಕಲೆಯ ಆರಾಧನೆ ಮಾಡುತ್ತಿದ್ದರೆ ಸಂತೋಷ, ಮನ್ನಣೆಯ ನೆಮದಿ ದೊರೆಯುತ್ತಿರುತ್ತದೆ ಎಂದರು. ಟಿಎಂಎಸ್ ಸಂಸ್ಥೆ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಿದ್ದರು. ತಾಳಮದ್ದಳೆ ಸಪ್ತಾಹ ಸಂಘಟನೆ ಈ ಭಾಗಕ್ಕೆ ಅಪರೂಪದ್ದಾಗಿದ್ದು ಕಲಾಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತ ಬಂದದ್ದು ಸಂತೋಷ ತಂದಿದೆ ಎಂದರು. ಅತಿಥಿಗಳಾಗಿ ಉಪೇಂದ್ರ ಪೆ, ಎ.ರವೀಂದ್ರ ನಾಯ್ಕ, ಪಾಲ್ಗೊಂಡರು. ಯಕ್ಷ ಸಂಭ್ರಮ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಉಪಸ್ಥಿತರಿದ್ದರು. ಸಾಹಿತಿ ಜಿ. ಮಹಾಬಲೇಶ್ವರ ಭಟ್ಟ ನಡಗೋಡ ಸಪ್ತಾಹದ ಅವಲೋಕನ ನೀಡಿದರು. ಸಂಘಟನೆಯ ಪದಾಧಿಕಾರಿಗಳಾದ ಸೀತಾರಾಮ ಚಂದು ಮತ್ತು ಎಂ.ವಿ.ಹೆಗಡೆ ಅಮಚಿಮನೆ ನಿರೂಪಿಸಿದರು.


ಕೃಪೆ : vijaykarnataka.com

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ