ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಸಮಿತಿ ಉದ್ಘಾಟನೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 30 , 2015
ಒಕ್ಟೋಬರ್ 30, 2015

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಸಮಿತಿ ಉದ್ಘಾಟನೆ

ಮುಂಬಯಿ : ಪ್ರಸ್ತುತ ವಿಶ್ವಪ್ರಸಿದ್ಧಿ ಪಡೆದಿರುವ ಕರ್ನಾ ಟಕದ ಗಂಡುಕಲೆಯಾಗಿರುವ ಯಕ್ಷ ಗಾನ ಮತ್ತು ಯಕ್ಷಕಲಾವಿದರ ಶ್ರೇಯೋ ಭಿವೃದ್ಧಿಗೆ ಸ್ಥಾಪನೆಗೊಂಡಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಉದ್ಘಾಟನೆಗೊಂಡಿದ್ದು, ಪ್ರಸ್ತುತ ಮುಂಬಯಿ ಸಮಿತಿಯು ರಚನೆಗೊಂಡಿರುವುದು ಹೆಮ್ಮೆಯ ವಿಷಯ. ಇದು ಓರ್ವ ಕಲಾವಿದನಿಂದ, ಕಲಾವಿದರಿಗಾಗಿ, ಕಲಾವಿದರಿಗೋಸ್ಕರ ಹುಟ್ಟಿಕೊಂಡು ಸಂಸ್ಥೆೆ. ಕಲಾವಿದರ ಕಷ್ಟ, ಕಾರ್ಪಣ್ಯಗಳನ್ನು ಹತ್ತಿರದಿಂದ ಬಲ್ಲಂತಹ ಕಟೀಲು ಮೇಳದ ಖ್ಯಾತ ಭಾಗವತ ಸತೀಶ್‌ ಶೆಟ್ಟಿ ಪಟ್ಲ ನೇತೃತ್ವದ ಈ ಟ್ರಸ್ಟ್‌ನ ಸಮಿತಿ ಮುಂಬಯಿಯಲ್ಲಿ ಸ್ಥಾಪನೆಗೊಂಡಿರುವುದು ಇಲ್ಲಿನ ಯಕ್ಷಗಾನ ಕಲಾವಿದರಿಗೂ ಹೆಮ್ಮೆಯ ಸಂಗತಿಯಾಗಿದೆ. ಸಮಿತಿಯು ಅಶಕ್ತ ಕಲಾವಿದರಿಗೆ ಆರ್ಥಿಕವಾಗಿ ಸಹಕರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಅದಕ್ಕಾಗಿ ಮುಂಬಯಿಯ ಎಲ್ಲ ಕಲಾಭಿಮಾನಿಗಳು, ಕಲಾಪೋಷಕರು ಈ ಯೋಜನೆಯ ಯಶಸ್ಸಿಗೆ ಸಹಕರಿಸಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು.

ಅ. 28ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಂಬಯಿ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತೀಶ್‌ ಶೆಟ್ಟಿ ಪಟ್ಲ ಅಶಕ್ತ ಕಲಾವಿದರ ಬಾಳಿಗೆ ಬೆಳಕಾಗಿ ನಿಲ್ಲುವ ಉದಾರ ಮನಸ್ಸಿ ನಿಂದ ಅವರ ಅಭಿಮಾನಿಗಳನ್ನು ಒಂದುಗೂಡಿಸಿ ಈ ಬೃಹತ್‌ ಯೋಜ ನೆಗೆ ಮುಂದಾಗಿರುವುದು ಅಭಿನಂದ ನೀಯ. ಬಂಟರ ಸಂಘ ದಿಂದ ಈ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ಲಭಿಸಲಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿ-ಗಣ್ಯರು ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಸಮಿತಿಯನ್ನು ದೀಪ ಬೆಳಗಿಸಿ ಉದ್ಘಾ ಟಿಸಿದರು. ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘಗಳ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉದ್ಯಮಿ ಎರ್ಮಾಳ್‌ ಹರೀಶ್‌ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ನ ಮುಂಬಯಿ ಸಂಯೋಜಕರಾದ ಐಕಳ ಗಣೇಶ್‌ ಶೆಟ್ಟಿ ಮತ್ತು ಅಶೋಕ್‌ ಇಂಡಸ್ಟ್ರೀಸ್‌ನ ಅಶೋಕ್‌ ಶೆಟ್ಟಿ ಪೆರ್ಮುದೆ, ಬಂಟರ ಸಂಘ ಮಧ್ಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ, ಉದ್ಯಮಿ, ಸಮಾಜ ಸೇವಕ ಕರ್ನಿರೆ ಶ್ರೀಧರ ಶೆಟ್ಟಿ, ಬೆಳ್ಮಣ್‌ ಬಂಟರ ಸಂಘದ ಅಧ್ಯಕ್ಷ ಸುಹಾಸ್‌ ಹೆಗ್ಡೆ, ಸಿಎ ಸುರೇಂದ್ರ ಶೆಟ್ಟಿ, ಕಳತ್ತೂರು ವಿಶ್ವನಾಥ ಶೆಟ್ಟಿ, ಶ್ರೀ ರಜಕ ಸಂಘದ ದೇವೇಂದ್ರ ಬುನ್ನನ್‌ ಮೊದಲಾದವರಿದ್ದರು.

ಅತಿಥಿಗಳನ್ನು ಟ್ರಸ್ಟ್‌ ವತಿಯಿಂದ ಪುಷ್ಪಗುತ್ಛವಿತ್ತು ಗೌರವಿಸಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಮುಂಬಯಿ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಹೆಸರನ್ನು ಅಶೋಕ್‌ ಪಕ್ಕಳ ಘೋಷಿಸಿದರು.

ಬಂಟರ ಸಂಘ ಮುಂಬಯಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು, ಸದಸ್ಯೆ ಯರು, ಸಂಘದ ಒಂಬತ್ತು ಪ್ರಾದೇ ಶಿಕ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿ ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಕಲಾವಿದರು ಉಪಸ್ಥಿತರಿದ್ದರು.

ಟ್ರಸ್ಟ್‌ ಉದ್ದೇಶವಿದು

ಟ್ರಸ್ಟ್‌ನ ಉದ್ದೇಶವನ್ನು ವಿವರಿಸಿದ ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಅವರು, ಪಟ್ಲ ಅವರು ಯುವಜನತೆಯನ್ನು ಯಕ್ಷಗಾನದತ್ತ ವಾಲುವಂತೆ ಮಾಡಿದ ಓರ್ವ ಮಹಾನ್‌ ಭಾಗವತ. ನೊಂದವರು, ಅಶಕ್ತ ಕಲಾವಿದರ ಏಳ್ಗೆಯ ಬಗ್ಗೆ ತುಡಿತವುಳ್ಳ ಸತೀಶ್‌ ಪಟ್ಲ ಅವರು ತಮ್ಮ ಅಪಾರ ಅಭಿಮಾನಿಗಳನ್ನು ಒಟ್ಟು ಸೇರಿಸಿಕೊಂಡು ತೆಂಕು ಮತ್ತು ಬಡಗುತಿಟ್ಟುವಿನ ಎಲ್ಲ ಕಲಾವಿದರ ಅಭ್ಯುದಯಕ್ಕಾಗಿ ಶ್ರಮಿಸುವ ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟ್‌ ಸ್ಥಾಪಿಸಿ ಈಗಾಗಲೇ ಹಲವಾರು ಮಂದಿ ಕಲಾವಿದರಿಗೆ ಆರ್ಥಿಕವಾಗಿ ಸಹಕರಿಸಿದ್ದಾರೆ. ಸುಮಾರು 6 ಕೋ. ರೂ. ಗಳಿಗಿಂತ ಅಧಿಕ ಮೊತ್ತವನ್ನು ಕಲಾವಿದರ ಶಾಶ್ವತ ನಿಧಿಯ ಹೆಸರಿನಲ್ಲಿ ಸಂಗ್ರಹಿಸಿ ಆ ಮೊತ್ತದಿಂದ ಬರುವ ವಾರ್ಷಿಕ ಆದಾಯ ಬಡ್ಡಿಯನ್ನು ಕಲಾವಿದರು ಹಾಗೂ ಅವರ ಮಕ್ಕಳ ಶಿಕ್ಷಣ, ವೈದ್ಯಕೀಯ, ವಿವಾಹ ಇತ್ಯಾದಿ ಕಾರ್ಯಗಳಿಗಾಗಿ ವಿನಿಯೋಗಿಸಿ ಕಲಾವಿದರ ಬದುಕಿಗೆ ದಾರಿದೀಪವಾಗುವ ಮಹತ್ಸಾಧನೆಗೆ ಮುಂದಾಗಿದ್ದಾರೆ ಎಂದರು.ಕೃಪೆ : udayavani

Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ