ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಮಂಗಳ ಪ್ರಶಸ್ತಿ ಪಾತ್ರರು

ಲೇಖಕರು : ಎಲ್‌. ಎನ್‌. ಭಟ್‌ ಮಳಿಯ
ಶುಕ್ರವಾರ, ನವ೦ಬರ್ 6 , 2015

ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಸಕ್ತ ವರ್ಷದ ``ಯಕ್ಷಮಂಗಳ`` ಪ್ರಶಸ್ತಿಗೆ ಐವರು ಸಾಧಕರು ಆಯ್ಕೆಯಾಗಿದ್ದಾರೆ.

ಹೊಸ್ತೋಟ ಮಂಜುನಾಥ ಭಾಗವತರು

ಹೊಸ್ತೋಟ ಮಂಜುನಾಥ ಭಾಗವತರು ಮಾರ್ಗೋಳಿ ಗೋವಿಂದ ಸೇರಿಗಾರ
ಯಕ್ಷಗಾನದ ಬಗ್ಗೆ ನಿರಂತರ ಅಧ್ಯಯನ, ಭಾಗವತಿಕೆ, ಮದ್ದಳೆ ವಾದನಗಳಲ್ಲಿ ಪ್ರಾವೀಣ್ಯಗಳಿಂದ ಪ್ರಬುದ್ಧ ರಂಗ ನಿರ್ದೇಶಕರಾಗಿ ಹೊಸ್ತೋಟರ ಕೊಡುಗೆ ಅನನ್ಯ. 250ಕ್ಕೂ ಮಿಕ್ಕಿ ಪ್ರಸಂಗ ರಚಿಸಿರುವ ಇವರ ಕವಿತಾಶಕ್ತಿ ಅಭಿನಂದನೀಯ. ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟ ಭಾಗವತರ ಚಟುವಟಿಕೆಗಳು ಯಶಸ್ವೀ ಪ್ರದರ್ಶನಗಳವರೆಗೆ ವಿಸ್ತಾರವಾಗಿವೆ. ಸಾಹಿತ್ಯ, ಛಂದಸ್ಸುಗಳ ಬಗ್ಗೆಯೂ ಇವರಿಗೆ ಅಪಾರ ಜ್ಞಾನವಿದೆ.

ವೀರಭದ್ರ ನಾಯಕ, ಕೊಕ್ಕರ್ಣೆ ನರಸಿಂಹ ಕಮಿ¤ ಎಂಬ ಉಭಯ ಗುರುಗಳಿಂದ ನಾಟ್ಯಾಭ್ಯಾಸ ಮಾಡಿ 13ರ ಎಳೆ ಹರೆಯದಲ್ಲೇ ಕಲಾವಿದರಾಗಿ ವೃತ್ತಿಗೆ ತೊಡಗಿದ ಗೋವಿಂದ ಸೇರಿಗಾರರು ಕಲಾರತ್ನರು. ಎಲ್ಲ ಬಗೆಯ ಸ್ತ್ರೀವೇಷಗಳನ್ನು ಚೆನ್ನಾಗಿ ನಿರ್ವಹಿಸಬಲ್ಲ ಸಮರ್ಥ ಸ್ತ್ರೀವೇಷ ಧಾರಿ. ವ್ಯವಸಾಯೀ ಕಲಾವಿದನಾಗಿ, ಗುರು ಗಳಾಗಿಯೂ ಕರ್ತವ್ಯ ನಿರ್ವಹಿಸಿದವರು. ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ, ಸಾಲಿಗ್ರಾಮ ಮೇಳದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿಯೂ ದೊರೆತಿರುವುದು ಇವರ ಕಲಾಶ್ರೀಮಂತಿಕೆಗೆ ದ್ಯೋತಕ.

ಸಂಪಾಜೆ ಶೀನಪ್ಪ ರೈ

ತೆಂಕುತಿಟ್ಟಿನ ಸಮರ್ಥ ಹಾಗೂ ಪರಿಪೂರ್ಣ ಕಲಾವಿದರೆಂದು ಖ್ಯಾತರಾದ ಶೀನಪ್ಪರೈ ಅವರು ಕುಂಬಳೆ ಕಣ್ಣನ್‌ ಅವರಿಂದ ನಾಟ್ಯ, ಬಣ್ಣದ ಕುಟ್ಯಪ್ಪು ಅವರಿಂದ ಬಣ್ಣಗಾರಿಕೆ ಮತ್ತು ಮಾಸ್ಟರ್‌ ಕೇಶವ ಅವರಿಂದ ಭರತನಾಟ್ಯ ಕಲಿತವರು. 13ರ ಬಾಲಕನಾಗಿದ್ದಾಗಲೇ ರಂಗ ಪ್ರವೇಶ. ಮುಂದೆ ಪ್ರಮುಖ ವೇಷಗಳನ್ನು ರಂಗ ಸ್ಥಳ ದಲ್ಲಿ ಮೆರೆಸಿದ ಅಭಿಜಾತ ಕಲಾವಿದ. ಕುಂಡಾವು, ಸೌಕೂರು, ಕಟೀಲು, ಎಡನೀರು, ಪ್ರಸ್ತುತ ಹೊಸನಗರ ಮುಂತಾದ ಮೇಳ ಗಳಲ್ಲಿ ವೃತ್ತಿ ಕಲಾವಿದನಾಗಿ ಸೇವೆ. ರಾಜಗಾಂಭೀರ್ಯ, ಪ್ರಬುದ್ಧ ನಾಟ್ಯ, ಒಳ್ಳೆಯ ಮಾತುಗಾರಿಕೆ ಸಹಿತ ಪ್ರಧಾನ ಪಾತ್ರಗಳಿಗೆ ಬೇಕಾದ ಬಹುತೇಕ ಗುಣಗಳು ರೈ ಅವರಲ್ಲಿ ಮೇಳೈಸಿವೆ.

ಸಂಪಾಜೆ ಶೀನಪ್ಪ ರೈ ಲೀಲಾವತಿ ಬೈಪಡಿತ್ತಾಯ

ಲೀಲಾವತಿ ಬೈಪಡಿತ್ತಾಯ

ಮಧೂರು ಪದ್ಮನಾಭ ಸರಳಾಯರಿಂದ ಶಾಸ್ತ್ರೀಯ ಸಂಗೀತ ಅಭ್ಯಾಸ, ಪತಿ ಹರಿನಾರಾಯಣ ಬೈಪಡಿತ್ತಾಯರಿಂದ ಯಕ್ಷಗಾನ ಭಾಗವತಿಕೆ ಕಲಿತು ವೃತ್ತಿ ಕೈಗೊಂಡರು. ಪುತ್ತೂರು, ಅರುವ, ಕುಂಬ್ಳೆ, ಸುಬ್ರಹ್ಮಣ್ಯ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಲಾನುಭವ ಇವರದು. ಇವರಿಗೆ ಪತಿ, ಮದೆ ಗಾರ ಹರಿನಾರಾಯಣ ಬೈಪಡಿತ್ತಾಯರ ಪ್ರೋತ್ಸಾಹ ಶ್ಲಾಘನೀಯ. ರಂಗ ನಿರ್ದೇಶನ ದಲ್ಲಿ ಮಾತೃಸ್ಥಾನದ ಹಿರಿಮೆಯನ್ನು ಸಾಕಾರಗೊಳಿಸಿದ ಬೈಪಡಿತ್ತಾಯರ ಸಾಧನೆ ಕಲಾಸಕ್ತ ಮಹಿಳೆಯರಿಗೆ ಆದರ್ಶ.

ಮೋಹನ ಕುಂಟಾರು

ಮೋಹನ ಕುಂಟಾರು

"ಯಕ್ಷಗಾನ ಸ್ಥಿತ್ಯಂತರ' ಎಂಬ ಗ್ರಂಥಕ್ಕಾಗಿ ಪ್ರೊ| ಮೋಹನ ಕುಂಟಾರು ಅವರಿಗೆ ಯಕ್ಷಮಂಗಳ ಕೃತಿ ಪುರಸ್ಕಾರ. 23 ಪ್ರಬುದ್ಧ ಲೇಖನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಯಕ್ಷಗಾನ ಸಾಂಸ್ಕೃತಿಕ ವಿಶೇಷತೆ, ಪ್ರಯೋಗ, ಪ್ರದರ್ಶನಗಳ ಬಗ್ಗೆ ವಿಸ್ತೃತ ಮಾಹಿತಿಗಳಿವೆ. ಕಲೆಗೂ ಧಾರ್ಮಿಕತೆಗೂ ಇರುವ ಬೆಸುಗೆಗಳ ಬಗ್ಗೆಯೂ ವಿವರಗಳಿವೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇದೇ ನ.7ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುತ್ತದೆ. ನಾಲ್ವರು ಯಕ್ಷಗಾನ ಸಾಧಕರಿಗೆ 25 ಸಾವಿರ ರೂ. ನಗದು, ಸ್ಮರಣಿಕೆ ಸಹಿತ ಕೊಡಮಾಡಲ್ಪಡುವ ಈ ಪ್ರಶಸ್ತಿ ಅರ್ಹ ಪುರಸ್ಕಾರ. 10 ಸಾವಿರ ರೂ. ನಗದು ಮತ್ತು ಸ್ಮರಣಿಕೆಯಿಂದ ಕೂಡಿದ ಯಕ್ಷ ಮಂಗಳ ಕೃತಿ ಪ್ರಶಸ್ತಿ ಯಕ್ಷಗಾನ ಗ್ರಂಥ ರಚನಾಸಕ್ತರಿಗೆ ಪ್ರೇರಕವಾಗಿದೆ. ಈ ಸಂದರ್ಭ ವಿದ್ಯಾರ್ಥಿಗಳು "ಸಾಯುಜ್ಯ ಸಂಗ್ರಾಮ' ಯಕ್ಷಗಾನವನ್ನು ಪ್ರದರ್ಶಿಸುತ್ತಾರೆ.

*********************


ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ