ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಕಟೀಲು ಆರು ಮೇಳಗಳ ತಿರುಗಾಟ ಆರಂಭ

ಲೇಖಕರು : ಪ್ರಜಾವಾಣಿ
ಗುರುವಾರ, ನವ೦ಬರ್ 19 , 2015
ನವ೦ಬರ್ 19, 2015

ಕಟೀಲು ಆರು ಮೇಳಗಳ ತಿರುಗಾಟ ಆರಂಭ

ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇಗುಲದ ಆರು ಮೇಳಗಳ ತಿರುಗಾಟಕ್ಕೆ ಬುಧವಾರ ದೇಗುಲದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಪ್ರತಿ ಮೇಳದ ತಲಾ ಎರಡು ಕಲಾವಿದರಿಗೆ ಗೆಜ್ಜೆ ನೀಡುವ ಮೂಲಕ ಚಾಲನೆ ನೀಡಿದರು.

ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾ ದೇವಿ ಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಕುಮಾರ ಆಸ್ರಣ್ಣ, ತಂತ್ರಿಗಳಾದ ವೇದವ್ಯಾಸ ತಂತ್ರಿ, ಮೇಳದ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ, ಬಲಿಪ ನಾರಾಯಣ ಭಾಗವತ, ಉದ್ಯಮಿ ಮರವೂರು ಜಗದೀಶ ಶೆಟ್ಟಿ, ಹರಿಕೃಷ್ಣ ಪುನರೂರು, ವೇದವ್ಯಾಸ ಉಡುಪ, ಭುವನಾಭಿರಾಮ ಉಡುಪ, ಮೋಹನ್‌ ಮೆಂಡನ್‌, ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ, ಅನಿಲ್‌ ಶೆಟ್ಟಿ, ಪ್ರಬಂಧಕ ವಿಜಯಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಮೇಳ ಹೊರಡುವ ದಿನ ಬೆಳಗ್ಗೆ ದೇವರ ಪೂಜಾ ಕಿರೀಟಗಳ ಪ್ರತಿಷ್ಠೆ, ಸಾಯಂಕಾಲ ಪ್ರತಿ ಮೇಳದ ಭಾಗವತರಿಂದ ದೇಗುಲದಲ್ಲಿ ಪ್ರತ್ಯೇಕ ಪ್ರತ್ಯೇಕ ಗಣಪತಿ ಸ್ತುತಿ, ದುರ್ಗಾಸುತ್ತಿ, ದೇವರ ಎದುರು ಭಾಗವತರಿಗೆ ಕಲಾವಿದರಿಗೆ ಸೀರೆ ಪ್ರಸಾದ ನೀಡುವುದು, ದೇವರ ಪೂಜೆ, ದೇವರ ಪ್ರಸಾದ ಹಾಕಿ ಅರ್ಚಕರಾದ ಆಸ್ರಣ್ಣರು ಭಾಗವತರಿಗೆ ಜಾಗಟೆ ನೀಡಿದ ಬಳಿಕ, ಮೇಳದ ತಲಾ ಎರಡು ಕಲಾವಿದರಿಗೆ ಗೆಜ್ಜೆ ನೀಡಲಾಯಿತು, ಕಲಾವಿದರು ಗೆಜ್ಜೆ ಕಟ್ಟಿ ದೇವರ ಎದುರು ಕುಣಿದು, ಮೇಳದ ಗಣಪತಿ ದೇವರ ಎದುರು, ಬಳಿಕ ಚೌಕಿ ಪೂಜೆ ನಡೆದು ಆರಂಭದಲ್ಲಿ ಎಲ್ಲ ಆರು ರಂಗಸ್ಥಳಗಳಲ್ಲಿ ಏಕಕಾಲದಲ್ಲಿ ಪ್ರತ್ಯೇಕ ಕುಣಿದು, ಪೀಠಿಕೆ ವೇಷದ ಬಳಿಕ ಒಂದೇ ರಂಗಸ್ಥಳದಲ್ಲಿ ಪಾಂಡವಾಶ್ವಮೇಧ ಯಕ್ಷಗಾನ ಬಯಲಾಟ ನಡೆಯಿತು.ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
 ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ