ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಬಾಳಪ್ಪಶೆಟ್ಟಿ ಪ್ರಶಸ್ತಿ ಪಾತ್ರ ನುಳಿಯಾಲು ಸಂಜೀವ ರೈ

ಲೇಖಕರು :
ಭಾಸ್ಕರ ರೈ ಕುಕ್ಕುವಳ್ಳಿ
ಭಾನುವಾರ, ನವ೦ಬರ್ 22 , 2015

ಯಕ್ಷಗಾನದಲ್ಲಿ ಭಾಗವತರಿಂದ ಅನಂತರದ ಸ್ಥಾನ ಹಾಸ್ಯಗಾರರಿಗೇ ಸಲ್ಲುತ್ತದೆ. ಹಾಸ್ಯವೆಂದರೆ ನಕ್ಕು ನಗಿಸುವುದಲ್ಲ, ನಗದೆ ನಗಿಸುವುದು ಹಾಸ್ಯ. ಈ ಎರಡನೇ ವರ್ಗಕ್ಕೆ ಸೇರಿದ ವಿರಳ ಹಾಸ್ಯಗಾರರಲ್ಲಿ ದಿ| ಬೆಟ್ಟಂಪಾಡಿ ಬಾಳಪ್ಪಶೆಟ್ಟರು ಪ್ರಮುಖರು. ಅವರು ಗತಿಸಿ ಹತ್ತು ವರ್ಷ ಸಂದಿತು. ಇದೀಗ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಅವರ ದಶಕದ ಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಂಗಳೂರಿನಲ್ಲಿ ಆಯೋಜಿಸಿದೆ. ಈ ವರ್ಷ ಬಾಳಪ್ಪ ಶೆಟ್ಟಿ ಪ್ರಶಸ್ತಿಗೆ ಭಾಜನರಾದವರು ನುಳಿಯಾಲು ಸಂಜೀವ ರೈ.

ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಳೆ ಅರ್ಥ ಧಾರಿಯಾಗಿ ಪುತ್ತೂರು ಪರಿಸರದಲ್ಲಿ ಜನಪ್ರಿಯರಾಗಿರುವ ಸಂಜೀವ ರೈ ಮೂಲತಃ ಓರ್ವ ಶಿಕ್ಷಕರು. 1940ರಲ್ಲಿ ಜನಿಸಿದ ಅವರು 1961ರಲ್ಲಿ ಪುತ್ತೂರು ತಾಲೂಕಿನ ದೂಮಡ್ಕದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ದೈಹಿಕ ಶಿಕ್ಷಕ ಶಿಕ್ಷಣ ತರಬೇತಿ ಪಡೆದು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಶಾರೀರಿಕ ಶಿಕ್ಷಕರಾಗಿ 38 ವರ್ಷಗಳ ಸುದೀರ್ಘ‌ ಸೇವೆ ದಾಖಲಿಸಿದರು.

ಬಾಲ್ಯದಿಂದಲೇ ಯಕ್ಷಗಾನದ ಗೀಳನ್ನು ಅಂಟಿಸಿ ಕೊಂಡ ಸಂಜೀವ ರೈ ಹಿರಿಯ ವಿದ್ವಾಂಸ ಡಾ| ಡಿ. ಸದಾಶಿವ ಭಟ್ಟರ ಮಾರ್ಗದರ್ಶನದಲ್ಲಿ ಆಟ-ಕೂಟಗಳಲ್ಲಿ ಭಾಗ ವಹಿಸತೊಡಗಿದರು. ಶ್ರೀ ಸತ್ಯನಾರಾಯಣ ಯಕ್ಷಗಾನ ಕಲಾಕೂಟ ನಿಡ³ಳ್ಳಿ, ಬೆಟ್ಟಂಪಾಡಿ ಯುವಕ ಮಂಡಲ ಮತ್ತು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಮೂಲಕ ವಿಸ್ತಾರ ಹರವು ಪಡೆದರು. ಬೋಳಾರ ನಾರಾಯಣ ಶೆಟ್ಟರಿಂದ ಪ್ರಭಾವಿತರಾಗಿದ್ದ ಅವರು ಪ್ರಸಿದ್ಧ ಬೋಳಾರ ಶೈಲಿಯನ್ನು ನೆನಪಿಸುತ್ತಾರೆ. ಸಂಜೀವ ರೈ ಪ್ರಬುದ್ಧ ಅರ್ಥಧಾರಿಯಾಗಿ ಪ್ರತಿನಾಯಕ ಪಾತ್ರಗಳಲ್ಲಿ ವಿಜೃಂಭಿಸಿದ್ದಾರೆ.

ನುಳಿಯಾಲು ಸಂಜೀವ ರೈ ‌
ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಇದೇ ನ.21ರಂದು ದಿ| ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಪ್ರಶಸ್ತಿ ಪ್ರದಾನ ಜರಗಲಿದ್ದು, ನುಳಿಯಾಲು ಸಂಜೀವ ರೈ ಬಾಳಪ್ಪ ಶೆಟ್ಟಿ ದಶಕದ ಪ್ರಶಸ್ತಿ ಸ್ವೀಕರಿಸುವರು.

****************ಕೃಪೆ : udayavani


Share

ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ
ಪೂರಕ ಲೇಖನಗಳು
     ತಾಜಾ ಲೇಖನಗಳು
   
  ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
  ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
  ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
   
  © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ