ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಉದಯರಾಗ  

ಆತ್ಮೀಯ ವಲಯದಲ್ಲಿ ಮತ್ತು ಯಕ್ಷಗಾನ ಕಲಾವಿದರ ಗಡಣದಲ್ಲಿ ``ಉದಯಣ್ಣ`` ಎಂದೇ ಚಿರಪರಿಚಿತರಾದ ಪ್ರೋ. ಎಸ್. ವಿ ಉದಯ ಕುಮಾರ ಶೆಟ್ಟರು ಬಹುಮುಖ ಪ್ರತಿಭೆಯವರು. ವ್ರತ್ತಿಯಲ್ಲಿ ಮಣಿಪಾಲದ ಪ್ರತಿಷ್ಟಿತ ತಾಂತ್ರಿಕ ಕಾಲೇಜಾದ ಎಂ. ಐ. ಟಿ ಯಲ್ಲಿ ಪ್ರಾದ್ಯಾಪಕರಾದ ಇವರು ಪ್ರವ್ರತ್ತಿಯಲ್ಲಿ ಯಕ್ಷಗಾನ ಭಾಗವತರು. ವೇಷದಾರಿ, ಚಂಡೆವಾದಕರು, ಸ್ವತಹ ಯಕ್ಷಗಾನ ಲೇಕಕರು ಚಿಂತಕಕರು ಮತ್ತು ವಿಮರ್ಶಕರು. ಎತ್ತಣ ಮಾಮರ ಎತ್ತಣ ಕೋಗಿಲೆ ಅಂದಹಾಗೆ ಇಂಜಿನೀಯರಿಂಗ್ ನಲ್ಲಿ ಸ್ನಾತಕೊತ್ತರ ಎಂ. ಟೆಕ್. ಪದವಿ ಪಡೆದ ಇವರು ಒಂದಕೊಂದು ಸಂಬಂದವಿಲ್ಲದ ಯಕ್ಷಗಾನ ಕ್ಷೇತ್ರದಲ್ಲಿ ಕೃಷಿ ಮಾಡಿದ್ದು ಒಂದು ವಿಶೇಷತೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಇಂಜಿನೀಯರೊಬ್ಬರು ಯಕ್ಷಗಾನ ಕ್ಷೇತ್ರದಲ್ಲಿ ಈ ಮಟ್ಟದ ಸಾದನೆ ಮಾಡಿದ್ದು ಬೇರೆಲ್ಲಿಯೂ ಇಲ್ಲ ಎನ್ನ ಬಹುದಾಗಿದೆ. ಬಡಗುತಿಟ್ಟಿನ ಹವ್ಯಾಸಿ ಯಕ್ಷಗಾನ ರಂಗಭೂಮಿಯ ದಶಾವತಾರಿ ಎಂದು ಜನ ಇವರನ್ನು ಗುರುತಿಸಿದ್ದಾರೆ.


***************

ಲೇಖಕರ ಪ್ರಕಟಿತ ಲೇಖನಗಳು


ಕಣ್ಮರೆಯಾದ ಯಕ್ಷ ಭಂಡಾರ ಐರೋಡಿ ರಾಮ ಗಾಣಿಗ
ಯಕ್ಷಗಾನದ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾದ ಸುಮಾರು 95 ವರ್ಷ ಪ್ರಾಯದ ಹಿರಿಯ ಕಲಾಜೀವಿ ಶಿಕ್ಷಕ ರಾಷ್ಟೀಯ ಪ್ರಶಸ್ತಿ ಪುರಸ್ಕ್ರತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐರೋಡಿ ರಾಮ ಗಾಣಿಗರು ಇನ್ನಿಲ್ಲ. ಅಮೃತೇಶ್ವರಿ, ಸೌಕೂರು, ಮಂದಾರ್ತಿ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿ, ಬಳಿಕ ಶಿಕ್ಷಕ ವೃತ್ತಿಯತ್ತ ತೊಡಗಿದ ಗಾಣಿಗರು ರಾಷ್ಟೀಯ ಪ್ರಶಸ್ತಿ ಪುರಸ್ಕ್ರತರು. ಡಾ. ಶಿವರಾಮ ಕಾರಂತರೊಂದಿಗೆ ದೇಶ-ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದ್ದಾರೆ.
ಯಕ್ಷರಂಗದ ಯುವಪ್ರತಿಭೆ ಸಂತೋಷ ಕುಲಶೇಖರ ಇವರಿಗೆ ಯಕ್ಷಮೇನಕೆ ಪ್ರಶಸ್ತಿ
ಮೋಹಕ ರೂಪ ಆಳಂಗ ಸ್ತ್ರೀ ಸಹಜ ನಿಲುವು. ಭಾವಪೂರ್ಣ ಅಭಿನಯದಿಂದ ಸಹಸ್ರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು ತೆಂಕು ಬಡಗಿನ ಯುವ ಪ್ರತಿಭೆ ಸಂತೋಷ ಕುಲಶೇಖರ ಇವರು. ಅನೇಕ ಕಾರ್ಯಕ್ರಮದಲ್ಲಿ ತನ್ನ ಚುರುಕು ನೃತ್ಯದಿಂದ ಮನಸೆಳೆದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ ಮೋಹಕ ಕಲಾವಿದ ಸಂತೋಷ ಕುಲಶೇಖರ ಇವರಿಗೆ ``ಯಕ್ಷ ಮೇನಕಾ`` ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಣ್ಮರೆಯಾದ ಅಗ್ರಮಾನ್ಯ ಕಲಾವಿದ ಕೋಡಿ ಶಂಕರ ಗಾಣಿಗ
ಶ್ರೀ. ಕ್ಷೇತ್ರ ಮಂದಾರ್ತಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಮೇಳಕ್ಕೂ ಯಕ್ಷಗಾನ ಕಲೆಗೂ ಘನತೆಯನ್ನು ತಂದಿತ್ತು, ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ಗಳಿಸಿಕೊಟ್ಟ ರಾಷ್ಟಪ್ರಶಸ್ತಿ ವಿಜೇತ ದಿ. ಹಾರಾಡಿ ರಾಮ ಗಾಣಿಗರ ಮುಂದಿನ ತಲೆಮಾರಿನವರಾಗಿ ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ರಾಮಗಾಣಿಗರಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿದ ಅದೇ ಕುಟುಂಬದ ಸದಸ್ಯ ಕೋಡಿ ಶಂಕರಗಾಣಿಗರು ಇನ್ನಿಲ್ಲವಾಗಿದ್ದಾರೆ. ಹಾರಾಡಿ ಹಾಗು ಮಟ್ಪಾಡಿ ತಿಟ್ಟುಗಳ ಎಲ್ಲ ಕಲಾವಿದರ ಒಡನಾಡಿಯಾದ ಇವರು ಜೋಡಾಟದಲೂ ಮೂರು ನಾಲ್ಕು ವೇಷ ಮಾಡಿ ತೀರ್ಪುಗಾರರಿಂದ ಸೈ ಎಣಿಸಿಕೊಂಡವರು.
ಹಿರಿಯ ಯಕ್ಷಗಾನ ತಜ್ಞ - ಯಕ್ಷಾನುಭವಿ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ
-
ರಾಜಾಂಗಣದಲ್ಲಿ ರಂಜಿಸಿದ ಧಾರೇಶ್ವರ ಯಕ್ಷಬಳಗದವರ ಶ್ರೀ ಕೃಷ್ಣ ಅಷ್ಟಾಹ
ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಬಡಗುತಿಟ್ಟಿನ ಹಿರಿಯ ಭಾಗವತ ಧಾರೇಶ್ವರರ ಸಾರಥ್ಯದಲ್ಲಿ ಧಾರೇಶ್ವರ ಬಳಗದವರು ಎಂಟು ದಿನ ಉಡುಪಿ ರಾಜಾಂಗಣದಲ್ಲಿ ಪ್ರದರ್ಶಿಸಿದ ಶ್ರೀ ಕೃಷ್ಣನ ಬಾಲಲೀಲೆಯಿಂದ ಆರಂಬಿಸಿ ಪ್ರಭುದ್ದ ರಾಜಕಾರಿಣಿಯಾದ ಶ್ರೀಕೃಷ್ಣ, ಕೌರವ ಪಾಂಡವರ ನಡುವೆ ಸಂದಾನ ನಡುಸುವವರೆಗೆ ವಿವಿಧ ಪ್ರಸಂಗಗಳು ಹಲವಾರು ದಾಖಲಿಸುವ ಅಂಶಗಳೊಂದಿಗೆ ಸಹ್ರದಯ ಯಕ್ಷಗಾನಾಭಿಮಾನಿಗಳ ಮನತಣಿಸುವಲ್ಲಿ ಯಶಸ್ವಿಯಾಯಿತು. ಎಂಟು ದಿನ ಶ್ರೀ ಕೃಷ್ಣನ ಜನ್ಮ-ಬಾಲ್ಯ-ವಿವಾಹ-ಪ್ರಭುದ್ದತೆಯ ಮೇಲೆ ಬೆಳಕು ಚೆಲ್ಲುವ ಎಂಟು ಕಥಾನಕಗಳು ಇಂತಹ ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ಯಶಸ್ವಿ ಪ್ರಯೋಗ ಎನ್ನಬಹುದು. ಈ ನಿಟ್ಟಿನಲ್ಲಿ ಶ್ರೀ ದಾರೇಶ್ವರ ಯಕ್ಷ ಬಳಗದ ಸರ್ವ ಸದಸ್ಯರೂ ಅಭಿನಂದನಾರ್ಹರು.
ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾಯರಿಗೆ ತೊಂಬತ್ತೇಳರ ಸಂಭ್ರಮ
-
ಕಾಳಿಂಗ ನಾವಡರು ಸೃಷ್ಟಿಸಿದ ಭಾಗವತಿಕೆಯ ಹೊಸ ಶೈಲಿ
ಯಕ್ಷಗಾನ ಭಾಗವತಿಯಲ್ಲಿ ಕ್ರಾಂತಿ ಮೂಡಿಸಿದ 25 ವರ್ಷದ ಹಿಂದೆ ನಮ್ಮನ್ನಗಲಿದ, ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ಥಕ ಕಾಳಿಂಗ ನಾವಡರು ಯಕ್ಷಗಾನ ಭಾಗವತಿಕೆಗೆ ಹೊಸದೊಂದು ಶೈಲಿಯನ್ನು ಹುಟ್ಟು ಹಾಕಿದವರು. ತಮ್ಮ ಕಂಚಿನ ಕಂಠದಿಂದ ಹೊಸ ಹೊಸ ಯಕ್ಷಗಾನೇತರ ರಾಗಗಳನ್ನು ಪರಿಚಯಿಸಿದ ಇವರು ಭೈರವಿ, ಮಧ್ಯಮಾವತಿ, ಮೋಹನ, ಬಿಲಹರಿ, ಸಾವೇರಿ, ಕಾಂಬೋದಿ ಮುಂತಾದ ಹಳೆಯ ರಾಗಗಳಿಗೆ ಹೊಸ ಸಂಚಾರ ನೀಡಿದವರು. ಚಾಂದ್, ಬೇಹಾಗ್, ಬಹುದಾರಿ, ಚಾರುಕೇಶಿ, ಅಬೇರಿ , ರೇವತಿ ಮುಂತಾದ ಯಕ್ಷಗಾನದಲ್ಲಿ ಬಳಕೆಯಾಗದ ರಾಗಗಳನ್ನು ಬಳಸಿಕೊಂಡು ಯಕ್ಷಗಾನಕ್ಕೆ ಹೊಸ ಹಿಮ್ಮೇಳಾಸಕ್ತರನ್ನು ಮುಖ್ಯವಾಗಿ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡರು. ಆದರೆ ನಾವಡರ ಹೊಸ ಶೈಲಿ ಬಡಗುತಿಟ್ಟಿನ ಇನ್ನೊಂದು ಮೂರನೇ ಹೊಸ ಶೈಲಿ ಎಂದು ಎಲ್ಲಿಯೂ ದಾಖಲಾಗದಿದ್ದದ್ದು ಯಕ್ಷಗಾನದ ದೌರ್ಭಾಗ್ಯವೇ ಸರಿ.
ನೇಪಥ್ಯಕ್ಕೆ ಸರಿದ ತೆಂಕು ಬಡಗಿನ ಸವ್ಯಸಾಚಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ತೀವ್ರವಾದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಸದ್ಯ ಚೇತರಿಸಿಕೊಳ್ಳುತ್ತಾ ಯಕ್ಷಗಾನದಿಂದ ನೇಪಥ್ಯಕ್ಕೆ ಸರಿದಿದ್ದಾರೆ.
ಬಳ್ಕೂರು ಕೃಷ್ಣಯಾಜಿ ಮತ್ತು ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಯಕ್ಷರತ್ನ ಪ್ರಶಸ್ತಿ
-
ಕುಂಜಾಲು ಶೈಲಿ ಭಾಗವತಿಕೆಯ ಶ್ರೇಷ್ಠ ಪ್ರಾತಿನಿಧಿಕ : ಹೆರಂಜಾಲು ಗೋಪಾಲ ಗಾಣಿಗ
ಬಡಗುತಿಟ್ಟು, ಅದರಲ್ಲೂ ನಡುತಿಟ್ಟಿನ ಸಮಕಾಲೀನ ಭಾಗವತರಲ್ಲಿ ಪರಂಪರೆಯ ಹಳೆಯ ಶೈಲಿಯಲ್ಲಿ ಭಾಗವತರಾಗಿ ಗುರುತಿಸಿಕೊಂಡ ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗರು ತೀವ್ರತರವಾದ ವಾಹನ ಅಫ಼ಘಾತಕ್ಕೆ ಸಿಲುಕಿ ನಾಲ್ಕಾರು ಆಪರೇಶನ್ ಆಗಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದು ಸದ್ಯ ಯಕ್ಷತಿರುಗಾಟಕ್ಕೆ ವಿದಾಯ ಹೇಳಿದ್ದಾರೆ. ಸದ್ಯ ಅಮೃತೇಶ್ವರಿ ಮೇಳದ ಪ್ರಧಾನ ಭಾಗವತರಾದ ಅವರಿಗೆ ಇದು ಯಕ್ಷಗಾನ ತಿರುಗಾಟದ 35ನೇ ವರ್ಷ. ಅವರ ಅಭಿಮಾನಿಗಳು ಅವರ 35ರ ತಿರುಗಾಟದ ಸಂಭ್ರಮ ಆಚರಿಸಿ ನಿಧಿ ಅರ್ಪಿಸಲು ನಿರ್ಧರಿಸಿದ್ದಾರೆ. ಇದೇ ‌ಎಪ್ರಿಲ್ 16 ಶನಿವಾರ ಕುಂದಾಪುರದಲ್ಲಿ ಗೋಪಾಲ ಗಾಣಿಗರ ಕನಸಿನ ಕೂಸು ಹೆರಂಜಾಲು ಪ್ರತಿಷ್ಟಾನದ ವಾರ್ಷಿಕೋತ್ಸವ ಹಿರಿಯ ಭಾಗವತರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಲಿಗ್ರಾಮ ಮೇಳದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿಯವರಿಗೆ ಅಭಿಮಾನಿಗಳ ಅಭಿನಂದನೆ
ಬಡಗುತಿಟ್ಟಿನ ರಾಜಹಾಸ್ಯ ಎಂದು ಗುರುತಿಸಲ್ಪಟ್ಟ ಹಳ್ಳಾಡಿ ಜಯರಾಮ ಶೆಟ್ಟರಿಗೆ ಈಗ ವರುಷ ಅರವತ್ತರ ಹರೆಯ ಹಾಗೂ ಐವತ್ತರ ಯಕ್ಷಗಾನ ತಿರುಗಾಟ. ಇದನ್ನು ಅರ್ಥಪೂರ್ಣಗೊಳಿಸಲು ಅವರ ಅಭಿಮಾನಿಗಳು ಎಪ್ರಿಲ್ 17 ಆದಿತ್ಯವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಇರಿಸಿಕೊಂಡಿದ್ದಾರೆ. ಬಳಿಕ ಖ್ಯಾತ ಕಲಾವಿದರಿಂದ ಚಂದ್ರಾವಳಿ ವಿಲಾಸ ಎಂಬ ಹಾಸ್ಯ ಪ್ರಸಂಗದ ಪ್ರದರ್ಶನವಿದೆ.
ಮಿಂಚಿ ಮರೆಯಾದ ಯಕ್ಷರಂಗದ ಮಿನುಗುತಾರೆ : ಶಶಿಧರ ಪಡುಕೋಣೆ
ಅತ್ಯಂತ ಬಡತನದಲ್ಲಿ ಹುಟ್ಟಿದ ಇವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ ಇಬ್ಬರು ತಂಗಿಯಂದಿರ ಜವಬ್ದಾರಿ ಹೊತ್ತವರು. ತನ್ನ ತಂಗಿಯಂದಿರ ಮದುವೆಯನ್ನು ಮಾಡಿ ಇನ್ನೇನು ಹೊಸಬಾಳನ್ನು ಪ್ರವೇಶಿಸುವ ಮುನ್ನವೇ ವಿಧಿಯ ಕ್ರೂರ ಧೃಷ್ಟಿಗೆ ಬಲಿಯಾದದ್ದು ವಿಪರ್ಯಾಸ. ಸ್ತ್ರೀಸಹಜ ಸ್ವರ, ಲಾಲಿತ್ಯಪೂರ್ಣ ಹೆಜ್ಜೆಗಾರಿಕೆ ಸುಂದರವಾದ ಆಳಂಗದ ಮೂಲಕ ಉಭಯತಿಟ್ಟುಗಳ ಪರಿಪೂರ್ಣ ಸ್ತ್ರೀವೇಷಧಾರಿಯಾಗಿ ಅತೀ ಬೇಗ ಗುರುತಿಸಿಕೊಂಡ ಅವರು ಅಷ್ಟೇ ಬೇಗ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಸರಳತೆ ಸಜ್ಜನಿಕೆ, ದುಶ್ಚಟರಾಹಿತ್ಯದಿಂದಾಗಿ ಸಹಕಲಾವಿದರ ಪ್ರೀತಿಯ ಶಶಿಯಾಗಿ ಕಾಣಿಸಿಕೊಂಡ ಅಮವಾಸ್ಯೆಯ ಶಶಿಯಾದದ್ದು ತೆಂಕು ಬಡಗು ಉಭಯತಿಟ್ಟಿಗೆ ತುಂಬಲಾರದ ನಷ್ಟ.
ನಡುತಿಟ್ಟಿನ ಆಶಾಕಿರಣ ಅಪೂರ್ವ ಪುರುಷ ವೇಷಧಾರಿ : ಕೋಟ ಸುರೇಶ ಬಂಗೇರ
ಬಡಗು ತಿಟ್ಟಿನ ಒಂದು ಪ್ರಬೇದವಾದ ಕುಂದಾಪುರ-ಬ್ರಹ್ಮಾವರ ಪರಿಸರದ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷಧಾರಿಯಾಗಿ, ಮುಂದಿನ ಪೀಳಿಗೆಗೆ ಆಶಾಕಿರಣವಾಗಿರುವ ಕೋಟ ಸುರೇಶ ಬಂಗೇರ ಅವರನ್ನು ಮಾರ್ಚ್ 5 ರಂದು ಕೋಟ ಪಡುಕೆರೆ ಫ಼್ರೆಂಡ್ಸ್ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುತ್ತದೆ. ಬೇರೆಬೇರೆ ತಿಟ್ಟು ಮಟ್ಟು, ಶೈಲಿಗಳ ಪ್ರಬಾವದಿಂದ ನಡುತಿಟ್ಟಿನ ಕಲಾವಿದರೆಂದು ಅದಿಕ್ರತವಾಗಿ ಗುರುತಿಸಲ್ಪಡುವ ಕಲಾವಿದರು ವಿರಳವಾಗಿರುವ ಇಂದಿನ ಕಾಲಘಟ್ಟದಲ್ಲಿ, ಮುಂದಿನ ಪೀಳಿಗಗೆ ಆಶಾಕಿರಣವಾಗಿರುವ ಕೊಂಡಿ ಕೋಟ ಸುರೇಶರಿಗೆ ಸನ್ಮಾನ ಯೋಗ್ಯವಾಗಿಯೇ ಸಲ್ಲುತ್ತಿದೆ.
ಐರೋಡಿ ಗೋವಿಂದಪ್ಪನವರಿಗೆ ಗುರು ವೀರಭದ್ರ ನಾಯಕ್ ಸಂಸ್ಮರಣೆ ಪ್ರಶಸ್ತಿ
ಬಡಗು ತಿಟ್ಟಿನ ಬ್ರಹ್ಮಾವರ ವಲಯದ ಪ್ರಭಲ ಎರಡು ಶೈಲಿಗಳಲ್ಲಿ ಒಂದಾದ ಮಟ್ಪಾಡಿ ಶೈಲಿಯ ಪ್ರಾತಿನಿದಿಕ ಕಲಾವಿದ ದಶಾವತಾರಿ ವೀರಭದ್ರ ನಾಯಕರು ಜನಿಸಿ ವರ್ಷ ನೂರ ಹತ್ತು ಸಂದಿದೆ. ಕಳೆದ ವರ್ಷಗಳಲ್ಲಿ ಅವರ ಜನ್ಮಶತಮಾನೋತ್ಸವ ಅಲ್ಲಲ್ಲಿ ಅಚರಣೆ ಆಗಿದೆ. ಈ ವರ್ಷ ಅವರ ಹುಟ್ಟೂರು ಮಟಪಾಡಿ ಯಕ್ಷಗಾನ ಮಂಡಳಿಯ ಸುವರ್ಣ ಮಹೋತ್ಸವ ಆಚರಣೆ ಆಗುತ್ತಿದೆ ಈ ಸಂದರ್ಭದಲ್ಲಿ ನಾಯ್ಕರ ಸಂಸ್ಮರಣೆ ಮತ್ತು ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪನವರಿಗೆ ವೀರಭದ್ರ ನಾಯ್ಕ್ ಸಂಸ್ಮರಣಾ ಪ್ರಶಸ್ತಿ ನೀಡಲಾಗುತ್ತದೆ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಫ಼ೆಬ್ರವರಿ 27ರಂದು ಮಟಪಾಡಿಯಲ್ಲಿ ನೆರವೇರಲಿದೆ.ಈ ಸಂದರ್ಬದಲ್ಲಿ ಇದೊಂದು ಅ ಮಹಾನ್ ಕಲಾವಿದರಿಗೆ ಅರ್ಪಿಸುವ ನುಡಿ ನಮನ.
ಮರೆಯಾದ ಯಕ್ಷ ರಸಿಕರ ಕಣ್ಮಣಿ : ಕಣ್ಣಿಮನೆ ಗಣಪತಿ ಭಟ್
ಬಡಗುತಿಟ್ಟು ಮುಮ್ಮೇಳದಲ್ಲಿ ಕ್ರಾಂತಿ ಮೂಡಿಸಿ ಅಪೂರ್ವ ಪುರುಷವೇಷ ಹಾಗೂ ಪುಂಡು ವೇಷಧಾರಿಯಾಗಿ ತಮ್ಮ ವಿಶಿಷ್ಟ ನೃತ್ಯ ಶೈಲಿಯಿಂದ ಯುವ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಕಣ್ಣಿಮನೆ ಗಣಪತಿ ಭಟ್ ಇನ್ನಿಲ್ಲ. ಬಡಗುತಿಟ್ಟು ಏಕತಾನತೆಯಿಂದ ನರಳುತಿದ್ದಾಗ ಕಣ್ಣಿಯವರ ಪ್ರೇವೇಶವಾಯಿತು. ವಿಶಿಷ್ಟ ಶೈಲಿಯ‌ ಅಭಿನಯ ಅಭಿವ್ಯಕ್ತಿಗಳಿಂದ ಯಕ್ಷಗಾನಕ್ಕೆ ಹೊಸ ಸಂಚಲನ ಮೂಡಿಸಿದ ಅವರು ಯಕ್ಷಗಾನದ ಹೊಸ ಪೀಳಿಗೆಯ ಪ್ರೇಕ್ಷಕರ ಪಾಲಿಗೆ ಅವರು ಕಣ್ಣಿ ಎಂದೇ ಪ್ರಸಿದ್ಧ. ಹೊಸ ಪ್ರೇಕ್ಷಕರ ಸೃಷ್ಟಿಯೊಂದಿಗೆ ಹೊಸ ಯುಗದ ಪ್ರಾರಂಭವಾಯಿತು. ಅಷ್ಟೇ ಬೇಗ ಅಂತ್ಯವಾಯಿತು.
ಅಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ಮಂದಾರ್ತಿ ಮೇಳದ ಸಂಸ್ಮರಣಾ ಪ್ರಶಸ್ತಿ
ಯಕ್ಷಗಾನ ಕಲಾಭಿಮಾನಿ, ಕಲಾವಿದರ ಶ್ರೇಯೋಭಿವೃದ್ದಿಗಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಿಗಿಸಿಕೊಂಡು ಬಯಲಾಟದ ಕಲಾವಿದರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಕಾವಡಿ ಸರಕಾರಿ ಪ್ರೌಡಶಾಲೆಯ ದೈಹಿಕ ಶಿಕ್ಷಕ ಚೇರ್ಕಾಡಿ ಅನಿಲಕುಮಾರ ಶೆಟ್ಟರು ಅಕಾಲದಲ್ಲಿ ದೈವಾದೀನರಾಗಿದ್ದು ಅವರ ಪ್ರಥಮ ವರ್ಷದ ಸಂಸ್ಮರಣೆಯಂದು ಶ್ರೀ ಮಂದಾರ್ತಿ ಮೇಳದ ಇಬ್ಬರು ಎರಡನೇ ವೇಷಧಾರಿಗಳಾದ ಆಜ್ರಿ ಗೋಪಾಲ ಗಾಣಿಗ ಮತ್ತು ನರಾಡಿ ಬೋಜರಾಜ ಶೆಟ್ಟರಿಗೆ ಅವರ ಸಂಸ್ಮರಣಾ ಪ್ರಶಸ್ತಿಯನ್ನು ನೀಡಲಾಗುವುದು.
ಪುಂಡರೀಕಾಕ್ಷ ಉಪಾದ್ಯಾಯರಿಗೆ ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿ
ಉಡುಪಿಯ ಅತೀ ಹಿರಿಯ ಹವ್ಯಾಸಿ ಸಂಸ್ಥೆ 65ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರ ಪ್ರತಿ ವರ್ಷ ನೀಡುತ್ತಿರುವ ಸಂಸ್ಥೆಯ ಸ್ಥಾಪಕ ಸದಸ್ಯ ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿಗೆ ಈ ವರ್ಷ ಹಿರಿಯ ಸ್ತ್ರೀವೇಷಧಾರಿ ಪುಂಡರೀಕಾಕ್ಷ ಉಪಾದ್ಯಾಯರು ಭಾಜನರಾಗುತಿದ್ದಾರೆ. ಪ್ರಶಸ್ತಿ ಪ್ರದಾನ ಫೆಬ್ರವರಿ 12 ಭಾನುವಾರ ಸಂಸ್ಥೆಯ ಕಲಾಭವನದಲ್ಲಿ ನೆರವೇರಲಿದೆ. ಯಕ್ಷಲೋಕದ ಮೂರುತಿಟ್ಟುಗಳಿಗೆ ಸಮಾನ ನ್ಯಾಯ ಒದಗಿಸಿ ಸುಮಾರು ಐದು ದಶಕಗಳ ಕಾಲ ತೆಂಕು ಬಡಗುತಿಟ್ತನ್ನು ಶ್ರೀಮಂತಗೊಳಿಸಿದ ಪುಂಡರೀಕಕ್ಷ ಉಪಾದ್ಯಾಯರಿಗೆ ಬೋಜಪ್ಪ ಸುವರ್ಣ ಪ್ರಶಸ್ತಿ ಯೋಗ್ಯವಾಗಿಯೇ ಸಲ್ಲುತ್ತಿದೆ.
ಹಿರಿಯ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕರಿಗೆ ಅರಾಟೆ ಮಂಜುನಾಥ ಸಂಸ್ಮರಣಾ ಪ್ರಶಸ್ತಿ
ಬಡಗುತಿಟ್ಟಿನಲ್ಲಿ ಸಿಧ್ದಿ ಹಾಗೂ ಪ್ರಸಿಧ್ದಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಸ್ತ್ರೀ ವೇಷಧಾರಿ, ಸುಧೀರ್ಘ ಕಾಲ ಬಡಗುತಿಟ್ಟಿನ ಡೇರೆ ಹಾಗೂ ಬಯಲಾಟದಲ್ಲಿ ಸ್ತ್ರೀ ವೇಷಧಾರಿಯಾಗಿ ಗುರುತಿಸಲ್ಪಟ್ಟ, ದಿ. ಅರಾಟೆ ಮಂಜುನಾಥನವರ ಸಮಕಾಲಿನರಾದ ಎಂ. ಎ. ನಾಯ್ಕರಿಗೆ, ಅರಾಟೆ ಮಂಜುನಾಥನವರ ಪ್ರಥಮ ಸಂಸ್ಮರಣಾ ಪ್ರಶಸ್ತಿಯನ್ನು ಗಣ್ಯರ ಉಪಸ್ಥಿತಿಯಲ್ಲಿ ಜ. 30ರಂದು ಕುಂದಾಪುರದಲ್ಲಿ ನೀಡಲಾಗುತ್ತದೆ. ಅರಾಟೆಯವರ ಸಮಕಾಲಿನರಾದ ಇವರಿಗೆ ಅರಾಟೆ ಸಂಸ್ಮರಣೆಯಂದು ನೀಡಲಾಗುವ ಪ್ರಥಮ ಸಂಸ್ಮರಣಾ ಪ್ರಶಸ್ತಿ ಯೋಗ್ಯವಾಗಿಯೇ ನೀಡಲ್ಪಡುತ್ತಿದೆ.
ಯಕ್ಷಗಾನ ತಜ್ಞ, ಹಿರಿಯ ವಿಮರ್ಶಕ ಹಂದಾಡಿ ಸುಬ್ಬಣ್ಣ ಭಟ್ಟರು
ಬ್ರಹ್ಮಾವರ ಸಮೀಪ ಬಡಗುತಿಟ್ಟಿನ ಪ್ರಮುಖ ಶೈಲಿಗಳಲ್ಲಿ ಒಂದಾದ ಮಟಪಾಡಿ ತಿಟ್ಟನ್ನು ಹುಟ್ಟುಹಾಕಿದ ದಶಾವತಾರಿ ಗುರು ವೀರಭದ್ರ ನಾಯ್ಕರು ಜನ್ಮವೆತ್ತ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಮಂಡಳಿಗೆ ಈಗ ಐವತ್ತರ ಸಂಬ್ರಮ. ಸುವರ್ಣ ಸರಣಿ ಕಾರ್ಯಕ್ರಮದ ಅಂಗವಾಗಿ ಜನವರಿ 3ರರಂದು ಸುವರ್ಣ ಪ್ರಶಸ್ತಿಯನ್ನು ಹಿರಿಯ ಪ್ರಸಾದನ ತಜ್ಞ ಸರಳ ವ್ಯಕ್ತಿತ್ವದ ಆದರ್ಶ ಅಧ್ಯಾಪಕ, ಯಕ್ಷಗಾನ ವಿಮರ್ಶಕರಲ್ಲೇ ಅತೀ ಹಿರಿಯರಾದ ಸುಮಾರು 85ರ ಆಸುಪಾಸಿನವರಾದ ಹಂದಾಡಿ ಸುಬ್ಬಣ್ಣ ಭಟ್ಟರಿಗೆ ನೀಡಲಾಯಿತು.
ಪ್ರಚಾರ ಬಯಸದ ಸಿದ್ಧಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್
ಶ್ರೀ ಗೋಳಿಗರಡಿ ಪಂಜೂರ್ಲಿ ಕ್ಷೇತ್ರದ ಪಾತ್ರಿಯಾಗಿದ್ದು ಗೋಳಿಗರಡಿ ಮೇಳದ ಪೋಷಕರಾಗಿದ್ದ ಸಾಸ್ತಾನ ಚಂದು ಪೂಜಾರಿಯವರ ಸಂಸ್ಮರಣಾರ್ಥ ಪ್ರತಿ ವರ್ಷ ಗೋಳಿಗರಡಿ ಮೇಳದ ಪ್ರಥಮ ಸೇವೆಯಾಟದಂದು ನೀಡುವ ಚಂದು ಪೂಜಾರಿ ಸಂಸ್ಮರಣಾ ಪ್ರಶಸ್ತಿ ಈ ಸಾಲಿನಲ್ಲಿ ಬಡಗುತಿಟ್ಟಿನಲ್ಲಿ ಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್ ಅವರಿಗೆ ನೀಡಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 22 ರಂದು ಗೋಳಿಗರಡಿ ಮೇಳದ ಪ್ರಥಮ ಸೇವೆ ಆಟದಂದು ಗಣ್ಯರ ಉಪಸ್ಥಿತಿಯಲ್ಲಿ ಗೋಳಿ ಗರಡಿಯಲ್ಲಿ ನೆರವೇರಲಿದೆ.
ಮತ್ತೆ ಹಾಡಿತು ಕೋಗಿಲೆ; ಸದಾಶಿವ ಅಮೀನ್ ಮತ್ತೆ ಯಕ್ಷರಂಗಕ್ಕೆ
ಬಡಗುತಿಟ್ಟು ಯಕ್ಷಗಾನ ಭಾಗವತಿಕೆಯಲ್ಲಿ ಕ್ರಾಂತಿ ಮೂಡಿಸಿದ ಭಾಗವತ ಕಾಳಿಂಗ ನಾವಡರ ಭಾಗವತಿಕೆಗೆ ಸಹ ಭಾಗವತರಾಗಿ, ಸುಮಾರು 28 ವರ್ಷದ ಹಿಂದೆ ಸಾಲಿಗ್ರಾಮ ಮೇಳದಲ್ಲಿ ಗುರುತಿಸಿಕೊಂಡು ನಾವಡರ ಸಿರಿಕಂಠದಿಂದ ಪ್ರೇರೇಪಿತರಾಗಿ ಅವರದ್ದೇ ರಂಗತಂತ್ರ ಮೈಗೂಡಿಸಿಕೊಂಡು ಸುಮಾರು 6 ವರ್ಷ ಸಾಲಿಗ್ರಾಮ ಮೇಳದಲ್ಲಿ ನಾವಡರ ಒಡನಾಡಿಯಾಗಿ ಅವರ ಪ್ರೀತಿಗೆ ಪಾತ್ರರಾದ ಕೊಕ್ಕರ್ಣೆ ಸದಾಶಿವ ಅಮೀನ್ ಅನಿವಾರ್ಯ ಕಾರಣದಿಂದ ಕಳೆದ 20 ವರ್ಷಗಳಿಂದ ಅಜ್ಞಾತವಾಸದಲ್ಲಿದ್ದು, ದೀರ್ಘ ಕಾಲದ ನಂತರ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಕೊಕ್ಕರ್ಣೆಯಲ್ಲಿ ಪ್ರಥಮವಾಗಿ ರಂಗಮಂಚವೇರಿ ತನಗೆ ಕೀರ್ತಿ ತಂದಿತ್ತ ನಾಗಶ್ರೀ ಪ್ರಸಂಗದ ಪದ್ಯದ ಮೂಲಕ ಅಪಾರ ಜನರ ಮೆಚ್ಚುಗೆಗೆ ಪಾತ್ರವಾದರು.
ಕಂದಾವರ ಪ್ರಶಸ್ತಿ ಪುರಸ್ಕ್ರುತ ಭಾಗವತ ಸುರೇಶ ಶೆಟ್ಟಿ ಶಂಕರನಾರಾಯಣ
ಯಕ್ಷಗಾನದ ಮೌಲ್ಯಾಧಾರಿತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಪ್ರತಿಷ್ಟಾನದವರು ಕೊಡಮಾಡುವ ಮೂರನೇ ವರ್ಷದ ಪ್ರಶಸ್ತಿಗೆ ಬಡಗುತಿಟ್ಟಿನ ಪ್ರಸಿದ್ದ ಭಾಗವತ ಸುರೇಶ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಅನೇಕ ಯುವ ಕಲಾವಿದರನ್ನು ಯಾವುದೇ ವೃತ್ತಿ ಮಾತ್ಸರ್ಯವಿಲ್ಲದೇ ಪ್ರೇಕ್ಷಕ ಜಗತ್ತಿಗೆ ತೋರಿಸಿಕೊಟ್ಟ ಹೃದಯ ಶ್ರೀಮಂತಿಕೆಯ ವ್ಯಕ್ತಿ. ಬೆಂಗಳೂರು ಮುಂಬೈಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ ಇವರಿಗೆ ಹಲವಾರು ಸನ್ಮಾನಗಳು ಸಂದಿವೆ. ಕನಿಷ್ಟ ಮುಂದಿನ 20 ವರ್ಷ ಕಲಾವ್ಯವಸಾಯ ಮಾಡಬಲ್ಲ ಭಾಗವತ ಇಷ್ಟು ಬೇಗನೇ ನಿವೃತ್ತಿ ಘೋಷಿಸಿದ್ದು ಕಲಾಭಿಮಾನಿಗಳ ದೌರ್ಭಾಗ್ಯ ಎನ್ನಬಹುದಾಗಿದೆ.
ಅಗಲಿದ ಯಕ್ಷರಂಗದ ಭೀಷ್ಮ ಹಿರಿಯ ಭಾಗವತ ಆರ್ಗೋಡು ಗೋವಿಂದರಾಯ ಶೆಣೈ
-
ಸೀತಾನದಿ ಪ್ರಶಸ್ತಿ ಪುರಸ್ಕ್ರುತ ಯಕ್ಷರಂಗದ ಶ್ರೀರಾಮ - ಆರ್ಗೋಡು ಮೋಹನದಾಸ ಶೆಣೈ
ಖ್ಯಾತ ಪ್ರಸಂಗಕರ್ತ, ಆದರ್ಶ ಅಧ್ಯಾಪಕ, ತಾಳ ಮದ್ದಳೆ ಅರ್ಥದಾರಿ ಸೀತಾನಧಿ ಗಣಪಯ್ಯ ಶೆಟ್ಟಿ ಪ್ರತೀಷ್ಟಾನದಿಂದ ಕೊಡಮಾಡುವ 27ನೇ ವರ್ಷದ ಸೀತಾನಧಿ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಬಡಗುತಿಟ್ಟಿನ ಹಿರಿಯ ಕಲಾವಿದ ಯಕ್ಷರಂಗದ ಶ್ರೀ ರಾಮನೆಂದೇ ಖ್ಯಾತರಾದ ಶ್ರೀ ಸಾಲಿಗ್ರಾಮ ಮೇಳದ ಪ್ರದಾನ ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈಯವರಿಗೆ ನೀಡಲಾಗುತ್ತದೆ.ಯಕ್ಷಗಾನ ಕಲೆಗಾಗಿ ಜೀವನವನ್ನು ಅರ್ಪಿಸಿ ತಾಳಮದ್ದಳೆ ಕ್ಷೇತ್ರವನ್ನೂ ಜೊತೆ ಜೊತೆಗೆ ಶ್ರೀಮಂತಗೊಳಿಸಿ, ಕಲಾ ಸಾರ್ಥಕ್ಯ ಕಂಡ ಹಿರಿಯ ಕಲಾವಿದ ಶೆಣೈಯವರಿಗೆ ಪ್ರತಿಷ್ಟಿತ ಸೀತಾನಧಿ ಪ್ರಶಸ್ತಿ ಯೋಗ್ಯವಾಗಿಯೇ ಅರಸಿಬಂದಿದೆ.
ರಸರಾಗ ಚಕ್ರವರ್ತಿ ಕಾಳಿಂಗ ನಾವಡರ 25ನೇ ಪುಣ್ಯ ಸಂಸ್ಮರಣೆ
ಬಡಗುತಿಟ್ಟಿನ ಮೇರು ಕಲಾವಿದರಲ್ಲಿ ಮಹಾ ಗಾಯಕ ಗುಂಡ್ಮಿ ಕಾಳಿಂಗ ನಾವಡರದ್ದು ಅಗ್ರಮಾನ್ಯ ಹೆಸರು. ತನ್ನದೇ ಶೈಲಿಯೊಂದನ್ನು ಪ್ರವರ್ತನಗೊಳಿಸಿ ಜನಮಾನಸದಲ್ಲಿ ಸ್ಥಿರಗೊಳಿಸಿ ಯುವ ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟು ಅಪಾರ ಸಂಖ್ಯೆಯ ಹೊಸ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಕಾಳಿಂಗ ನಾವಡ ಎಂಬುದು ತಾರಾಮೌಲ್ಯದ ಮಾಂತ್ರಿಕ ಸ್ಪರ್ಷದ ಪವಾಡ ಸದ್ರಶ ಹೆಸರು. ಇಂತಹ ಕ್ರಾಂತಿಕಾರಿ ಬಾಗವತ ಯಕ್ಷಗಾನ ಜಗತ್ತನ್ನು ಅಗಲಿ ವರ್ಷ ಇಪ್ಪತ್ತ ಐದು ಸಂದಿದೆ. ಅಲ್ಲಲ್ಲಿ 25ನೇ ವರ್ಷದ ಸಂಸ್ಮರಣೆಗಳು ನೆರವೇರುತ್ತಿವೆ. ನಾವಡರ ಅಗಲಿಕೆಯ 25ನೇ ವರ್ಷದ ಸಂದರ್ಭದಲ್ಲಿ ನಾವಡರನ್ನು ನೆನಪಿಸುವ ಕಾರ್ಯಕ್ರಮಗಳು ತುರ್ತಾಗಿ ಆಗಬೇಕಾಗಿರುವುದು ಅನಿವಾರ್ಯ.
ಅಗಲಿದ ಬಯಲಾಟದ ಅಗ್ರಮಾನ್ಯ ಹಾಸ್ಯಗಾರ ಮಡಾಮಕ್ಕಿ ಜಯರಾಮ ಶೆಟ್ಟಿ
ಯಕ್ಷಗಾನದ ಬಯಲಾಟ ರಂಗಭೂಮಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಪರಂಪರೆಯ ರಾಜ ಹಾಸ್ಯಗಾರನಾಗಿ ಗುರುತಿಸಿಕೊಂಡ ಮಡಾಮಕ್ಕಿ ಜಯರಾಮ ಶೆಟ್ಟರು ಇನ್ನು ನೆನಪು ಮಾತ್ರ. ತನ್ನ ಅರವತ್ತರ ಪ್ರಾಯದಲ್ಲಿ ಅವರು ದೈವಾಧೀನರಾಗಿದ್ದಾರೆ. ಪ್ರಚಾರ ಸನ್ಮಾನ ಪ್ರಶಸ್ತಿ ಪುರಸ್ಕಾರದಿಂದ ದೂರ ಉಳಿದು ಸುದೀರ್ಘ 40 ವರ್ಷ ಬಡಗುತಿಟ್ಟು ಬಯಲಾಟ ರಂಗಭೂಮಿಯಲ್ಲಿ ಗುರುತಿಸಿಕೊಂಡ ಶೆಟ್ಟರ ನಿಧನದಿಂದ ಬಡಗುತಿಟ್ಟು ಹಾಸ್ಯಲೋಕ ಬಡವಾಗಿದೆ.
ಸನ್ಮಾನಗೊಳ್ಳಲಿರುವ ಮಾರ್ವಿ ಶೈಲಿಯ ಸಿಧ್ಧಿಯ ಭಾಗವತ ಕೆ.ಪಿ.ಹೆಗಡೆ
ಬಡಗುತಿಟ್ಟಿನ ಸಂಪ್ರದಾಯ ಯಕ್ಷಗಾನದ ಶ್ರೇಷ್ಠ ಶೈಲಿಗಳಲ್ಲಿ ಒಂದಾದ ಮಾರ್ವಿ ಶೈಲಿಯ ಪ್ರಾತಿನಿಧಿಕ ಭಾಗವತ, ನಾರ್ಣಪ್ಪ ಉಪ್ಪೂರರ ಭಾಗವತಿಕೆ ಶೈಲಿಯ ಸಮರ್ಥ ಪ್ರತಿಪಾದಕ ಕೆ. ಪಿ ಹೆಗಡೆಯವರು ವೃತ್ತಿ ರಂಗಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬಡಗುತಿಟ್ಟಿನ ಹಿರಿಯ ಮೇಳವಾದ ಮಂದಾರ್ತಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಅಲ್ಲಿಯೇ ಭಡ್ತಿ ಪಡೆದು ದೀರ್ಘ ಕಾಲ ಮಂದಾರ್ತಿ ಮೇಳವೊಂದರಲ್ಲೇ ಸೇವೆ ಸಲ್ಲಿಸಿದ ಅವರು ಅಲ್ಲಿಂದಲೇ ಮೇಳಕ್ಕೆ ನಿವೃತ್ತಿ ಹೊಂದುತಿದ್ದಾರೆ. ಜಾನುವಾರುಕಟ್ಟೆ ಭಾಗವತರು, ಕುಂಜಾಲು ಶೇಷಗಿರಿ ಕಿಣಿ, ಗೋರ್ಪಾಡಿ ವಿಠಲ ಪಾಟೀಲ್, ಹರಾಡಿ ಅಣ್ಣಪ್ಪ ಗಾಣಿಗರು, ಮತ್ಯಾಡಿ ನರಸಿಂಹ ಶೆಟ್ಟರ ನಂತರ ಮಂದಾರ್ತಿ ಮೇಳವೊಂದರಲ್ಲೇ ದೀರ್ಘಕಾಲ ಸೇವೆ ಸಲ್ಲಿಸಿದವರಲ್ಲಿ ಇವರೂ ಒಬ್ಬರು.
ಶ್ರೀ ಕ್ಷೇತ್ರ ಮಂದಾರ್ತಿ ಮೇಳಗಳು ಮತ್ತು ಹರಕೆ ಬಯಲಾಟ
ಯಕ್ಷಗಾನಕ್ಕೆ ಪ್ರೇಕ್ಷಕರಿಲ್ಲ ಎಂಬ ಕೊರಗು ಒಂದೆಡೆ, ಯಕ್ಷಗಾನ ಕಲಾವಿದರು ಹೊಸದಾಗಿ ತಯಾರಾಗುದಿಲ್ಲ ಎಂಬ ಕೂಗು ಇನ್ನೊಂದೆಡೆಯಾದರೆ ಯಕ್ಷಗಾನದ ಹೊಸ ಹೊಸ ಮೇಳಗಳು ಪ್ರತೀ ವರ್ಷ ಹುಟ್ಟಿಕೊಳ್ಳುತ್ತಾ ಇರುವುದು ಯಕ್ಷಗಾನ ಕಲೆಯ ವೈಶಿಷ್ಯವೇ ಇರಬೇಕು. ಕರಾವಳಿ ಜನರ ಜೀವನದಲ್ಲಿ ಹಾಸುಹೊಕ್ಕಾದ ಈ ಕಲೆಯು ಅವರ ಜೀವನಾಡಿ. ಈಗಂತೂ ಇಡೀ ಅವಿಭಜಿತ ದ. ಕ. ಜಿಲ್ಲೆಯಲ್ಲಿ ಸುಮಾರು 32ಕ್ಕೂ ಅಧಿಕ ಮೇಳಗಳು ಆರು ತಿಂಗಳು ತಿರುಗಾಟ ಮಾಡಿದರೆ ಅನೇಕ ಹವ್ಯಾಸಿ ಮೇಳಗಳು, ಮಕ್ಕಳ ಮೇಳಗಳು, ಮಹಿಳಾ ತಂಡಗಳು, ಕಾಲಮಿತಿ ತಂಡಗಳು ಕೇವಲ 3-4 ಜಿಲ್ಲೆಗಳಲ್ಲಿ ತಿರುಗಾಟ ಮಾಡುತ್ತಿರುವುದು ಗಿನ್ನೀಸ್ ದಾಖಲೆಗೆ ಯೋಗ್ಯವಾದ ಸಂಗತಿ.
ಪ್ರಸಂಗ ಕರ್ತರ ಜೀವನ ಪ್ರಸಂಗ; ಲಘು-ಗುರು ಛಂದಸ್ಸಿನ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ
ಯಕ್ಷಗಾನ ಕ್ಷೇತ್ರದ ಮೌಲ್ಯಾಧಾರಿತ ಪ್ರಸಂಗಕರ್ತ ಆದರ್ಶ ಅಧ್ಯಾಪಕ ಕುಂದಾಪುರ ತಾಲೂಕಿನ ಹೆಮ್ಮೆಯ ವರಪುತ್ರ ಕಂದಾವರ ರಘುರಾಮ ಶೆಟ್ಟರು 80ನೇ ಸಂವಸ್ತರಕ್ಕೆ ಕಾಲಿಡುತಿದ್ದಾರೆ. ಪರಿಸರ ಹಾಗೂ ಪರಂಪರೆಯ ಪ್ರಭಾವದಿಂದ ರೂಪುಗೊಂಡು ಪರಿಶ್ರಮದಿಂದ ಪ್ರಸಿದ್ಧಿಗೇರಿದ ಸಿದ್ಧಿಯ ಕಲಾವಿದ ಕಂದಾವರ ರಘುರಾಮ ಶೆಟ್ಟರು. ಛಂದೋಬದ್ಧವಾಗಿ ಪೌರಾಣಿಕ ಆಕರಗಳನ್ನೇ ಬಳಸಿಕೊಂಡು ಸುಮಾರು 20 ಪ್ರಸಂಗ ರಚಿಸಿದ ಇವರ ಎಲ್ಲಾ ಪ್ರಸಂಗಗಳು ಮೌಲ್ಯಾಧಾರಿತ ಮತ್ತು ಸುಸಂಬದ್ದವಾಗಿವೆ.
ಮದ್ದಳೆ ಮಾಂತ್ರಿಕ ಲಯಬ್ರಹ್ಮ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯ
ಬಡಗುತಿಟ್ಟು ಯಕ್ಷಗಾನದ ಮದ್ದಳೆಯ ಅಪ್ರತಿಮ ಸಾಧಕ, ಅದ್ವೀತೀಯ ಮದ್ದಳೆಗಾರ, ಲಯಬ್ರಹ್ಮ ಹುಂಚದಕಟ್ಟೆ ಶ್ರೀನಿವಾಸ ಆಚಾರ್ಯರು ನಮ್ಮನ್ನಗಲಿ ಸರಿಸುಮಾರು ವರ್ಷ 26 ಸಂದಿದೆ. ಬಡಗುತಿಟ್ಟು ಯಕ್ಷಗಾನಕ್ಕೆ ಮಹಾನ್ ಕಲಾವಿದರನ್ನು ನೀಡಿದ ಮಲೆನಾಡು ಸೀಮೆಯ ತೀರ್ಥಹಳ್ಳಿ ಸಮೀಪ ಹುಂಚದಕಟ್ಟೆಯಲ್ಲಿ ಜನಿಸಿದ ಶ್ರೀನಿವಾಸ ಆಚಾರ್ಯರು ಪರಿಸರದಲ್ಲಿ ನಡೆಯುತ್ತಿರುವ ಯಕ್ಷಗಾನದಿಂದ ಪ್ರಭಾವಿತರಾಗಿ ಮದ್ದಳೆ ವಾದನದ ಆಸಕ್ತಿ ಬೆಳೆಸಿಕೊಂಡವರು. ಹಿರಿಯರಿಂದ ಬಂದ ಸಲ್ಪಮಟ್ಟಿನ ಲಯ ತಾಳದ ಮಾಹಿತಿಯೊಂದಿಗೆ ಯಾವುದೇ ಗಟ್ಟಿಗುರುವಿನ ಸಹಾಯವಿಲ್ಲದೆ ಏಕಲವ್ಯನಂತೆ ಸ್ವಪ್ರಯತ್ನ ಮತ್ತು ಪ್ರತಿಭೆಯಿಂದ ಮದ್ದಳೆಯ ಮಾಂತ್ರಿಕನಾಗಿದ್ದು ಒಂದು ದಂತಕಥೆ.
ಸಭ್ಯತೆಯ ಸುಸಂಸ್ಕೃತ ಹಾಸ್ಯ ಚಕ್ರವರ್ತಿ ಹಳ್ಳಾಡಿ ಜಯರಾಮ ಶೆಟ್ಟಿ
ಬಡಗುತಿಟ್ಟು ಯಕ್ಷಲೋಕದಲ್ಲಿ ಯಕ್ಷಗಾನ ಹಾಸ್ಯಪ್ರಿಯರಿಗೆ ಹಳ್ಳಾಡಿ ಎಂಬ ಊರು ಐತಿಹಾಸಿಕವಾಗಿ ತೆನ್ನಾಲಿ ಎಂಬಷ್ಟೆ ಚಿರಪರಿಚಿತ. ತನ್ನ ಶ್ರುತಿಬದ್ದ ಹಾಸ್ಯಮಿಶ್ರಿತ ಮಾತುಗಾರಿಕೆಯಿಂದ ಯಕ್ಷಗಾನದ ಗಂಭೀರ ರಾಜ ಹಾಸ್ಯ ಎಂದು ಗುರುತಿಸಿಕೊಂಡ ಅಪ್ರತಿಮ ಕಲಾಪ್ರತಿಭೆ ಹಳ್ಳಾಡಿ ಜಯರಾಮ ಶೆಟ್ಟರು ಕುಂಜಾಲು ರಾಮಕೃಷ್ಣ ಹಾಸ್ಯಗಾರರ ಹಾದಿಯಲ್ಲೆ ಕ್ರಮಿಸಿ ಯಶಸ್ಸು ಕಂಡವವರು. ಸಭ್ಯತೆಯ ಎಲ್ಲೆಯನ್ನು ಮೀರದೆ ಸುಸಂಸ್ಕೃತವಾಗಿ ಪಾತ್ರ ಪೋಷಣೆ ಮಾಡುತ್ತಾ ಪೌರಾಣಿಕ ಪ್ರಸಂಗದ ಹಾಸ್ಯಗಳಿಗೆ ಯತೋಚಿತ ನ್ಯಾಯ ಒದಗಿಸಿದ ಇವರನ್ನು ಹಾಸ್ಯ ಚಕೃವರ್ತಿ ಎಂದು ಕರೆಯಲಾಗುತ್ತಿದೆ.
ಸಾಧಕರನ್ನು ಸನ್ಮಾನಿಸುವುದು ಸಭ್ಯ ಸಮಾಜದ ಕರ್ತವ್ಯ
-
ಎಲೆ ಮರೆಯ ಬಾಲಕನ ಅಸಾಧಾರಣ ಯಕ್ಷ ಕೈ ಚಳಕ
ಭಾಗವತರ ಸುಶ್ರಾವ್ಯ ಗಾಯನ, ಚೆಂಡೆ ಮದ್ದಳೆಗಳ ಸುಮಧುರ ವಾದನ. ಝಗಮಗಿಸುವ ರಂಗಸ್ಥಳದಲ್ಲಿ ವಿವಿಧ ರಸರಾಗಗಳ ಸನ್ನಿವೇಷಗಳ ಆವರ್ತನ, ಸುರ, ಮರ್ತ್ಯ, ಪಾತಾಳ ಲೋಕಗಳ ದೃಶ್ಯ ಸಾಕ್ಷಾತ್ಕಾರ. ಹಾಂ ಇದು ಯಾವುದೋ ವೃತ್ತಿಪರ ಮೇಳದ ರಂಗಸ್ಥಳವೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪಾದೀತು. ಈ ಪರಿಯ ರಂಗ ವೈಭವ ಸಾಕಾರಗೊಂಡಿದ್ದು ಬಾಲಕಲಾವಿದನೊಬ್ಬನ ಕೈಚಳಕದಲ್ಲಿ. ಈ ಕಾರ್ಟೂನ್ ರಂಗಸ್ಥಳದ ರೂವಾರಿ ಶಿವಮೊಗ್ಗ ಜಿಲ್ಲೆಯ ಯಡೂರಿನ ಬಾಲಕ ನವೀನ ಆಚಾರ್ಯನಿಂದ.
ಯಕ್ಷಗಾನ ಕಲಾವಿದ ತೀರ್ಥಳ್ಳಿ ಗೋಪಾಲಾಚಾರ್ಯರಿಗೆ ಯಕ್ಷರತ್ನ ಪ್ರಶಸ್ತಿ
-
ನೇಪಥ್ಯಕ್ಕೆ ಸರಿದ ತೆಂಕು-ಬಡಗುತಿಟ್ಟುಗಳ ಸವ್ಯಸಾಚಿ ಕಲಾವಿದ ಉದ್ಯಾವರ ಜಯಕುಮಾರ್
ಯಕ್ಷಗಾನದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ, ಯಕ್ಷಗಾನಕ್ಕೆ ಗಣನೀಯ ಕೊಡುಗೆ ನೀಡಿದ ಹಾರಾಡಿ ಮತ್ತು ಉದ್ಯಾವರ ಗಾಣಿಗ ಕುಟುಂಬದ ಪ್ರಾತಿನಿಧಿಕ ಕಲಾವಿದ ದೀರ್ಘಕಾಲ ಶ್ರೀ ಕ್ಷೇತ್ರ ದರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ ಮಾಡಿದ ಹಿರಿಯ ಕಲಾವಿದ ಉದ್ಯಾವರ ಜಯಕುಮಾರ ಗಾಣಿಗರು ತೀವ್ರ ಅನಾರೋಗ್ಯದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ತೀವ್ರವಾದ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಸಂಘ ಸಂಸ್ಥೆಗಳ ಸಹಕಾರ ಸಾಂತ್ವನ ತುರ್ತಾಗಿ ಬೇಕಾಗಿದೆ.
ನಿಟ್ಟೂರು ಬೋಜಪ್ಪ ಸುವರ್ಣ ಪ್ರಶಸ್ತಿಗೆ ಎಳ್ಳಂಪಳ್ಳಿ ಜಗನ್ನಾಥ ಆಚಾರ್ ಆಯ್ಕೆ
-
ನಂದಿದ ಯಕ್ಷರಂಗದ ಜ್ವಾಲೆ, ಮೋಹಕ ಸ್ತ್ರೀ ವೇಷಧಾರಿ ಅರಾಟೆ ಮಂಜುನಾಥ ವಿಧಿವಶ
ತನ್ನ ಜೀವಿತದಲ್ಲಿ ದೀರ್ಘಕಾಲ ಸಾಲಿಗ್ರಾಮ ಮೇಳವೊಂದರಲ್ಲೆ ಸೇವೆ ಸಲ್ಲಿಸಿ ಸುಮಾರು ಎಪ್ಪತ್ತು ಎಂಬತ್ತರ ದಶಕದಲ್ಲಿ ಇಂದಿಗೂ ಚಿರನೂತನವಾದ ಪದ್ಮಪಾಲಿ, ನಾಗಶ್ರೀ, ಕಾಂಚನಶ್ರೀ, ಶ್ರೀದೇವಿ ಬನಶಂಕರಿ, ರತಿರೇಖಾ, ಚೆಲುವೆ ಚಿತ್ರಾವತಿ, ಚೈತ್ರ ಪಲ್ಲವಿ, ವಸಂತಸೇನೆ ಮುಂತಾದ ಸಾಮಾಜಿಕ ಪ್ರಸಂಗಗಳಿಗೆ ಅನಿವಾರ್ಯ ಸ್ತ್ರೀ ವೇಷಧಾರಿಯಾಗಿದ್ದ ಮೋಹಕ ನಟ ಅರಾಟೆ ಮಂಜುನಾಥ ನಾಯ್ಕರು ಇನ್ನಿಲ್ಲ. ಬಡಗುತಿಟ್ಟು ಯಕ್ಷಗಾನದ ಸ್ತ್ರೀವೇಷಧಾರಿಗಳಲ್ಲಿ ಅಗ್ರ ಪಂಕ್ತಿಯ ಹೆಸರು ಅರಾಟೆ ಮಂಜುನಾಥನವರದ್ದು. ಯಕ್ಷಗಾನದ ಇತಿಹಾಸದಲ್ಲಿ ಕಲಾವಿದನೊಬ್ಬ ಅದರಲ್ಲೂ ಸ್ತ್ರೀಪಾತ್ರದಾರಿಯೊಬ್ಬರು ಬಹು ಪ್ರಸಿದ್ದಿ ಪಡೆದು ಸಮಾಜದಲ್ಲಿ ಕಲಾವಿದರ ಗಡಣದಲ್ಲಿ ರಾಜಕೀಯ ರಂಗದಲ್ಲೂ ವಿಶಿಷ್ಟ ವ್ಯಕಿತ್ವದಿಂದ ಮೇರುಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದು ‌ಅಪರೂಪದ ಸಾಧನೆ.
ಪ್ರಪ್ರಥಮ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಯಕ್ಷಗಾನದ ಧ್ರುವತಾರೆ ಹಾರಾಡಿ ರಾಮ ಗಾಣಿಗರು
ಹಾರಾಡಿ ಇಂದು ಯಕ್ಷಗಾನದ ವಲಯಕ್ಕೆ ಸಂಬಂಧಿಸಿದ ಹಾಗೆ ಊರ ಹೆಸರಾಗಿ ಉಳಿದಿಲ್ಲ. ಅದೊಂದು `ವ್ಯಕ್ತಿ ನಾಮ`. ಹಾರಾಡಿ ಎಂಬ ಮೂರಕ್ಷರವು ಯಕ್ಷಪ್ರಿಯರ ಮೈ ರೋಮಾಂಚನಗೊಳಿಸುವಷ್ಟು ಧೃಡವಾದದ್ದು. ಬಡಗುತಿಟ್ಟು ಯಕ್ಷಗಾನದಲ್ಲಿ ಹಾರಾಡಿ ತಿಟ್ಟು ಎನ್ನುವ ಹೊಸ ಶೈಲಿಯನ್ನು ಹುಟ್ಟು ಹಾಕಿದ ಕೀರ್ತಿ ಈ ಕುಟುಂಬಕ್ಕಿದೆ. ಉಡುಪಿ ಜಿಲ್ಲೆಯ ಹಾರಾಡಿಯಲ್ಲಿ 1902ರಲ್ಲಿ ಬಡ ಕುಟು೦ಬದಲ್ಲಿ ಜನಿಸಿದ ರಾಮ ಗಾಣಿಗರ ತಾತ ಆಣ್ಣಪ್ಪನವರು ಇಪ್ಪತ್ತನೇ ಶತಮಾನದಲ್ಲಿ ಪ್ರಸಿದ್ಧ ಕಲಾವಿದರಾಗಿದ್ದರು. ತೆಕ್ಕಟ್ಟೆ ಬಾಬಣ್ಣ ಮು೦ತಾದ ಹಿರಿಯರಿ೦ದ ಪ್ರಭಾವಿತರಾಗಿ 14ನೇ ವರ್ಷದಲ್ಲೇ ಯಕ್ಷಗಾನದ ಪಾದರ್ಪಣೆ ಮಾಡಿ ಹಂತಹಂತವಾಗಿ ಯಶಸ್ಸಿನ ಏಣಿ ಏರಿದವರು. ಹಾರಾಡಿ ರಾಮ ಗಾಣಿಗರು ಯಕ್ಷಗಾನ ಕ್ಷೇತ್ರಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ತಂದಿತ್ತು ಕಲೆಯ ಘನತೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು.
ಕಳಚಿದ ನಡುತಿಟ್ಟಿನ ಸಾಂಪ್ರದಾಯದ ಕೊಂಡಿ, ಮೊಳಹಳ್ಳಿ ಹಿರಿಯ ನಾಯ್ಕ ಇನ್ನಿಲ್ಲ
ಸುಮಾರು ಅರುವತ್ತರ ದಶಕದಲ್ಲಿ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಆಳಿದ ಹಾರಾಡಿ-ಮಟ್ಪಾಡಿತಿಟ್ಟುಗಳ ಪ್ರಾತಿನಿಧಿಕ ಕಲಾವಿದ ಸುಮಾರು 60 ವರ್ಷ ಕಲಾಸೇವೆ ಮಾಡಿದ ಕಲಾವಿದ ಮೊಳಹಳ್ಳಿ ಹಿರಿಯ ನಾಯ್ಕರು ಇನ್ನಿಲ್ಲ. ಶರಣರ ಬದುಕನ್ನು ಮರಣದಲ್ಲಿ ನೋಡು ಎನ್ನುವ ಹಾಗೆ ಬಹಳ ಸುಖದ ಸಾವು ಅವರದ್ದು. 60ರ ದಶಕದಲ್ಲಿ ಬಡಗುತಿಟ್ಟು ಯಕ್ಷಗಾನದ ರಂಗಸ್ಥಳದ ರಾಜನೆಂದೇ ಖ್ಯಾತಿ ಹೊಂದಿದ್ದ ಹಿರಿಯ ಪುರುಷ ವೇಷಧಾರಿ ಮೊಳಹಳ್ಳಿ ಹಿರಿಯ ನಾಯ್ಕರು ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.
ವಿಶಿಷ್ಟ ಸಂಯ್ಯೋಜನೆಯ ಹಿಮ್ಮೇಳವಿಲ್ಲದ ತರ್ಕ ಮದ್ದಳೆ : ``ಉರ್ವಶಿಯ ಸುತ್ತಮುತ್ತ ``
ಸದಾ ಹೊಸತನಗಳ ಅನ್ವೇಷಣೆಯಲ್ಲಿರುವ ಖ್ಯಾತ ರಂಗಕರ್ಮಿ ಉದ್ಯಾವರ ಮಾಧವಾಚಾರ್ಯರ ಚಿಂತನೆಯ ಪಲವಾಗಿ, ಸಮೂಹ ಸಂಯ್ಯೋಜನೆಯಲ್ಲಿ ಮೂಡಿಬಂದ ಇಡೀ ದಿನದ “ಉರ್ವಶಿಯ ಸುತ್ತಮುತ್ತ” ಎಂಬ ಚಿಂತನ ಮಂಥನ ಪ್ರದರ್ಶನದ ಅಂಗವಾಗಿ ಪ್ರದರ್ಶಿಸಲ್ಪಟ್ಟ, ಯಕ್ಷಗಾನ ರಂಗಭೂಮಿಯ ವಿಶಿಷ್ಟ ಪ್ರಯೋಗ. ಚೆಂಡೆ ಮದ್ದಳೆ ಭಾಗವತಿಕೆ ಇಲ್ಲದೇ ಪ್ರಣಯ ಪರಿತ್ಯಕ್ತೆಯ ಒಳಬೇಗುದಿಗೆ ಕೇವಲ ವಿಶಿಷ್ಟ ಸಂಭಾಷಣಾ ಸ್ಪರ್ಶ ನೀಡಲು ಪ್ರಯತ್ನಿಸಿದ ವಿಶಿಷ್ಟ “ತರ್ಕ ಮದ್ದಳೆ” ಕಾರ್ಯಕ್ರಮವು ಶೋತೃಗಳನ್ನು ಯಕ್ಷಗಾನ ರಂಗಭೂಮಿಯಲ್ಲಿ ಹೊಸತನದ ಲೋಕಕ್ಕೆ ಸೆಳೆದೊಯ್ಯಿತು.
ಯಕ್ಷರಂಗದ ಅಭಿಮನ್ಯು, ಅಭಿಜಾತ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ
ಬಡಗುತಿಟ್ಟು ಯಕ್ಷಗಾನ ರಂಗದ ಅಭಿಜಾತ ಕಲಾವಿದ ಸುಮಾರು ನಾಲ್ಕು ದಶಕಗಳ ಕಾಲ ಅಭಿಮನ್ಯು, ಬಬ್ರುವಾಹನದಂತ ಪುಂಡು ವೇಷಗಳಲ್ಲಿ ಮೆರೆದು ಕ್ರಾಂತಿ ಮೂಡಿಸಿ ಯಕ್ಷರಂಗದ ಅಭಿಮನ್ಯು, ಯಕ್ಷಗಾನದ ಸಿಡಿಲಮರಿ, ಚಿರಯುವಕ ಎಂಬಿತ್ಯಾದಿ ಬಿರುದು ಪಡೆದು ಪುಂಡುವೇಷದಲ್ಲಿ ವಿಶಿಷ್ಟ ಹೆಸರು ಮಾಡಿದ ತೀರ್ಥಳ್ಳಿ ಗೋಪಾಲಾಚಾರ್ಯರಿಗೆ ಈಗ ಪ್ರಾಯ ಅರವತ್ತು ವರ್ಷಗಳ ಸಂಭ್ರಮ. ವೇಷಗಾರಿಕೆಯ ಸೊಬಗು ಹಾಗೂ ಮಾತುಗಾರಿಕೆಯಮೋಡಿಯೂ ಅಷ್ಟೇ ಸೊಗಸು. ರಸಬಾವಗಳ ಪರಿಪೂರ್ಣ ಪೋಷಣೆಯಲ್ಲಿ ಅವರು ತೋರಿಸುವ ಅಸಾಧಾರಣ ಪ್ರತಿಭೆ ನಿಜಕ್ಕೂ ಪ್ರಶಂಸಾರ್ಹ.
2013-14ರಲ್ಲಿ ಯಕ್ಷಗಾನ ರಂಗದಲ್ಲಿ ಆದ ಸಿತ್ಯಂತರಗಳು ಮತ್ತು ಘಟನೆಗಳು
ಕಳೆದ ಒಂದು ಯಕ್ಷಗಾನೀಯ ವರ್ಷದಲ್ಲಿ ಅಂದರೆ 2013 ನವೆಂಬರ್ ನಿಂದ 2014 ದಶಂಬರ್ ವರೆಗೆ ಕರಾವಳಿಯ ಯಕ್ಷಗಾನ ರಂಗದಲ್ಲಿ ಹಲವಾರು ಸಿತ್ಯಂತರಗಳು ಬದಲಾವಣೆಗಳು ಆಗಿದೆ. ``ಯಕ್ಷಗಾನಕ್ಕೆ ಕಾಲಮಿತಿ ಅನಿವಾರ್ಯವೇ `` ಈ ಬಗ್ಗೆ ವಿಶೇಷ ಕಮ್ಮಟಗಳು, ಪ್ರಾರಂಭವಾದ ಹೊಸ ಹೊಸ ಮೇಳಗಳು, ಕನಿಷ್ಟ ಇನ್ನು ಹತ್ತು ವರ್ಷ ದುಡಿಯಬಲ್ಲ ಯೋಗ್ಯತೆ ಇದ್ದರೂ ನಿವೃತ್ತಿಯನ್ನು ಘೋಷಿಸಿದ ಕಲಾವಿದರು, ಮೇಳಗಳ ವಿವಿಧ ನೂತನ ಪ್ರಸ೦ಗಗಳು, ಯಕ್ಷಗಾನದಲ್ಲಿ ಯೋಗ್ಯರಿಗೆ ಸ೦ದ ಹಲವು ಪ್ರಶಸ್ತಿ ಪುರಸ್ಕಾರಗಳು, ಅಗಲಿದ ಕಲಾಚೇತನಗಳು...ಈ ಎಲ್ಲಾ ವಿಷಯಗಳ ಸಮಗ್ರ ಪಕ್ಷಿನೋಟ...
ವಿದ್ಯಾಮಾನ್ಯ ಪ್ರಶಸ್ತಿ ಪುರಸ್ಕ್ರುತ ಹಿರಿಯ ಸ್ತ್ರೀ ವೇಷಧಾರಿ ಪಾತಾಳ ವೆಂಕಟರಮಣ ಭಟ್
ಸ್ತ್ರೀ ವೇಷಧಾರಿಯಾಗಿ ಸುದೀರ್ಘ ಮೂರು ದಶಕಗಳ ಕಾಲ ರಂಗಸ್ಥಳದಲ್ಲಿ ಮಿಂಚಿದ ಪಾತಾಳ ವೆಂಕಟರಮಣ ಭಟ್ಟರು ಹಳೆಗಾಲದ ಯಕ್ಷಗಾನ ರಂಗರಸಿಕರ ಕನಸಿನ ಕನ್ಯೆ. ಕಾಂಚನ ಮೇಳ, ಬಡಗಿನ ಸೌಕೂರು ಮೇಳ, ಮೂಲ್ಕಿ ಸುರತ್ಕಲ್, ದರ್ಮಸ್ಥಳ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ಉಭಯ ತಿಟ್ಟಿನಲ್ಲಿ ರಂಗ ಸಾಮ್ರಾಜ್ನಿಯಾಗಿ ಮೆರೆದವರು. ಸ್ತ್ರೀ ಪಾತ್ರವಲ್ಲದೆ ಸಾತ್ವಿಕ ಪುಂಡುವೇಷಗಳಾದ ರಾಮ, ಲಕ್ಷ್ಮಣ, ವಿಷ್ಣು, ಕೃಷ್ಣ ಮುಂತಾದ ಪಾತ್ರಗಳಲ್ಲೂ ಮಿಂಚಿದವರು.
ಮದ್ದಳೆಯ ಮಾಂತ್ರಿಕ ಹಿರಿಯಡ್ಕ ಗೋಪಾಲ ರಾವ್
ಹಿರಿಯಡ್ಕ ಗೋಪಾಲರಾಯರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿ ವರ್ಷ 44 ಸಂದಿದೆ. 95 ವರ್ಷದ ಈ ಹಿರಿಯರು ಉಡುಪಿ ಪರಿಸರದಲ್ಲಿ ಯಕ್ಷಗಾನ ಹಾಗಲ್ಲದೆ ಸಾಹಿತ್ಯದ ಕುರಿತು ವಿಚಾರ ಸಂಕಿರಣ ಸಭೆ ಸಮಾರಂಭದಲ್ಲಿ ತಪ್ಪದೆ ಕಂಡು ಬರುವ ವ್ಯಕ್ತಿ. ದಶಕಗಳಿಂದ ಕಾಣುತ್ತಿರುವ ನಮ್ಮ ಮುಂದಿರುವ ಒಂದು ಬಿಳಿ ತಲೆ. ಯಕ್ಷಗಾನ ಲೋಕದ ಜೀವಂತ ದಂತ ಕಲೆಯಾಗಿರುವ ಇವರು ಸಂಘ ಸಂಸ್ಥೆಯವರು ಆಸಕ್ತರು ಕರೆದರೆ ಹೋಗಿ ತಮ್ಮ ಅನುಭವ ಪೂರ್ಣ ಮಾಹಿತಿ ತರಬೇತಿ ನೀಡುತ್ತಾರೆ. ಮದ್ದಳೆ ವಾದನದ ಗಂಟು ಉರುಳಿಕೆ, ಏರುಮದ್ದಳೆ, ಅಲ್ಲದೆ ಆಧುನಿಕ ಶಿಕ್ಷಣ ಪದ್ಧತಿಯು ಬಡಗುತಿಟ್ಟು ಯಕ್ಷಗಾನಕ್ಕೆ ರಾಯರ ಮೂರು ಮುಖ್ಯ ಕೊಡುಗೆಗಳು.
ಅಗ್ರಮಾನ್ಯ ಪುಂಡು ವೇಷಧಾರಿ ವಾಲ್ತೂರು ಕುಷ್ಟ ಮಡಿವಾಳ
ಸುಮಾರು ಐದು ದಶಕಗಳಿಗೂ ಅಧಿಕ ಕಾಲ ಬಡಗು ತಿಟ್ಟು ರಂಗಸ್ಥಳವನ್ನು ತನ್ನ ಪುಂಡು ವೇಷಗಳ ಮೂಲಕ ಪುಡಿಗೈದ ಅಗ್ರಮಾನ್ಯ ಕಲಾವಿದ ವಾಲ್ತೂರು ಕುಷ್ಟ ಮಡಿವಾಳರು. ಹಾರಾಡಿ ರಾಮಗಾಣಿಗರೊಂದಿಗೆ ರಂಗಸ್ಥಳ ಹಂಚಿಕೊಂಡ ಮಡಿವಾಳರಿಗೆ ಸ್ವತಹ ರಾಮಗಾಣಿಗರೇ ಶಹಬ್ಬಾಸ್ ಗಿರಿ ನೀಡಿದ್ದರು. ಜಾನುವಾರು ಕಟ್ಟೆ ಭಾಗವತರ ಏರು ಶ್ರುತಿಯ “ಉತ್ತಮ ಮಣಿಪುರದರಸನ ಚಾವಡಿ ಹತ್ತು ಸಾವಿರ ಕಂಬದಿ” ಪದ್ಯಕ್ಕೆ ಹಿರಿಯಡ್ಕ ಗೋಪಾಲರಾಯರ ಏರುಮದ್ದಳೆಯಲ್ಲಿ ಮಡಿವಾಳರು ಪುಂಡು ವೇಷದ ಬಬ್ರುವಾಹನನಾಗಿ ಹಾಕುತಿದ್ದ ಮಂಡಿ ಮತ್ತು ದಿಗಣ ಈಗ ನೆನಪು ಮಾತ್ರ.
ಬಡಗು ತಿಟ್ಟಿನ ಮಾಂತ್ರಿಕ ಚೆಂಡೆ ವಾದಕ ರಾಮಕೃಷ್ಣ ಮಂದಾರ್ತಿ
ಭಾಗವತರು ಮತ್ತು ಕಲಾವಿದರ ಮಟ್ಟದಲ್ಲಿ ವಾದನಗಾರರು ಗುರುತಿಸಲ್ಪಡುವುದಿಲ್ಲ ಎಂದು ವಾದನಗಾರರ ಅಳಲಿರುವ ಸುಮಾರು ಎಂಬತ್ತರ ದಶಕದಲ್ಲಿ ವಾದನಗಾರರು ಗುರುತಿಸಲ್ಪಡುವಂತೆ ಬಡಗುತಿಟ್ಟಿನಲ್ಲಿ ಪ್ರಯತ್ನಿಸಿರುವ ಕೆಮ್ಮಣ್ಣು ಆನಂದ, ಹೊಳೆಗದ್ದೆ ಗಜಾನನ, ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಬೇಳಂಜೆ ತಿಮ್ಮಪ್ಪ ನಾಯಕ್, ದುರ್ಗಪ್ಪ ಗುಡಿಗಾರ್, ಶಂಕರ ಭಾಗವತ, ಕರ್ಕಿ ಪ್ರಭಾಕರ ಭಂಡಾರಿ ಮುಂತಾದ ಖ್ಯಾತನಾಮ ವಾದನಗಾರರೊಂದಿಗೆ ಕೇಳಿ ಬರುವ ಇನ್ನೊಂದು ಹೆಸರು ರಾಮಕೃಷ್ಣ ಮಂದಾರ್ತಿಯವರದ್ದು.
ಅದ್ವೀತಿಯ ಬಣ್ಣದ ವೇಷಧಾರಿ ಸಕ್ಕಟ್ಟು ಲಕ್ಷ್ಮೀನಾರಯಣಯ್ಯ
ಬಡಗುತಿಟ್ಟು ಯಕ್ಷಗಾನದ ಬಣ್ಣದ ವೇಷಧಾರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಸಕ್ಕಟ್ಟು ಲಕ್ಮೀನಾರಾಯಣಯ್ಯನವರ 60ರ ದಶಕದಲ್ಲಿ ಅವರು ಮಂದಾರ್ತಿ ಮೇಳದಲ್ಲಿ ನಿರ್ವಹಿಸುತಿದ್ದ ಖಳ ಪಾತ್ರಗಳನ್ನು ನೋಡಿ ಮಕ್ಕಳು ಹೆದರಿ ಓಡುತಿದ್ದ ದೃಶ್ಯ ಸರ್ವೇ ಸಾಮನ್ಯವಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಚೌಕಿಯಲ್ಲಿ ಕುಳಿತು ಮುಖವರ್ಣಿಕೆ ಮಾಡಿಕೊಳ್ಳುವ ತಾಳ್ಮೆ ಇತರರಿಗೆ ಅನುಕರಣೀಯ. ದಿನವು ಹುಳಿ ಅಕ್ಕಿ ಹಿಟ್ಟಿನ ಚಿಟ್ಟೆ ಇಡುವ ಕ್ರಮ ಇವರದ್ದು.
ಹೊಸತನದ ಅನ್ವೇಷಕ, ಕ್ರಿಯಾಶೀಲ ಸಾಧಕ - ರಮೇಶ್ ಬೇಗಾರ್
ಮಲೆನಾಡಿನ ಸೊಬಗಿನ ಶಾರದಾಮಾತೆ ನೆಲೆನಿಂತ ಪುಣ್ಯಭೂಮಿ ಶೃಂಗೇರಿಯ ಮಣ್ಣಿನಲ್ಲಿ ಜನಿಸಿ ರಂಗಭೂಮಿ, ಕಿರುತೆರೆ, ಯಕ್ಷಗಾನ, ಪತ್ರಿಕೋದ್ಯಮ, ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಹಾಗೆ ಎಲ್ಲಾ ಕ್ಷೇತ್ರಗಳಲ್ಲು ಕೈಯಾಡಿಸಿ ಕ್ರೀಯಾಶೀಲ ವ್ಯಕ್ತಿತ್ವವನ್ನು ಬೆಳೆಸಿಕೊ೦ಡ ರಮೇಶನವರ ಬಣ್ಣದ ಬದುಕಿನ 25 ಸಂವಸ್ಸರದ ಕಾಲಘಟ್ಟದಲ್ಲಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸದಾ ಹೊಸತನವನ್ನು ನೀಡುತ್ತಾ ಬಂದಿರುವ ಇವರು ಕ್ರೀಯಾಶೀಲತೆಗೆ ಮಾದರಿ. 1986ರಿಂದ ಮೊದಲ್ಗೊಂಡು ಇಂದಿನವರೆಗೆ ತನ್ನ ಸೃಜನ ಶೀಲತೆ ಮೂಲಕ ಮಲೆನಾಡಿನಲ್ಲಿ ಒಂದು ಸಾಂಸ್ಕತಿಕ ತಲೆಮಾರನ್ನು ರೂಪಿಸಿದ ಕೀರ್ತಿ ಇವರಿಗೆ.
ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಕಲಾವಿದ ಬೇಗಾರ್ ಪದ್ಮನಾಭ ಶೆಟ್ಟಿಗಾರ್
ಬಡಗುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಮಹಾನ್ ಕೊಡುಗೆ ನೀಡಿದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಕಲಾವಿದರಲ್ಲಿ ಅಗ್ರಮಾನ್ಯ ಹೆಸರು ಬೇಗಾರು ಪದ್ಮನಾಭ ಶೆಟ್ಟಿಗಾರರದ್ದು. ಎಲೆಮರೆಯ ಕಾಯಿಯಾಗಿ ದೀರ್ಘಕಾಲ ಕಲಾಸೇವೆ ಮಾಡಿದ ಇವರಿಗೆ ಈಗ 66ರ ಹರೆಯ. ಮಟ್ಟಾಡಿ ಶೈಲಿಯ ಪ್ರಾತಿನಿಧಿಕರಾದ ಶ್ರೀನಿವಾಸ ನಾಯ್ಕರಲ್ಲಿ, ಹಾಗು ಕೃಷ್ಣ ಶೆಟ್ಟಿಗಾರರಲ್ಲಿ ಹೆಜ್ಜೆಗಾರಿಕೆ ಕಲಿತ ಇವರು ಗೋಪಾಲಕೃಷ್ಣ ಮಾಸ್ಟರಲ್ಲಿ ಮಾತುಗಾರಿಕೆಯ ಹದ ಕಲಿತುಕೊಂಡರು. ಇವರ ವೇಷಗಾರಿಕೆ, ಎತ್ತರದ ನಿಲುವು ಹೆಜ್ಜೆಗಾರಿಕೆಯಲ್ಲಿ ವೀರಭದ್ರನಾಯಕರ ಛಾಪನ್ನು ಗುರುತಿಸಬಹುದುದಾಗಿದೆ.
ಕಣ್ಮನ ತಣಿಸಿದ ನಾಡ ಚಾವಡಿ ಬಳಗದ ಕುಶಲವ ಯಕ್ಷಗಾನ ಪ್ರದರ್ಶನ
-
ಬಡಗು ಬೆಡಗಿನ ಮೋಹಕ ಸ್ತ್ರೀ ವೇಷಧಾರಿ ದಯಾನಂದ ನಾಗೂರ್
ಸುಮಾರು ಎಪ್ಪತ್ತರ ದಶಕದಲ್ಲಿ ಬಡಗುತಿಟ್ಟಿನ ಯಕ್ಷಗಾನ ರಂಗದ ಸ್ತ್ರೀಭೂಮಿಕೆಗೆ ಗಣನೀಯ ಕೊಡುಗೆ ನೀಡಿ ಖ್ಯಾತರಾದ ಅರಾಟೆ ಮಂಜುನಾಥ, ಕೋಟ ವೈಕುಂಠ, ಎಂ. ಎ. ನಾಯಕ್, ವಂಡ್ಸೆ ನಾರಾಯಣ ಗಾಣಿಗ, ಹೆರಂಜಾಲು ಸಹೋದರರು, ರಾಮ ನಾಯರಿ, ಹೊಸಂಗಡಿ ರಾಜೀವ ಶೆಟ್ಟಿ, ನೀಲಾವರ ಮಹಾಬಲ ಶೆಟ್ಟಿ ಮುಂತಾದವರ ಸಾಲಿನಲ್ಲಿ ಕೇಳಿ ಬರುವ ಇನ್ನೊಂದು ಹೆಸರು ಬಡಗಿನ ಮೋಹಕ ಸ್ತ್ರೀ ವೇಷಧಾರಿ ಎಂದು ಚಿರಪರಿಚಿತರಾದ ಸದ್ಯ ನಿವೃತ್ತಿಯಲ್ಲಿರುವ ಹಿರಿಯ ಕಲಾವಿದ ದಯಾನಂದ ನಾಗೂರರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಹಿರಿಯ ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗ
ಯಕ್ಷಗಾನಕ್ಕೆ ಒಲಿದು ಬಂದ ಈ ವರ್ಷದ ರಾಜ್ಯ ಪ್ರಶಸ್ತಿಗಳಲ್ಲಿ ಒಂದು ಬಡಗುತಿಟ್ಟಿನ ಹಿರಿಯ ಸ್ತ್ರೀವೇಷಧಾರಿ ವಂಡ್ಸೆ ನಾರಾಯಣ ಗಾಣಿಗರಿಗೆ ಸಹಜವಾಗಿಯೇ ಸಂದಿದೆ. ಸುಮಾರು 75 ವರ್ಷ ಪ್ರಾಯದ ನಾರಾಯಣ ಗಾಣಿಗರು ಐದು ದಶಕಗಳ ಕಾಲ ತಮ್ಮ ಪಾದರಸ ಸದೃಶವಾದ ವ್ಯಕ್ತಿತ್ವ, ಸ್ತ್ರೀಸಹಜ ಹಾವಭಾವ ಒನುಪು, ವೈಯ್ಯಾರ, ಕುಣಿತ, ಮಾತುಗಾರಿಕೆಯಿಂದ, ಪ್ರಸಿಧ್ಧ ಸ್ತ್ರೀ ವೇಷಧಾರಿಯಾಗಿ, ತೆಂಕು ಮತ್ತು ಬಡಗುತಿಟ್ಟಿನ ರಂಗಸ್ಥಳವನ್ನು ಶ್ರೀಮಂತಗೊಳಿಸಿದವರು. ಎಲೆಮರೆಯ ಕಾಯಿಯಾಗಿ ನಿವೃತ್ತ ಜೀವನವನ್ನು ಸಾಗಿಸುತ್ತಿರುವ ಗಾಣಿಗರು ಬಯಲಾಟ ರಂಗಸ್ಥಳದ ಅಪ್ರತಿಮ ಸ್ತ್ರೀವೇಷದಾರಿಯಾಗಿ ಜನಮನ ಸೂರೆಗೊಂಡವರು.
ಮಾತಿನ ಮೋಡಿಗಾರ ಮಂಕಿ ಈಶ್ವರ ನಾಯ್ಕ್ ಗೆ ``ಯಕ್ಷ ಭರವಸೆ`` ಪ್ರಶಸ್ತಿ
ಕಲಾಪೋಷಕ ಡಾ.ಶಾಂತಾರಾಮ್ ಅವರು ಕಳೆದ 3 ವರ್ಷದಿಂದ ತಿಟ್ಟು ಮಟ್ಟುಗಳ ಭೇದವಿಲ್ಲದೇ ಯಕ್ಷಗಾನವನ್ನು ಭವಿಷ್ಯತ್ತಿನೆಡೆಗೆ ಸಾಗಿಸಬಲ್ಲ ಯುವ ಪ್ರತಿಭಾವಂತ ವೃತ್ತಿ ಕಲಾವಿದರೊಬ್ಬರಿಗೆ ಡಾ.ಶಾಂತಾರಾಮ್ ಪುರಸ್ಕಾರ ನೀಡಿ ರಾಜ್ಯೋತ್ಸದಂದು ನೀಡಿ ಗೌರವಿಸುತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಈ ಪುರಸ್ಕಾರಕ್ಕೆ ಭಾಜನರಾದವರು ನಡುತಿಟ್ಟಿನ ಕುಂದಾಪುರ ಶೈಲಿಯ ಸ್ತ್ರೀವೇಷಧಾರಿ ಹೆನ್ನಾಬೈಲು ಸಂಜೀವ ಶೆಟ್ಟಿ ಮತ್ತು ತೆಂಕುತಿಟ್ಟಿನ ಪ್ರತಿಭಾವಂತ ಭಾಗವತ ಪಟ್ಲ ಸತೀಶ ಶೆಟ್ಟಿಯವರು. ಈ ವರ್ಷದ ರಾಜ್ಯೋತ್ಸವದಂದು ನವೆ೦ಬರ್ 1 ರಂದು ನೀಡುವ ಈ ಪ್ರಶಸ್ತಿಗೆ ಭಾಜನರಾಗುವವರು ಬಡಾಬಡಗುತಿಟ್ಟಿನ ಭರವಸೆಯ ಪ್ರತಿಭಾವಂತ ಯುವ ಕಲಾವಿದ ಮಂಕಿ ಈಶ್ವರ ನಾಯ್ಕರು.
ನೀಲಾವರ ಲಕ್ಷ್ಮೀನಾರಾಯಣಯ್ಯರವರಿಗೆ ಸಕ್ಕಟ್ಟು ಪ್ರಶಸ್ತಿ
ಬಡಗುತಿಟ್ಟು ಯಕ್ಷಗಾನ ರಂಗವನ್ನು ತನ್ನ ಬಣ್ನದ ಆರ್ಭಟದಿಂದ ಬೆರಗುಗೊಳಿಸಿ ಬಡಗುತಿಟ್ಟಿಗೊಬ್ಬರೇ ಸಕ್ಕಟ್ಟು ಎಂಬಷ್ಟು ಕೀರ್ತಿ ಗಳಿಸಿದ ಹಾರಾಡಿರಾಮ ಗಾಣಿಗ ಪ್ರಶಸ್ತಿ ಪುರಸ್ಕ್ರತ ಸಕ್ಕಟ್ಟು ಇಂದು ನಮ್ಮೊಂದಿಗಿಲ್ಲ. ಅವರ ಕುಟುಂಬದವರು ಅವರ ಹೆಸರಿನಲ್ಲಿ ಸಕ್ಕಟ್ಟು ಪ್ರತಿಷ್ಟಾನ ಹುಟ್ಟುಹಾಕಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಅದರಲ್ಲಿ ಪ್ರತೀ ವರ್ಷ ಸಕ್ಕಟ್ಟು ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನವೂ ಒಂದು. ಪ್ರತೀ ವರ್ಷ ಈ ಪ್ರಶಸ್ತಿಗೆ ಬಡಗಿನ ಹಿರಿಯ ಕಲಾವಿದರೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಈ ಸಾಲಿಗೆ ಈ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆಯಾದವರು ಹಿರಿಯ ಭಾಗವತ ಗಮಕಿ ಶಿಕ್ಷಕ ಸುಮಾರು 90 ವರ್ಷ ಪ್ರಾಯದ ವಯೋವೃದ್ದ ನೀಲಾವರ ಲಕ್ಷ್ಮೀನಾರಾಯಣ ರಾವ್.
ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರವರಿಗೆ ಸೀತಾನದಿ ಪ್ರಶಸ್ತಿ
ಯಕ್ಷಗಾನ ರಂಗದ ಪ್ರಸಿದ್ದ ಪ್ರಸಂಗಕರ್ತ ತಾಳಮದ್ದಳೆ ಅರ್ಥದಾರಿ. ವಾಗ್ಮಿ, ಸಾಹಿತಿ ಆದರ್ಶ ಅದ್ಯಾಪಕನಾಗಿ ಖ್ಯಾತಿವೆತ್ತ ದಿ. ಸೀತಾನದಿ ಗಣಪಯ್ಯ ಶೆಟ್ಟರ 27ನೇ ವರ್ಷದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್ 12 ಭಾನುವಾರದಂದು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಈ ಸಾಲಿನ ಸೀತಾನದಿ ಪ್ರಶಸ್ತಿಗೆ ಬಾಜನರಾಗುವವರು ತೆಂಕುತಿಟ್ಟಿನ ಗಾನಕೋಗಿಲೆ ಬಿರುದಾಂಕಿತ ಪ್ರಸಿದ್ದ ಭಾಗವತರಾದ ದಿನೇಶ ಅಮ್ಮಣ್ಣಾಯರು. ತೆಂಕುತಿಟ್ಟು ಯಕ್ಷಾಗಾನದ ಸಮಕಾಲೀನ ಅಗ್ರಪಂಕ್ತಿಯ ಭಾಗವತರಲ್ಲಿ ದಿನೇಶ ಅಮ್ಮಣ್ಣಾಯರು ಒಬ್ಬರು. ಆದುನಿಕ ಹಿಮ್ಮೇಳಪ್ರೀಯರಿಂದ ಗಾನಕೋಗಿಲೆ, ಮದುರ ಗಾನದ ಸಿರಿ, ಯಕ್ಷ ಸಂಗೀತ ಕೌಸ್ತುಭ ಮುಂತಾದ ಬಿರುದನ್ನು ಪಡೆದ ಇವರು ಬಹುಬೇಡಿಕೆಯ ಭಾಗವತರು.
ಬಡಗು ಪರಂಪರೆಯ ಹಿರಿಯ ಕಲಾವಿದ ಹೊಳೆಮಗೆ ನಾಗಪ್ಪ ಹಾಸ್ಯಗಾರ
ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಹಾಸ್ಯಗಾರರ ಸಾಲಿನಲ್ಲಿ ಕೇಳಿಬರುವ ಹಿರಿಯ ಹೆಸರು ಹೊಳೆಮಗೆ ನಾಗಪ್ಪ ಹಾಸ್ಯಗಾರರದ್ದು. ಕಲಾಭಿಮಾನಿಗಳಿಂದ ಹೊಳೆಮಗೆ ಹಾಸ್ಯಗಾರರೆಂದೆ ಕರೆಯಲ್ಪಡುವ ಇವರದ್ದು ಹಾಸ್ಯ ಪರಂಪರೆಯಲ್ಲಿ ಹಿರಿಯ ಹೆಸರು. ವಿದುಷ ವಿದೂಷಕನಾಗಿ ಬಡಗು ರಂಗಸ್ಥಳವನ್ನು ದೀರ್ಘಕಾಲ ಆಳಿದ ಇವರು ಯಕ್ಷಗಾನ ರಂಗದಲ್ಲಿ ನಗೆ ವ್ಯಂಜನದ ರಮ್ಜನೆಯನ್ನು ಕಲಾರಸಿಕರಿಗೆ ಉಣಬಡಿಸಿದವರು.
ಕಂಚಿನ ಕಂಠದ ಭಾಗವತ ಶಿರೋಮಣಿ ಮರವಂತೆ ನರಸಿಂಹದಾಸರು
ಬಡಗು ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಸುಮಾರು ಅರವತ್ತು, ಎಪ್ಪತ್ತರ ದಶಕದಲ್ಲಿ ತಮ್ಮ ಕಂಚಿನ ಕಂಠದಿಂದ ಜನಮನ ರಂಜಿಸಿದವರು ಮರವಂತೆಯ ದಾಸ ಸಹೋದರರಾದ ನರಸಿಂಹದಾಸ ಮತ್ತು ಶೀನದಾಸರು. ಕರಾವಳಿ ಕರ್ನಾಟಕದಲ್ಲಿ “ದಾಸ ಶೈಲಿ” ಎಂಬ ಹೊಸ ಭಾಗವತಿಕೆಯ ಶೈಲಿಯನ್ನು ಹುಟ್ಟುಹಾಕಿದ ಇವರು ಅವರದ್ದೇ ಆದ ಅಭಿಮಾನಿಗಳನ್ನು ಆ ಕಾಲದಲ್ಲಿ ಹೊಂದಿದ್ದರು. ಎಂಬತ್ತರ ದಶಕದಲ್ಲೆ ರಾಜ್ಯ ಪ್ರಶಸ್ತಿಯಿಂದ ಪುರಸ್ಕೃತರಾದ ಇವರು ಕರಾವಳಿಯ ಜನಮಾನಸದಲ್ಲಿ ಇಂದಿಗೂ ನೆಲೆ ನಿಂತವರು.
ಲಾಲಿತ್ಯಪೂರ್ಣ ಸ್ತ್ರೀವೇಷಧಾರಿ ಹೆರಂಜಾಲು ಸುಬ್ಬಣ್ಣ ಗಾಣಿಗ
ಹಾರಾಡಿ ಕಲಾವಿದರ ಮೈಯ ರೇಖೆ, ಬಳುಕು, ಅಭಿನಯ, ಲಾಲಿತ್ಯಪೂರ್ಣ ರಂಗಚಲನೆ, ಲಾಸ್ಯದಿಂದ ಕೂಡಿದ ಹೆಜ್ಜೆಗಾರಿಕೆ, ಸುಮಧುರ ಕಂಠ ಮಾದುರ್ಯ, ಇವೆಲ್ಲವನ್ನು ಮೈಗೂಡಿಸಿಕೊಂಡವರು ಹೆರಂಜಾಲು ಸುಬ್ಬಣ್ಣ ಗಾಣಿಗರು. ಬಡಗು ತಿಟ್ಟು ಸಾಂಪ್ರದಾಯೀಕ ಯಕ್ಷಗಾನಕ್ಕೆ ಹೆರಂಜಾಲು ಕುಟುಂಬದವರ ಕೊಡುಗೆ ಅಪಾರ. ಸುಬ್ಬಣ್ಣ ಗಾಣಿಗರ ಸಹೋದರ ವೆಂಕಟರಮಣ ಗಾಣಿಗರಿಗೆ ಯಕ್ಷಗಾನ ಹಿಮ್ಮೇಳ ಮುಮ್ಮೇಳಗಳಲ್ಲಿ ಅಪಾರ ಪರಿಣತಿಯಿದ್ದು ದಶಾವಾತಾರಿ ಎಂದು ಖ್ಯಾತರಾಗಿ ಉಡುಪಿ ಯಕ್ಷಗಾನ ಕೇಂದ್ರದ ಗುರುವಾಗಿಯೂ ಸೇವೆಸಲ್ಲಿಸಿದ್ದರು.
ಐವತ್ತರ ಸಡಗರದಲ್ಲಿ ಬಡಗು ಬೆಡಗಿನ ಕಲಾವಿದ ಕೋಡಿ ವಿಶ್ವನಾಥ ಗಾಣಿಗ
ಬಡಗುತಿಟ್ಟಿನ ಬಯಲಾಟ ಪರಂಪರೆಯಲ್ಲಿ ಸಮಕಾಲೀನವಾಗಿ ಎದ್ದು ಕಾಣುವ ಹೆಸರು ವಿಶ್ವನಾಥ ಗಾಣಿಗರದ್ದು. ಸಿದ್ದಿ ಹಾಗೂ ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಇವರೊಬ್ಬ ಶಿಷ್ಟ ಕಲಾವಿದರು. ಅವರಲ್ಲಿ ಬಹಳಷ್ಟು ಗಮನಿಸ ಬೇಕಾಗಿದ್ದು ವೇಷಗಾರಿಕೆಯ ಸೊಗಸು ಮತ್ತು ಮಾತುಗಾರಿಕೆಯ ಮೋಡಿ. ಇವೆಲ್ಲದರಲ್ಲೂ ಅವರ ಸೋದರಮಾವ ರಾಜ್ಯ ಪ್ರಶಸ್ತಿ ವಿಜೇತ ಕೋಡಿ ಶಂಕರಗಾಣಿಗರ ಪ್ರಭಾವವನ್ನು ಗುರುತಿಸಬಹುದು, ನೂರಕ್ಕೆ ನೂರು ಯಕ್ಷಗಾನ ಶೈಲಿಯಲ್ಲಿ ಧ್ವನಿವರ್ಧಕವಿಲ್ಲದೆ ಬಹುದೂರ ಕೇಳಿಸುವ ಕಂಠ, ವ್ಯಾಕರಣಬಧ್ಧ ಪ್ರೌಢ ಶೈಲಿಯ ಮಾತುಗಾರಿಕೆ, ಸ್ಪಷ್ಟ ಉಚ್ಛಾರ, ನಿರರ್ಗಳ, ನಿರಾಯಾಸ, ನಿರಾತಂಕವಾಗಿ ಹರಿದು ಬರುವ ಮಾತುಗಾರಿಕೆ, ಶ್ರೇಷ್ಟ ನಿರೂಪಣಾ ಸಾಮರ್ಥ್ಯದಿಂದ ಗಾಣಿಗರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ.
ಹವ್ಯಾಸಿ ರಂಗಭೂಮಿಯ ದಶಾವತಾರಿ ಹಳ್ಳಾಡಿ ಸುಬ್ರಾಯ ಮಲ್ಯ
ಕೆನ್ನೆಯಲ್ಲಿ ಹಾಲಿನ ಹನಿಗಳು ಆರುವ ಮುನ್ನವೇ ನಾದ-ನಿನಾದ-ಸುನಾದಗಳ ರಸರೋಮಾಂಚನಗಳ ಅದ್ಬುತ ಯಕ್ಷಲೋಕದಿಂದ ಆಕರ್ಷಿತರಾಗಿ ಅದನ್ನೇ ವೃತ್ತಿಯಾಗಿಸಿಕೊಂಡು ಹವ್ಯಾಸಿ ಯಕ್ಷಗಾನ ರಂಗಭೂಮಿಯ ಅವಿಭಾಜ್ಯ ಅಂಗವಾಗಿ ನಿರಂತರವಾಗಿ ಕುಂದಾಪುರ ಉಡುಪಿ ಪರಿಸರದಲ್ಲಿ ನೂರಾರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ಸಾವಿರಾರು ಹವ್ಯಾಸಿಗಳನ್ನು ಕಲಾವಿದರನ್ನಾಗಿ ಮಾಡುವಲ್ಲಿ ಹಗಳಿರುಳೆನ್ನದೆ ನಿರಂತರ ಯಕ್ಷಮಾತೆಯ ಸೇವೆಮಾಡಿ ಹೆಜ್ಜೆ ಹೆಗ್ಗುರುತು ಮೂಡಿಸಿದ ಅನನ್ಯ ಸಾಧಕ ಹಳ್ಳಾಡಿ ಸುಬ್ರಾಯ ಮಲ್ಯರವರು.
ಮೂರೂ ತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿ ಪುಂಡರೀಕಾಕ್ಷ ಉಪಾಧ್ಯಾಯ
ಎಪ್ಪತ್ತೆರಡರ ಇಳಿ ಹರೆಯದಲ್ಲೂ ದೇವಿ ಮಹಾತ್ಮೆಯ ದೇವಿಯಾಗಿ ಆಸ್ತೀಕರ, ಭಾವುಕ ಕಲಾರಸಿಕರ ಹೃದಯದಲ್ಲಿ ಭಕ್ತಿಭಾವ ಚಿಮ್ಮಿಸುವ ಪುಂಡರೀಕಾಕ್ಷ ಉಪಾದ್ಯಾಯರು ಸ್ತ್ರೀವೇಷದ ಮೂಲಕ ಕಳೆದ ಐದು ದಶಕಗಳ ಕಾಲ ಉತ್ತರದ ಕಾರವಾರದಿಂದ ದಕ್ಷಿಣದ ಕಾಸರಗೋಡಿನವರೆಗೆ ಅಪಾರ ಕಲಾಭಿಮಾನಿಗಳ ಪ್ರೀತಿ ಅಭಿಮಾನಕ್ಕೆ ಪಾತ್ರರಾದವರು. ಕನ್ನಡ ತುಳು ಭಾಷೆ, ತೆಂಕು ಬಡಗುತಿಟ್ಟು ಹೀಗೆ ಎರಡೂಕಡೆ ಸೈ ಎಣಿಸಿಕೊಂಡ ಇವರು ಸದ್ಯ ಕಳೆದ 22 ವರ್ಷಗಳಿಂದ ಕಟೀಲು ಮೇಳದ ಪ್ರದಾನ ಸ್ತ್ರೀವೇಷಧಾರಿಯಾಗಿ ಗುರುತಿಸಿಕೊಂಡಿದ್ದಾರೆ. ಸರಳ ಸಜ್ಜನ, ನಿರಾಡಂಬರ ವ್ಯಕ್ತಿತ್ವದ ಇವರು ಯಜಮಾನರ ಮತ್ತು ಕಲಾವಿದರ ವಲಯದಲ್ಲಿ ಸರ್ವರಿಗೂ ಪ್ರೀತಿಯ ಹಾಗೂ ಗೌರವದ ವ್ಯಕ್ತಿ.
ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಯಕ್ಷಗಾನದ ಹಿರಿಯ ಮೊಳಹಳ್ಳಿ ಹೆರಿಯ ನಾಯ್ಕರು
ಸುಧನ್ವ, ಅರ್ಜುನ, ಪುಷ್ಕಳನ ಪಾತ್ರದಲ್ಲಿ ಬಂದರೆ ಹಾರಾಡಿ ಕುಷ್ಟ ಗಾಣಿಗರ ಜಾಪು, ತಾಮ್ರದ್ವಜನಾಗಿ ಅತಿಕಾಯನಾಗಿ ಬಂದರೆ ವೀರಭದ್ರ ನಾಯಕರ ಕುಣಿತ. ಶ್ರೀ ಕೃಷ್ಣನಾಗಿ ದೇವವ್ರತ ಪರಶುರಾಮನಾಗಿ ಬಂದರೆ ಶಿರಿಯಾರ ಮಂಜುನಾಯಕರ ಲಾಲಿತ್ಯಪೂರ್ಣ ಕುಣಿತ ಶ್ರುತಿಬದ್ದ ಮಾತುಗಾರಿಕೆ. ಈ ಮೂವರನ್ನು ಒಮ್ಮೆಲೆ ನೋಡಬೇಕಾದರೆ ಹಿರಿಯ ಕಲಾವಿದ ಸುಮಾರು ಅರವತ್ತರ ದಶಕದಲ್ಲಿ ಬಡಗುತಿಟ್ಟು ರಂಗಸ್ಠಳವನ್ನು ಆಳಿದ ಮೊಳಹಳ್ಳಿ ಹೆರಿಯನಾಯಕರ ವೇಷವನ್ನು ನೋಡಬೇಕು. ಸುಮಾರು 76 ವರ್ಷ ಪ್ರಾಯದ ಹೆರಿಯ ನಾಯ್ಕರು ಹಾರಾಡಿ ಮಟ್ಟ್ಪಾಡಿ ತಿಟ್ಟುಗಳೆರಡರ ಪ್ರಾತಿನಿಧಿಕ ಕಲಾವಿದರು.
ಯಕ್ಷಗಾನದ ಮೇರು ಸ್ತ್ರೀವೇಷಧಾರಿ ಕೊಕ್ಕರ್ಣೆ ನರಸಿಂಹ ಕಾಮತ್
ಸುಮಾರು 130 ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಅಗ್ರಪಂಕ್ತಿಯ ಸ್ತ್ರೀ ವೇಷಧಾರಿಯಾಗಿ ದಂತಕತೆಯಾಗಿ ಮೆರೆದ ಕೊಕ್ಕರ್ಣೆ ನರಸಿಂಹ ಕಾಮತರು ಕೀರ್ತಿಯ ಉತ್ತುಂಗಕ್ಕೇರಿ ಬಡಗುತಿಟ್ಟಿನ ಹೆಸರನ್ನು ನಾಡಿನಾದ್ಯಂತ ಪಸರಿಸಿದವರು. ಕೊಕ್ಕರ್ಣೆ ನರಸಿಂಹ ಕಾಮತರು ಇಂದು ನಮ್ಮನ್ನಗಲಿದ ಬಡಗುತಿಟ್ಟಿನ ಅಗ್ರಮಾನ್ಯ ಸ್ತ್ರೀ ವೇಷಧಾರಿಗಳಲ್ಲಿ ಅಗ್ರಮಾನ್ಯರು.
ತ್ರಿಕಣ್ಣೇಶ್ವರಿ ಪ್ರಶಸ್ತಿ ಪುರಸ್ಕ್ರತ ಹಿರಿಯ ಸ್ತ್ರೀವೇಷದಾರಿ ಮಾರ್ಗೋಳಿ ಗೋವಿಂದ ಸೇರೆಗಾರ್
ಬಡಗುತಿಟ್ಟು ಯಕ್ಷಗಾನದ ಅಗ್ರಪಂಕ್ತಿಯ ಸ್ತ್ರೀವೇಷದಾರಿಗಳಲ್ಲಿ ಹಿರಿಯ ಸ್ತ್ರೀ ಪಾತ್ರಧಾರಿ ಮಾರ್ಗೋಳಿಯವರು ಒಬ್ಬರು. ಬಡಗುತಿಟ್ಟು ಸಂಪ್ರದಾಯದ ಸ್ತ್ರೀವೇಷಗಳ ಪ್ರಾತಿನಿಧಿಕ ಕಲಾವಿದರೆಂದು ಗುರುತಿಸಲ್ಪಟ್ಟ ಇವರು ಯಕ್ಷಗಾನಕ್ಕೆ ಸಂಬಂದಪಟ್ಟ ಗೋಷ್ಟಿ, ವಿಚಾರ ವಿನಿಮಯಗಳಲ್ಲಿ ಅನಿವಾರ್ಯ ಸಂಪನ್ಮೂಲ ವ್ಯಕ್ತಿ. ಸುಮಾರು 85 ವರ್ಷದ ಹಿರಿಯರು ಈಗಲೂ ಯಕ್ಷಗಾನ ಸ೦ಬ೦ಧಿ ಕಾರ್ಯಕ್ರಮದಲ್ಲಿ ಭಾಗವಹಿಸುದಲ್ಲದೇ ಅನೇಕ ಶಿಷ್ಯರಿಗೆ ಹೆಜ್ಜೆಗಾರಿಕೆ ಕಲಿಸುತಿದ್ದಾರೆ.
ಮಾತು ನಿಲ್ಲಿಸಿ ಮಂಚಕ್ಕೊರಗಿದ ಯಕ್ಷರಂಗದ ಜ್ವಾಲೆ ಅರಾಟೆ ಮಂಜುನಾಥ
ಬಡಗುತಿಟ್ಟು ಯಕ್ಷಗಾನದ ಸ್ತ್ರೀವೇಷಧಾರಿಗಳಲ್ಲಿ ಅಗ್ರ ಪಂಕ್ತಿಯ ಹೆಸರು ಅರಾಟೆ ಮಂಜುನಾಥನವರದ್ದು. ಯಕ್ಷಗಾನದ ಇತಿಹಾಸದಲ್ಲಿ ಕಲಾವಿದನೊಬ್ಬ ಅದರಲ್ಲೂ ಸ್ತ್ರೀಪಾತ್ರಧಾರಿಯೊಬ್ಬರು ಬಹು ಪ್ರಸಿಧ್ಧಿ ಪಡೆದು ಸಮಾಜದಲ್ಲಿ ಕಲಾವಿದರ ಗಡಣದಲ್ಲಿ ರಾಜಕೀಯ ರಂಗದಲ್ಲೂ ವಿಶಿಷ್ಟ ವ್ಯಕ್ತಿತ್ವದಿಂದ ಮೇರುಪಂಕ್ತಿಯಲ್ಲಿ ಗುರುತಿಸಿಕೊಂಡಿದ್ದು ಅಪರೂಪದ ಸಾಧನೆ. ಯಕ್ಷಲೋಕದ ಮಾಯಾಂಗನೆ, ಮಿನುಗುತಾರೆ ಎಂದು ಅಭಿಮಾನಿಗಳಿಂದ ಕರೆಸಿಕೊಂಡ ಇವರು ಪುಂಡು ವೇಷಧಾರಿಯಾಗಿ, ಸ್ತ್ರೀವೇಷಧಾರಿಯಾಗಿ, ಮೇಳದ ಸಂಚಾಲಕನಾಗಿ, ಶ್ರೇಷ್ಟ ಸಂಘಟಕನಾಗಿ, ರಾಜ್ಯಾದ್ಯಂತ ದೂರದ ಬೆಂಗಳೂರು ಮುಂಬೈಗಳಲ್ಲಿ ತನ್ನದೇ ಆದ ಅಭಿಮಾನಿಗಳನ್ನು ಹುಟ್ಟುಹಾಕಿದವರು
ಕಳಚಿದ ಬಡಗುತಿಟ್ಟು ಹಾಸ್ಯದ ಕೊಂಡಿ, ಕುಂಜಾಲು ರಾಮಕೃಷ್ಣ ಹಾಸ್ಯಗಾರ್ ಇನ್ನಿಲ್ಲ
ಬಡಗುತಿಟ್ಟು ಹಾಸ್ಯಗಾರಿಕೆಯಲ್ಲಿ ಮನೆಮಾತಾದ, ಪೌರಾಣಿಕ ಹಾಸ್ಯ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ ಕುಂಜಾಲು ಹಾಸ್ಯ ಶೈಲಿ ಎನ್ನುವ ಹೊಸ ಹಾಸ್ಯ ಶೈಲಿಯನ್ನು ಹುಟ್ಟು ಹಾಕಿದ ಅಭಿನವ ಯಕ್ಷಗಾನದ ತೆನ್ನಾಲಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತ ಹಾಸ್ಯರಾಜ ಕುಂಜಾಲು ರಾಮಕೃಷ್ಣ ಇನ್ನಿಲ್ಲ.
ಕಂಚಿನ ಕಂಠದ ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ
ಇದು ಸುಮಾರು ಅರವತ್ತು ದಶಕಗಳ ಹಿಂದಿನ ಮಾತು. ಹಂಗಾರಕಟ್ಟೆಯಲ್ಲಿ ಮಂದಾರ್ತಿ ಮತ್ತು ಅಮೃತೇಶ್ವರಿ ಮೇಳಗಳ ಜೋಡಾಟ ತೀವ್ರ ಪೈಪೋಟಿಯಿಂದ ನೆಡೆದಿತ್ತು. ಸೈ೦ಧವ ವಧೆ ಪ್ರಸಂಗದಲ್ಲಿ ಸಮಸಪ್ತಕರನ್ನು ಸದೆ ಬಡಿದ ಅರ್ಜುನನಾಗಿ ಬಡಗುತಿಟ್ಟಿನ ದಂತ ಕಥೆ ಹಾರಾಡಿ ದಿ.ಕುಷ್ಟ ಗಾಣಿಗರು ತನ್ನ ಪಾಳಯಕ್ಕಾಗಿ ಹಿಂದಿರುಗುವಾಗ ಮಂಗಳಾಂಗಿನಿಯರು ಆರತಿಯೆತ್ತಿ ಸ್ವಾಗತಿಸುತ್ತಾರೆ. ಭಾಗವತರು ”ರತುನದಾರತಿಯೆತ್ತಿ” ಪದವನ್ನು ಏರು ಧ್ವನಿಯಲ್ಲಿ ಹಾಡುತಿದ್ದಂತೆ ಅಪಶಕುನದ ಛಾಯೆ ಗುರುತಿಸಿದ ಅರ್ಜುನ ಆರತಿ ತಟ್ಟೆಯನ್ನು ಬಲಗೈಯಿಂದ ಎತ್ತಿ ಹಾರಿಸಿದಾಗ ಭಾಗವತರ ಸನಿಹದಲ್ಲೇ ತಟ್ಟೆ ಬಿತ್ತಾದರೂ ಅದೇ ತಾದಾತ್ಮ್ಯ ಹೊಂದಿ ಭಾಗವತರು ಹಾಡುತಿದ್ದರು.
ಅಗ್ರಮಾನ್ಯ ಪುರುಷ ವೇಷಧಾರಿ ಹಳ್ಳಾಡಿ ಮಂಜಯ್ಯ ಶೆಟ್ಟಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ‘ಅಭಿನವ ಶಿರಿಯಾರ ಮಂಜು’ ಎಂದು ಖ್ಯಾತರಾದ ಹಳ್ಳಾಡಿ ಮಂಜಯ್ಯ ಶೆಟ್ಟರು‌, ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ, ಬಡಗುತಿಟ್ಟಿನ ಅಗ್ರಶ್ರೇಣಿಯ ಪುರುಷ ವೇಷಧಾರಿಯಾದ ಇವರು ತನ್ನ ವೃಧ್ಧಾಪ್ಯದಲ್ಲಿ ಅಕಾಡೆಮಿಯ ಗೌರವ ಪಡೆದವರು. ಹಳ್ಳಾಡಿಯವರಲ್ಲಿ ಬಹವಾಗಿ ಗಮನಿಸಬೇಕಾಗಿದ್ದು ವೇಷಗಾರಿಕೆಯ ಸೊಗಸು ಮತ್ತು ಮಾತುಗಾರಿಕೆಯ ಮೋಡಿ. ಇವೆಲ್ಲದರಲ್ಲಿಯೂ ಅವರಿಗೆ ಸಮಕಾಲೀನರಾದ ಶಿರಿಯಾರ ಮಂಜುನಾಯ್ಕರ ಪ್ರಭಾವವನ್ನು ಕಾಣ ಬಹುದಾಗಿದೆ. ಪಾರಿಜಾತ ಪ್ರಕರಣದ ಕೃಷ್ಣನಿರಲಿ, ರತಿ ಕಲ್ಯಾಣ, ಜಾಂಬವತಿ ಕಲ್ಯಾಣ ಹೀಗೆ ಯಾವುದೇ ಪ್ರಸಂಗದ ಕೃಷ್ಣನಿರಲಿ ಅಲ್ಲಿ ಶಿರಿಯಾರದವರ ವೇಷದ ಮೋಡಿಯನ್ನು ಹಳ್ಳಾಡಿಯವರಲ್ಲಿ ಗುರುತಿಸಬಹುದು
ಯಕ್ಷಗಾನೀಯ ಕಂಠದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್
ಬಡಗುತಿಟ್ಟಿನ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟರಿಗೆ ಈ ವರ್ಷ ತನ್ನ ಯಕ್ಷ ತಿರುಗಾಟದ ಮೂವತ್ತರ ಸಂಭ್ರಮ. ಸರಿದಾರಿಯಲ್ಲಿ ಸಾಗಿಬಂದ ಕಲಾವಿದ ಯಾವೊತ್ತೂ ಬಡವನಾಗಲಾರ, ಕಲಾವಿದನಾದವನಿಗೆ ಸಾಮಾಜಿಕ ಹೊಣೆಗಾರಿಕೆ ಇದೆ, ತತ್ವ, ಆದರ್ಶ ನೈತಿಕತೆ ಸಚ್ಚಾರಿತ್ಯ, ಶಿಸ್ತು ಕಲಾವಿದನಾದವ ಮೈಗೂಡಿಸಿಕೊಂಡಿರಬೇಕು, ಕಲಾವಿದನ ಹಗಲು ವ್ಯವಹಾರ, ನಡೆತೆಗಳು ಅವರ ಬೆಳವಣಿಗೆಗೆ ಸಹಾಯಕವಾಗಿರಬೇಕೆಂಬ ಅಂಶವನ್ನು ಮನಗಂಡು ಕಲಾಸೇವೆ ಮಾಡಿದ ಕಲಾವಿದರಿವರು.
ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣ ಹಾಸ್ಯಗಾರ್
ಬಡಗುತಿಟ್ಟಿನ ಸಾಂಪ್ರದಾಯದ ಒಲುಮೆಯುಲ್ಲ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವ ಹೆಸರು ಕುಂಜಾಲು ರಾಮಕೃಷ್ಣರದ್ದು. ತನ್ನ ಪರಂಪರೆಯ ಶೈಲಿಯ ಹಾಸ್ಯದಿಂದ ಸಹಸ್ರಾರು ಪ್ರೇಕ್ಷಕರನ್ನು ಸೆರೆಹಿಡಿದ ಇವರು ರಸಿಕರಿಂದ ಹಾಸ್ಯಚಕ್ರವರ್ತಿ ಎಂಬ ಅನ್ವರ್ಥ ನಾಮ ಪಡೆದವವರು. ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದ ಇವರು ಬದುಕಿಗಾಗಿ ಪಟ್ಟ ಬವಣೆ ವರ್ಣಿಸಲಸದಳ. ಸಹಸ್ರಾರು ಪ್ರೇಕ್ಷಕರಿಂದ ಅನುಕಂಪಕ್ಕೆ ಒಳಗಾದ ಇವರಿಗೆ ಸ್ಪಂದಿಸಿದ ಸಂಘ ಸಂಸ್ಥೆಗಳು, ವ್ಯಕ್ತಿಗಳು ಸಾವಿರಾರು ಮಂದಿ.
ಯಶಸ್ವಿ ಪ್ರಸಂಗಕರ್ತ, ಕಲಾತಪಸ್ವಿ ಡಾ. ವೈ. ಚಂದ್ರಶೇಖರ ಶೆಟ್ಟಿ
ವೃತ್ತಿಗಾಗಿ ಕೈಯಲ್ಲಿ ಸ್ಟೆತೋಸ್ಕೋಪ್ ಹಿಡಿದು ಆದರ್ಶ ವೈದ್ಯನಾಗಿ ಪ್ರವೃತ್ತಿಗಾಗಿ ರಂಗಕಲೆಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಕುಂದಾಪುರದ ಸಾಂಸ್ಕೃತಿಕ ರೂವಾರಿ, ಡಾ. ವೈ. ಚಂದ್ರಶೇಖರ ಶೆಟ್ಟಿಯವರು . ಬದುಕಿನುದ್ದಕ್ಕೂ ವೃತ್ತಿಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ರಂಗಕಲೆಗಳಿಗಾಗಿ ವೃತ್ತಿಯಲ್ಲಿನ ಭಡ್ತಿಗಳನ್ನೂ ಬಯಸದೆ ಸರಕಾರಿ ವೈದ್ಯನಾಗಿ ನಾಟಕದ ನಟನಾಗಿ, ಪ್ರಸಂಗಕರ್ತನಾಗಿ, ಯಕ್ಷಗಾನದ ಸ್ತ್ರೀವೇಷಧಾರಿಯಾಗಿ ಸಂಗೀತ, ನೃತ್ಯ ನಿರ್ದೇಶಕನಾಗಿ ಬಹುಮುಖ ಪ್ರತಿಭೆಯೊಂದಿಗೆ ತನ್ನನ್ನು ತೊಡಗಿಸಿಕೊಂಡ ಇವರು ಕುಂದಾಪುರದ ಸಾಂಸ್ಕೃತಿಕ ಲೋಕಕ್ಕೆ ಭದ್ರ ಬುನಾದಿಯನ್ನು ಹಾಕಿದವರು. ವಿದ್ಯಾವಂತರು ಸಮಾಜದ ಮೇಲು ವರ್ಗದವರು ಯಕ್ಷಗಾನವನ್ನು ನೋಡಲು ಸಹ ಹಿಂಜರಿಯುತಿದ್ದ ಕಾಲದಲ್ಲಿ ಅಂದಿನ ವಕೀಲರಾದ ಎಂ. ಎಂ. ಹೆಗ್ಡೆಯವರ ಪ್ರೇರಣೆಯೊಂದಿಗೆ ಕುಲೀನ ಮನೆತನದ ಹುಡುಗನೊಬ್ಬ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ್ದೇ ಒಂದು ಸಾದನೆ, ಸಾಹಸ.
ಯಕ್ಷಗಾನ-ಶಾಸ್ತ್ರೀಯ ಸಂಗೀತಗಳ ಸಮನ್ವಯ ಭಾಗವತ ನಾರಾಯಣ ಶಬರಾಯ
ಯಕ್ಷಗಾನದ ಎರಡು ಪ್ರಮುಖ ತಿಟ್ಟುಗಳಾದ ತೆಂಕು ಮತ್ತು ಬಡಗುತಿಟ್ಟಿನ ಸಮರ್ಥ ಭಾಗವತರಾದ ಶಬರಾಯರು, ತೆಂಕು. ಬಡಗು ಹಾಗೂ ಉತ್ತರ ಕನ್ನಡದ ಮಹಾ ಮಹಾ ಕಲಾವಿದರನ್ನು ರಂಗದಲ್ಲಿ ಕುಣಿಸಿದವರು. ಕಡತೋಕ ಮಂಜುನಾಥ ಭಾಗವತರು ಮತ್ತು ಮರವಂತೆ ನರಸಿಂಹ ದಾಸರ ನಂತರದ ಪೀಳಿಗೆಯಲ್ಲಿ ತೆಂಕು ಮತ್ತು ಬಡಗಿನಲ್ಲಿ ಸಮರ್ಥವಾಗಿ ಹಾಡಬಲ್ಲ ಏಕಮೇವ ಭಾಗವತರು ಇವರೆಂದರೆ ತಪ್ಪಾಗಲಾರದು.
ಸುವರ್ಣ ಸಂಭ್ರಮದಲ್ಲಿ ಶ್ರೀ ಬ್ರಹ್ಮ ಭೈದರ್ಕಳ ಧೂಮಾವತಿ ಯಕ್ಷಗಾನ ಕಲಾ ಮಂಡಳಿ ಕಿದಿಯೂರು
ಉಡುಪಿಯ ಹಿರಿಯ ಹವ್ಯಾಸಿ ಯಕ್ಷಗಾನ ಮಂಡಳಿಗಳಲ್ಲಿ ಒಂದಾದ ಕಿದಿಯೂರು ಬ್ರಹ್ಮ ಭೈದರ್ಕಳ ಧೂಮಾವತಿ ಯಕ್ಷಗಾನ ಕಲಾಮಂಡಳಿಗೆ ಈ ವರ್ಷ 50ನೇ ವರ್ಷದ ಸುವರ್ಣ ಸಂಭ್ರಮ. ವರ್ಷಪೂರ್ತಿ ಯಕ್ಷಗಾನದ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡ ಸಂಸ್ಥೆ ಇದೇ ಮಾರ್ಚ್ 29ರಂದು ನಾಡಿನ ಗಣ್ಯರರ ಉಪಸ್ಥಿತಿಯಲ್ಲಿ ಸುವರ್ಣ ವರ್ಷದ ಸಮಾರೋಪ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 2013ರಲ್ಲಿ ಸುವರ್ಣ ಮಹೋತ್ಸವ ಉದ್ಘಾಟನೆಗೊಂಡು ಅಂದು ಶಾರದಾಪೂಜೆ, ಸಾಮೂಹಿಕ ಶನಿಕಲ್ಪೋಕ್ತ ಪೂಜೆ, ಯಕ್ಷಗಾನ ತಾಳ ಮದ್ದಳೆ ಸಂಪನ್ನಗೊಂಡಿತು.
ಉಭಯ ತಿಟ್ಟುಗಳ ಮೋಹಕ ಸ್ತ್ರೀವೇಷಧಾರಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ
ಯಕ್ಷಗಾನ ರಂಗದಲ್ಲಿ ರೂಪ, ಸ್ವರಬಾರ, ಆಳಂಗ, ಅಭಿನಯಗಳು ಒಂದಕ್ಕೊಂದು ಪೂರಕವಾಗಿದ್ದರೆ ಒಬ್ಬ ಕಲಾವಿದನ ಸ್ತ್ರೀವೇಷ ಎಷ್ಟು ಯಶಸ್ಸು ಗಳಿಸಬಹುದು ಎನ್ನುವುದಕ್ಕೆ ನೇರ ದ್ರಷ್ಟಾಂತ ಸದ್ಯ ತೆಂಕು-ಬಡಗುತಿಟ್ಟಿನ ಅಗ್ರಶ್ರೇಣಿಯ ಸ್ತ್ರೀವೇಷಧಾರಿಯಾಗಿ ಮೆರೆಯುತ್ತಿರುವ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರು. ಮೂಲತ: ಬಡಾಬಡಗು ತಿಟ್ಟಿನ ಗಂಡು ಮೆಟ್ಟಿನ ನೆಲ ಉತ್ತರ ಕನ್ನಡದ ಹೊನ್ನಾವರದವರಾದ ಇವರು ಯಕ್ಷಗಾನದ ಮೂರು ತಿಟ್ಟುಗಳಲ್ಲಿ ಪರಿಪೂರ್ಣ ಕಲಾವಿದರಾಗಿ ತನ್ನ ನೈಜ ಪ್ರತಿಭೆಯನ್ನು ಪ್ರಕಟಪಡಿಸುತ್ತಿರುವವರು. ಸ್ನಾತಕೋತ್ತರ ಪದವೀಧರನೊಬ್ಬನಲ್ಲಿ ಕಲೆ ಮೇಳೈಸಿಕೊಂಡಾಗ ಆ ಕಲಾವಿದ ಹೇಗೆ ಪರಿಪೂರ್ಣನಾಗಿ ಮೆರೆಯಬಹುದು ಎನ್ನುವುದಕ್ಕೆ ನೇರ ದೃಷ್ಟಾಂತ ಸುಬ್ರಹ್ಮಣ್ಯ ಹೆಗಡೆಯವರು.
ಯಕ್ಷರಂಗದ ಭೀಷ್ಮ ಬಳ್ಕೂರು ಕೃಷ್ಣಯಾಜಿ
ಬಡಗುತಿಟ್ಟು ಯಕ್ಷಗಾನದ ಅಗ್ರಮಾನ್ಯ ಕಲಾವಿದನಾಗಿ, ಪೌರಾಣಿಕ ಪ್ರಸಂಗದ ಗಂಡು ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಜೀವತುಂಬಿ, ಪೌರಾಣಿಕ ಹಾಗೂ ಆದುನಿಕ ಪ್ರಸಂಗಗಳ ಪ್ರೇಕ್ಷಕರ ಮನೆಮಾತಾದ ಮೇರು ಕಲಾವಿದ ಬಳ್ಕೂರು ಕೃಷ್ಣ ಯಾಜಿಯವರು. ಪ್ರಸಂಗದ ಪ್ರದಾನ ಪಾತ್ರಗಳಲ್ಲಿ ಕೆರೆಮನೆ ಮಹಾಬಲ ಹೆಗಡೆಯವರ ರಂಗದ ಹಿಡಿತ ಮತ್ತು ಗತ್ತುಗಾರಿಕೆಯನ್ನು ಇವರ ವೇಷಗಳಲ್ಲಿ ಗುರುತಿಸಬಹುದಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಡಗುಂಜಿ ಮೇಳದಲ್ಲಿ ಕೆರೆಮನೆ ಬ೦ಧುಗಳ ಮತ್ತು ಕುಂಜಾಲು ಹಾಸ್ಯಗಾರರಿಂದನಾನು ಸಾಕಷ್ಟು ಕಲಿತಿದ್ದೇನೆ ಎಂದು ಯಾಜಿಯವರು ವಿನಮ್ರರಾಗಿ ನುಡಿಯುತ್ತಾರೆ.
ಬಡಗು ಬೆಡಗಿನ ಪುಂಡು ವೇಷಧಾರಿ ಬೆಲ್ತೂರು ರಮೇಶ
ಬಡಗುತಿಟ್ಟಿನ ಒಂದು ಪ್ರಭೇದವಾದ ನಡುತಿಟ್ಟಿನ ಮಟಪಾಡಿ ಸಂಪ್ರದಾಯದ ಅನುಭವೀ ಪುಂಡು ವೇಷಧಾರಿಯಾಗಿ ಬೆಲ್ತೂರು ರಮೇಶನವರನ್ನು ಯಾವ ಅಂಗದಲ್ಲೂ ಗುರುತಿಸಬಹುದು. ವೇಗದ ಕುಣಿತ, ಖಚಿತವಾದ ಹೆಜ್ಜೆಗಾರಿಕೆ, ಅಪಾರ ಶ್ರುತಿಜ್ಞಾನ, ಆಕರ್ಷಕ ಕುಳ್ಳಗಿನ ಮೈಕಟ್ಟು, ಆಳವಾದ ರಂಗಾನುಭವ ಅತ್ಯಪೂರ್ವ ಪ್ರತ್ಯುತ್ಪನ್ನತ್ವ, ಸ್ಫುಟವಾದ ಶ್ರುತಿಬದ್ದ ಮಾತುಗಾರಿಕೆ, ಮನಸೆಳೆಯುವ ಹಾವಭಾವ, ಮೂರನೇಯ ವೇಷಕೊಪ್ಪುವ ಆಳ್ತನದಿಂದ ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದನೆಂದು ಗುರುತಿಸಲ್ಪಟ್ಟ ರಮೇಶನವರು ಅರವತ್ತು ಎಪ್ಪತ್ತರ ದಶಕದಲ್ಲಿ ಯಕ್ಷಗಾನ ವಲಯದಲ್ಲಿ ಮನೆಮಾತಾಗಿದ್ದವರು.
ಅಗರಿ ಶೈಲಿಯ ಹಿರಿಯ ಭಾಗವತ ಅಗರಿ ರಘುರಾಮ ಭಾಗವತ
ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಬಲಿಪರ ಶೈಲಿ, ಮಂಡೆಚ್ಚರ ಶೈಲಿ, ಕಡತೋಕರ ಶೈಲಿ, ಪದ್ಯಾಣರ ಶೈಲಿಗಳಂತೆ ಪ್ರತ್ಯೇಕ `ಅಗರಿ ಶೈಲಿ`ಯನ್ನು ಹುಟ್ಟು ಹಾಕಿದವರು ಅಗರಿ ಶ್ರೀನಿವಾಸ ಭಾಗವತರು. ಯಕ್ಷ ಬ್ರಹ್ಮರೆಂದೇ ಖ್ಯಾತರಾದ ಅವರು ಅನೇಕ ಪೌರಾಣಿಕ ಪ್ರಸಂಗಗಳನ್ನು ರಚಿಸಿ ಯಕ್ಷಗಾನ ರಂಗಕ್ಕೆ ನೀಡಿದವರು. ಅವರ ಕಿರಿಯ ಪುತ್ರ ತಂದೆಯಂತೆ ಪ್ರಸಂಗರಚನೆಯಲ್ಲಿ ತೊಡಗಿದರೆ ಹಿರಿಯ ಪುತ್ರ ರಘುರಾಮ ಭಾಗವತರು ತಂದೆಯಿಂದಲೇ ಪ್ರೇರಿತರಾಗಿ ಅಗರಿ ಶೈಲಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದವರು.
ಬಡಗುತಿಟ್ಟಿನ `ರಂಗಸ್ಥಳ ರಾಜ` ನಗರ ಜಗನ್ನಾಥ ಶೆಟ್ಟಿ
ಬಡಗು ತಿಟ್ಟಿನ ಪ್ರೇಕ್ಷಕರಿ೦ದ "ರ೦ಗಸ್ಥಳದ ರಾಜ" ಎ೦ದು ಗುರುತಿಸಲ್ಪಟ್ಟ ನಗರ ಜಗನ್ನಾಥ ಶೆಟ್ಟರು ಯಕ್ಷಗಾನ ಪ್ರಪ೦ಚ ಕ೦ಡ ಕೆಲವೇ ಕೆಲವು ಶಿಷ್ಟ ಕಲಾವಿದರಲ್ಲಿ ಒಬ್ಬರು. ಸುಸ೦ಸ್ಕ್ರತರು, ವಾಗ್ಮಿ, ರ೦ಗದಲ್ಲಿ ಅದ್ಭುತ ಬೆಳವಣಿಗೆಯ ಇತಿಹಾಸವನ್ನೇ ನಿರ್ಮಿಸಿದ ಇವರು, ಎದುರು ಪಾತ್ರಧಾರಿಗಳ ಗು೦ಡಿಗೆಯನ್ನು ನಡುಗಿಸುವ೦ಥ ಧೀರ, ಧೀಮ೦ತ ಪಾತ್ರಧಾರಿ. ಬಡಗು ತಿಟ್ಟಿನ ಸ೦ಪ್ರದಾಯಿಕ ಶೈಲಿಯ ಕಲಾವಿದರಾದ ದಿವ೦ಗತ ಹಾರಾಡಿ ರಾಮ ಗಾಣಿಗ, ಹಾರಾಡಿ ಕುಷ್ಟ ಗಾಣಿಗ, ಶಿರಿಯೂರ ಮ೦ಜು ನಾಯ್ಕ್, ವೀರಭದ್ರ ನಾಯಕರ ಸಾಲಿನಲ್ಲಿ ಕಾಣಸಿಗುವ ಇನ್ನೋರ್ವ ಪ್ರಸಿದ್ಧ ಕಲಾವಿದ ನಗರ ಜಗನ್ನಾಥ ಶೆಟ್ಟರು.
ಯಕ್ಷ ಸಾಧಕ ಕೋಲ್ಯಾರು ರಾಜು ಶೆಟ್ಟಿ
ಉಡುಪಿ ಜಿಲ್ಲೆಯ ಕುಗ್ರಾಮವೊಂದರಲ್ಲಿ ಜನಿಸಿ ಐವತ್ತು ವರ್ಷಗಳ ಹಿಂದೇಯೇ ದೂರದ ಮುಂಬೈ ಸೇರಿ ಕಡು ಬಡತನದಲ್ಲೇ ಮಹಾನ್ ಸಾಧಕನಾಗಿ, ಕವಿಯಾಗಿ , ಪ್ರಸಂಗಕರ್ತನಾಗಿ, ತಾಳ ಮದ್ದಳೆ ಅರ್ಥಧಾರಿಯಾಗಿ, ಮೆರೆದ ಹಿರಿಯ ಚೇತನ ಕೊಲ್ಯಾರು ರಾಜು ಶೆಟ್ಟರ ಜೀವನ ಚರಿತ್ರೆಯೇ ಬರೆದರೆ ಒಂದು ಪ್ರಸಂಗವಾದೀತು.
ಹಿರಿಯ ಪ್ರಸಾದನ ತಜ್ಞ ಹಂದಟ್ಟು ಗೋವಿಂದ ಉರಾಳ
ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಬಡಗುತಿಟ್ಟಿನ ಹಿರಿಯ ಪ್ರಸಾದನ ಕಲಾವಿದ, ಭಾಗವತ, ಗುರು ಹಂದಟ್ಟು ಗೋವಿಂದ ಉರಾಳರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜ. 26ರವಿವಾರ ಕಲಾಮಂಡಳಿಯ ವಾರ್ಷಿಕೋತ್ಸವದಂದು ನೆರವೇರಲಿದೆ.
ಮಂದಾರ್ತಿ ಕ್ಷೇತ್ರ ಮಹಾತ್ಮೆ
ಧರಣೀ ದೇವಿಯ ವಜ್ರಕೀರೀಟದಂತ ಹಿಮಾಲಯ ಪರ್ವತ ಶ್ರೇಣಿಗೆ ಅಲಂಕಾರ ಪ್ರಾಯವಾದ ರಜತಾದ್ರಿಯಲ್ಲಿ ಶಿವಪಾರ್ವತಿಯರು ನೆಲೆನಿಂತಿದ್ದರು. ಆ ಸಮಯದಲ್ಲಿ ನಾಗಲೋಕದ ಒಂದು ಬಾಗಕ್ಕೆ ಅದಿಕಾರಿಯೂ ಮಹಾಶೇಷನ ಮಿತ್ರನೂ ಆದ ನಾಗಲೋಕವನ್ನು ಆಳುತಿದ್ದ ಶಂಖಚೂಡನಿಗೆ ಹಲವು ವರ್ಷಗಳ ಕಾಲ ಮಕ್ಕಳಾಗದೇ ಶಿವನ ಕುರಿತು ಘೋರ ತಪವನ್ನು ಮಾಡಿ ಮೊರೆಹೋದಾಗ ಶಿವಾನುಗ್ರಹದಿಂದ ಐದು ಮಂದಿ ಹೆಣ್ಣುಮಕ್ಕಳಾಗುತ್ತಾರೆ. ಶಿವನ ಅನುಗ್ರಹದಿಂದ ಹುಟ್ಟಿದ ಕಾರಣ ಮುದ್ದಿನಿಂದ ಸಾಕಿ ಅವರಿಗೆ ದೇವರತಿ, ನಾಗರತಿ, ಚಾರುರತಿ, ಮಂದರತಿ, ನೀಲರತಿ ಎಂದು ನಾಮಕರಣ ಮಾಡುತ್ತಾನೆ.
ನಡುತಿಟ್ಟಿನ ಅಗ್ರಮಾನ್ಯ ಕಲಾವಿದ, ರಾಜ್ಯ ಪ್ರಶಸ್ತಿ ಪುರಸ್ಕೃತ ಐರೋಡಿ ಗೋವಿಂದಪ್ಪ
ಬಡಗುತಿಟ್ಟಿನ ಸಂಪ್ರದಾಯ, ಪರಂಪರೆಯ ಬಗ್ಗೆ ಪ್ರೀತಿ ಇರುವ ಪ್ರೇಕ್ಷಕರು ತಟ್ಟನೆ ನೆನಪಿಸುವ ಮೊದಲ ಹೆಸರು ಐರೋಡಿ ಗೋವಿಂದಪ್ಪನವರದ್ದು. ಅವರನ್ನು ನೆನಪಿಸಿಕೊಂಡಾಗಲೆಲ್ಲಾ ನೆನಪಿಗೆ ಬರುವುದು ಅವರ ಹಾರಾಡಿ ಶೈಲಿಯ ಕಟ್ಟು ಮೀಶೆಯೊಂದಿಗಿನ ದೊಡ್ಡ ಗಾತ್ರದ ಅಟ್ಟೆ ನಿರ್ಮಿತ ಕಪ್ಪು ಹಾಗೂ ಕೆಂಪು ಮುಂಡಾಸು, ಅದೇ ಶೈಲಿಯ ಅವರ ಜಾಪು, ಛಾಪು, ಮಟಪಾಡಿ ಶೈಲಿಯ ಕಿರುಹೆಜ್ಜೆ, ಅತ್ಯಂತ ಏರುಶ್ರುತಿಯಲ್ಲೂ ಸುಮಧುರವಾದ ಅವರ ಕಂಠಸಿರಿಯಲ್ಲಿ ಮೂಡಿಬರುವ ಅವರ ಶ್ರುತಿಬಧ್ಧ ಪದ್ಯದ ಎತ್ತುಗಡೆ ಇವೇ ಮುಂತಾದ ಅಂಶಗಳು.
ಬಡಗುತಿಟ್ಟು ಕಂಡ ಅಪರೂಪದ ಅಪೂರ್ವ ದಶಾವತಾರಿ ಗುರು ವೀರಭದ್ರ ನಾಯಕ್
ಬಡಗು ತಿಟ್ಟಿನ ಬ್ರಹ್ಮಾವರ ವಲಯದ ಪ್ರಬಲ ಎರಡು ಶೈಲಿಗಳಲ್ಲಿ ಒಂದಾದ ಮಟ್ಪಾಡಿ ಶೈಲಿಯ ಪ್ರಾತಿನಿಧಿಕ ಕಲಾವಿದ ದಶಾವತಾರಿ ವೀರಭದ್ರ ನಾಯಕರು ಜನಿಸಿ ವರ್ಷ ನೂರ ಆರು ಸಂದಿದೆ. ಹಿರಿಯರು ಹೊತ್ತ ಹರಕೆಯ ಮೇರೆಗೆ ಹಿರಿಯಡಕ ವೀರಭದ್ರ ದೇವರ ಸನ್ನಿದಿಯಲ್ಲಿ ``ಗೆಜ್ಜೆ ಸೇವೆ`` ಸಲ್ಲಿಸಿದ ಬ್ರಹ್ಮಾವರ ಸಮೀಪದ ಮಟ್ಪಾಡಿಯ ವೀರಭದ್ರ ನಾಯಕರು ``ಬಡಗುತಿಟ್ಟಿಗೊಬ್ಬರೆ ವೀರಭದ್ರ`` ಎನ್ನುವಷ್ಟರ ಮಟ್ಟಿಗೆ ಬೆಳೆದದ್ದು ರಾಷ್ಟ್ರ ಪ್ರಶಸ್ತಿ ಪಡೆದದ್ದು, ಕಾಯವಲಿದರೂ ನೆನಪಳಿಯದ ಯಕ್ಷಗಾನ ರಂಗದ ಧ್ರುವತಾರೆಯಾಗಿ ಮಿನುಗಿದ್ದು ಎಲ್ಲವೂ ಈಗ ಇತಿಹಾಸ.
ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ
ಸಿಧ್ಧಿಯೂ ಇಲ್ಲದೆ ಸಾಧನೆಯೂ ಇಲ್ಲದೆ ಕೇವಲ ಯೋಗದಿಂದಲೆ ಯೋಗ್ಯತೆಯಿಲ್ಲದೆ ಪ್ರಸಿಧ್ಧಿಗೆ ಬರುವವರು ಬಹಳಷ್ಟು ಮಂದಿ ಕಲಾವಿದರು ನಮ್ಮ ಮುಂದಿದ್ದಾರೆ. ಬಡಗುತಿಟ್ಟಿನ ಯಕ್ಷಗಾನ ರಂಗದ ಹಿಮ್ಮೇಳ ಹಾಗು ಮುಮ್ಮೇಳಗಳೆರಡಕೂ ಗಣನೀಯ ಕೊಡುಗೆ ನೀಡಿದ ಉತ್ತರ ಕನ್ನಡ ಜಿಲ್ಲೆಯ ಕಪ್ಪೆಕೆರೆ ಕುಟು೦ಬದ ಕಲಾವಿದರು ಸಿಧ್ಧಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರು. ಅಪ್ರತಿಮ ಕಲಾಸಿಧ್ಧಿಯಿಂದ ಮತ್ತು ಸ್ವಸಾಧನೆಯಿಂದ ಯಕ್ಷಗಾನ ರಂಗದಲ್ಲಿ ತಮ್ಮದೆ ಆದ ಛಾಪನ್ನು ಒತ್ತಿದವರು ಇದೆ ಕುಟುಂಬದ ಕಪ್ಪೆಕೆರೆ ಮಹಾದೇವ ಈಶ್ವರ ಹೆಗಡೆಯವರು.
ಯಕ್ಷರಂಗದ ಬೀಷ್ಮ ಹಿರಿಯ ಭಾಗವತ ಆರ್ಗೋಡು ಗೋವಿಂದರಾಯ ಶೆಣೈ
ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ಆರ್ಗೋಡು ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದವರ ಕೊಡುಗೆ ಅಪಾರ. ಹಿಮ್ಮೇಳ-ಮುಮ್ಮೇಳದ ಅನೇಕ ಕಲಾವಿದರಿಂದ ಕೂಡಿದ ಈ ಕುಟುಂಬದ ಹಿರಿಯ ಭಾಗವತ ಸುಮಾರು 91 ವರ್ಷ ಪ್ರಾಯದ ಯಕ್ಷಗಾನ ರಂಗದ ಸವ್ಯಸಾಚಿ ಆರ್ಗೋಡು ಗೋವಿಂದರಾಯ ಶೆಣೈಯವರು ಸುಮಾರು 65 ಸಂವತ್ಸರ ಕಾಲ ಯಕ್ಷಗಾನದ ವಿವಿದ ಆಯಾಮಗಳಲ್ಲಿ ದುಡಿದವರು. ಮೇಳಗಳ ಸಂಘಟಕರಾಗಿ ಎತ್ತಿನಗಾಡಿಯಲ್ಲಿ ಮೇಳದ ಸಾಮನುಗಳನ್ನು ಊರಿಂದೂರಿಗೆ ಸಾಗಿಸಿ ಮೇಳ ನೆಡೆಸಿದವರು.
ಹಾರಾಡಿ ಮತ್ತು ಮಟ್ಪಾಡಿ ತಿಟ್ಟುಗಳ ಪ್ರಾತಿನಿಧಿಕ ಮಜ್ಜಿಗೆಬೈಲು ಆನಂದ ಶೆಟ್ಟಿ
ಮಂದಾರ್ತಿ ಮೇಳದಲ್ಲಿ ಸುದೀರ್ಘ ಕಾಲ‌ ಎರಡನೆ ವೇಷಧಾರಿಯಾಗಿ, ಪುರುಷ ವೇಷಧಾರಿಯಾಗಿ ಸದ್ಯ ನಿವೃತ್ತಿಯಲ್ಲಿರುವ ಬಡಗುತಿಟ್ಟಿನ ನಡುಶೈಲಿಯ ಹಿರಿಯ ಕಲಾವಿದ ಮಜ್ಜಿಗೆಬೈಲು ಆನಂದ ಶೆಟ್ಟರು, ಶ್ರೀ ಮಂದಾರ್ತಿ ಕ್ಷೇತ್ರದ ವತಿಯಿಂದ ನೀಡುವ 2013ನೇ ವರ್ಷದ ಹಾರಾಡಿ ರಾಮಗಾಣಿಗ ಪ್ರಶಸ್ತಿಗೆ ಭಾಜನರಾಗಿರುವುದು ಯೋಗ್ಯವಾಗಿದೆ.
ಹಾಸ್ಯಗಾರರಿಂದ ``ಗದಾಯುದ್ದ`` ಪ್ರಸಂಗದ ಪ್ರಧರ್ಶನ ಸಾಧುವೇ?
ಮಹಾಭಾರತ ಕುರುಕ್ಷೇತ್ರ ಯುದ್ದದ ಪರ್ವಗಳಲ್ಲಿ ಗದಾಪರ್ವವು ವಿಶಿಷ್ಟವೂ ಅರ್ಥಪೂರ್ಣವೂ ಆದ ಕಥಾ ಪ್ರಸಂಗ. ಮಹಾಭಾರತದುದ್ದಕ್ಕೂ ಖಳನಾಯಕನೆಂದು ಬಿಂಬಿಸಲ್ಪಟ್ಟ ಕೌರವನ ಉದಾತ್ತ ಗುಣವಿಶೇಷಣಗಳೂ, ಕರುಣಾಜನಕ ಸನ್ನಿವೇಶಗಳು, ಇಲ್ಲಿ ಬಹಳ ಸುಂದರವಾಗಿ ಅಭಿವ್ಯಕ್ತವಾಗಿದೆ. ರನ್ನ ಮಹಾಕವಿಯ "ಗದಾಯುದ್ದ" ಕಾವ್ಯವನ್ನು ನಮ್ಮ ಯಕ್ಷಗಾನ ಕವಿಗಳು, ಕಲಾವಿದರು ಯಥಾವತ್ತಾಗಿ ರಂಗಕ್ಕೆ ತಂದಿದ್ದಾರೆ. ಪ್ರಬುದ್ಧ ಕಲಾವಿದರು ಈ ಪಾತ್ರದಲ್ಲಿ ಕಾಣಿಸಿಕೊಂಡಾಗ ಈ ಎಲ್ಲಾ ಭಾವನೆಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸಲು ಸಾಧ್ಯವಾಗುತ್ತದೆ.
ಬಣ್ಣದ ವೇಷದ ಮೇರು ಕಲಾವಿದ ಪೇತ್ರಿ ಮಾದು ನಾಯ್ಕ್
ಕಲಾವಿದನೊಬ್ಬನ ಕಲಾಪ್ರತಿಭೆ ಅಗಾಧವಾಗಿದ್ದಲ್ಲಿ ಜನ ಅವನ ಪ್ರತಿಭೆಯನ್ನು ಗೌರವಿಸುತ್ತಾರೆಯೆ ವಿನಹ ಜಾತಿಯನ್ನಲ್ಲ ಎನ್ನುವುದಕ್ಕೆ ಯಕ್ಷಗಾನ ರಂಗದಲ್ಲಿ ಮಾದು ನಾಯ್ಕರು ಬೆಳೆದು ಬಂದದ್ದೆ ಸಾಕ್ಷಿ. ಜಾತಿಯಲ್ಲಿ ಹಿಂದುಳಿದವರಾದರೂ ತಮ್ಮ ಅದ್ಭುತ ಕಲಾಪ್ರತಿಭೆಯಿಂದ ಸಮಾಜದ ಎಲ್ಲಾ ವರ್ಗದ ಜನರ ಹೃದಯವನ್ನು ಗೆದ್ದವರು ಮಾದು ನಾಯ್ಕರು. ಗಿರಿಜನ ಪಂಗಡದ ಮರಾಠಿ ಜನಾಂಗದವರಾದ ಇವರಲ್ಲಿ ಯಕ್ಷಗಾನ ಕಲೆ ಪುಟಿದೆದ್ದದ್ದು ಆಶ್ಚರ್ಯವಲ್ಲ. ಯಾಕೆಂದರೆ ಯಕ್ಷಗಾನದ ಮದ್ದಳೆಯ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿ ಮದ್ದಳೆ ವಾದನದಲ್ಲಿ ಕ್ರಾಂತಿ ಮೂಡಿಸಿದ ಗುರು ಬೇಳಂಜೆ ತಿಮ್ಮಪ್ಪ ನಾಯ್ಕರು ಮಾದು ನಾಯ್ಕರ ಸೋದರ ಮಾವ. ಹಾಗಾಗಿ ಈ ಕಲೆ ಅವರ ಮೂಲಕ ಮಾದು ನಾಯ್ಕರಿಗೆ ದಕ್ಕಿದೆ.
ಯಕ್ಷಗಾನ, ಹಿಮ್ಮೇಳ ಮತ್ತು ಪ್ರಸಂಗ ಸಾಹಿತ್ಯ
“ಕಲೆ” ಎಂದರೇನು? ನಿರೂಪಿಸಲು ತುಸು ಕಷ್ಟ ವಾದ ಚಿಕ್ಕ ಶಬ್ದವಿದು. ಯಾವುದು ಆತ್ಮದರ್ಶನ ಮಾಡಿಸುತ್ತದೋ ಅದು ಕಲೆ ಅನ್ನುತ್ತಾರೆ ಅರವಿಂದರು “ಆರ್ಟ್ ಈಸ್ ಫ಼ಾರ್ ಅರ್ಟ್ಸ್ ಸೇಕ್” ಎಂಬ ನುಡಿಗಟ್ಟು‌ ಇಂಗ್ಲೀಷಿನಲ್ಲಿದೆ. ತನ್ನಬದುಕಿನಲ್ಲಿತಲೆದೋರಬಹುದಾದಸುಖ-ದು:ಖ, ಆಸೆ-ನಿರಾಶೆ, ಸಂತೋಷ-ಸಂತಾಪ, ಪ್ರೀತಿ- ದ್ವೇಷ ಮುಂತಾದ ಭಾವನೆಗಳನ್ನು ಒಡನಾಡಿಗಳೊಂದಿಗೆ ಹಂಚಿಕೊಳ್ಳಬೇಕೆಂಬ ಅಭಿಲಾಷೆಯು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸ್ವಾಭಾವಿಕವಾಗಿ ಇರುತ್ತದೆ. ಇದನ್ನು ಸುಂದರವಾಗಿ ಪ್ರಕಟಿಸುವ ಮಾಧ್ಯಮವೇ ಕಲೆ.
ಪುನರುಜ್ಜೀವನದೊಂದಿಗೆ ದಿಗ್ವಿಜಯಕ್ಕೆ ಹೊರಟ ಪುರಾತನ ಗೋಳಿಗರಡಿ ಮೇಳ
ಗೋಳಿ ಗರಡಿ ಎಂದಾಗ ಯಕ್ಷಗಾನ ಪ್ರೀಯರಿಗೆ ತಟ್ಟನೆ ನೆನಪಿಗೆ ಬರುವುದು ಅವಿಭಜಿತ ದ. ಕ. ಜಿಲ್ಲೆಯ ಸುಮಾರು 210 ಗರಡಿಗಳಲ್ಲಿ ಯಕ್ಷಗಾನ ಮೇಳ ಹೊಂದಿದ ಏಕಮೇವ ಗರಡಿ ಉಡುಪಿ ಜಿಲ್ಲೆಯ ಸಾಸ್ತಾನದ ಗೋಳಿಗರಡಿ. ಸುಮಾರು 150ಕ್ಕೂ ಅಧಿಕ ವರ್ಷದ ಇತಿಹಾಸವಿರುವ ಕ್ಷೇತ್ರದ ಅದಿದೈವ ಪಂಜುರ್ಲಿ ದೈವದ ಹೆಸರಿನ ``ಶ್ರೀ ಪಂಜುರ್ಲಿ ಕ್ರಪಾ ಪೋಷಿತ ಯಕ್ಷಗಾನ ಮಂಡಳಿ``ಗೆ ತನ್ನದೇ ಆದ ಇತಿಹಾಸವಿದೆ. ಯಕ್ಷಗಾನ ಕಲೆಯನ್ನು ಸೇವೆಯಾಗಿ, ಬಯಲಾಟವಾಗಿ ಪ್ರದರ್ಶಿಸುತ್ತಾ ಬಂದ ಮೇಳಗಳಲ್ಲಿ ಗರಡಿಯೊಂದರ ಆಶ್ರಯದಲ್ಲಿ ನೆಡೆಸಲ್ಪಡುವ ಏಕೈಕ ಮೇಳ ಇದಾಗಿದೆ. ಒಂದುವರೆ ಶತಮಾನಗಳ ಇತಿಹಾಸವಿರುವ ಈ ಮೇಳದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮೆರೆದ ಘಟಾನುಘಟಿ ಕಲಾವಿದರು ಗೆಜ್ಜೆ ಕಟ್ಟಿ ಕುಣಿದಿದ್ದಾರೆ. ತಾಳ ಹಿಡಿದು ಭಾಗವತರಾಗಿದ್ದಾರೆ.
ಹಾರಾಡಿ ಶೈಲಿ ಕೊ೦ಡಿ ನರಾಡಿ ಭೋಜರಾಜ ಶೆಟ್ಟಿ
ಬಡಗುತಿಟ್ಟು ಪರಂಪರೆಯ ಸಿದ್ದಿ ಹಾಗು ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರಲ್ಲಿ ನರಾಡಿ ಭೋಜರಾಜ ಶೆಟ್ಟರೂ ಒಬ್ಬರು. ಬಯಲಾಟ ರಂಗಸ್ಥಳದಲ್ಲಿ ಎರಡನೇ ವೇಷದಾರಿಗಳಾಗಿ ತಮ್ಮದೇ ಛಾಪನ್ನು ಮೂಡಿಸಿರುವ, ಐರೋಡಿ ಗೋವಿಂದಪ್ಪ, ಆಜ್ರಿ ಗೋಪಾಲ ಗಾಣಿಗ, ಕೋಡಿ ವಿಶ್ವನಾಥ ಗಾಣಿಗ, ಐರ್ ಬೈಲು ಆನಂದ ಶೆಟ್ಟಿ, ಆರ್ಗೋಡು ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರರವರ ಸಮಕಾಲೀನರಾದ ಇವರು ದೀರ್ಘಕಾಲದಿಂದ ಮಂದಾರ್ತಿ ಮೇಳದ ಎರಡನೆ ವೇಷಧಾರಿಯಾಗಿ ದುಡಿಯುತಿದ್ದಾರೆ.
ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು : ಪ್ರೇಕ್ಷಕರು ಮತ್ತು ಮೇಳದ ಯಜಮಾನರು ( ಭಾಗ-3)
ಕಲೆಗೆ ಬೆಲೆ ಸಿಗುವುದು ಅದನ್ನು ಅಸ್ವಾದಿಸುವ ಪ್ರೇಕ್ಷಕರಿಂದ. ಕೃತಿಗೆ ಹೇಗೆ ಕೊಂಡು ಓದುವವ ಬೇಕೋ ಹಾಗೇಯೇ ಕಲೆಗೆ ಬಂದು ನೋಡುವವ ಬೇಕು. ಅಪಾರ ಓದುಗರಿದ್ದಾರೆಂಬುವುದು, ಅಪಾರ ಪ್ರೇಕ್ಷಕರಿದ್ದರೆಂಬುದು ಕೃತಿಯ ಯಾ ಕಲೆಯ ಮಾನದಂಡವಾಗಲಾರದು. ಅನೇಕ ಸಲ ಒಳ್ಳೆಯ ಪುಸ್ತಕ, ಸೃಷ್ಟಿಶೀಲ ಪ್ರದರ್ಶನಗಳು ವನಸುಮವಾಗಿ ಕಳಪೆ ಪ್ರದರ್ಶನಗಳು ಚೆನ್ನಾಗಿ ಹಣ ಗಳಿಸಿದ ಉದಾಹರಣೆಗಳಿವೆ. ಯಕ್ಷಗಾನ ಕಲೆಯು ಪ್ರೇಕ್ಷಕರ ಒಲವಿನ ಬಲವನ್ನಷ್ಟೆ ಅವಲಂಬಿಸಿದೆ. ಇದಕ್ಕೆ ಸರಕಾರದ ಪ್ರೋತ್ಸಾಹವಿಲ್ಲ, ಆಶ್ರಯವಿಲ್ಲ. ಪ್ರೇಕ್ಷಕರನ್ನು ಸೆಳೆಯದ ಹೊರತು ಕಲಾವಿದ ಬದುಕುವಂತಿಲ್ಲ. ಅದಕ್ಕಾಗಿ ರಂಗಸ್ಥಳ ಸೃಷ್ಟಿಶೀಲವಾಗದೆ ನಿರ್ವಾಹವಿಲ್ಲ.
ಯಕ್ಷಗಾನ ಹಿಮ್ಮೇಳ ಭಾಗವತಿಕೆ ಮತ್ತು ವಾದನದ ಆಭಾಸಗಳು (ಭಾಗ-2)
ಯಕ್ಷಗಾನದಲ್ಲಿ ಭಾಗವತಿಕೆಯಷ್ಟು ಕುಲಗೆಟ್ಟ ಅಂಗ ಬೇರೊಂದಿಲ್ಲ. ಕನಿಷ್ಟ ಶ್ರುತಿ ಲಯದ ಜ್ಝಾನವಿಲ್ಲದ ಪ್ರೇಕ್ಷಕರ ಸಿಳ್ಳು ಚಪ್ಪಾಳೆಯೇ ತಮಗೆ ದೊರೆತ ಪ್ರೋತ್ಸಾಹವೆಂದು ಗೊತ್ತಿರುವರಾಗವನ್ನು ಬೇಕಾಬಿಟ್ಟಿ ಎಳೆಯುವ ಭಾಗವತರೇ ಇಂದು ಎಲ್ಲೆಡೆ ಕಾಣುತ್ತಾರೆ. ಪ್ರೇಕ್ಷಕರ ಚಪ್ಪಳೆ ಬರುವ ವರೆಗೆ ಅವರ ಆಲಾಪನೆ ನಿಲ್ಲದು. ಕಾಳಿಂಗ ನಾವಡರು ಭಾಗವತಿಕೆಯಲ್ಲಿ ಕ್ರಾಂತಿ ಮಾಡಿದವರು. ಹೊಸ ಹೊಸ ರಾಗಗಳನ್ನು ಸಂದರ್ಭಾನುಸಾರ ಬಳಸಿದ್ದು ಮಾತ್ರವಲ್ಲದೆ ಹಳೆಯ ರಾಗಗಳಿಗೆ ಹೊಸ ಸಂಚಾರವನ್ನೂ ನೀಡಿದವರು. ಇಂದು ಎಲ್ಲೆಡೆ ಮರಿ ನಾವಡರೆ. ಬಡಗುತಿಟ್ಟು ಭಾಗವತರಲ್ಲಿ ಒಬ್ಬ ಭಾಗವತನೂ ಸಹ ಮರವಂತೆ ನರಸಿಂಹ ದಾಸರು, ನೆಲ್ಲೂರು ಮರಿಯಪ್ಪ ಅಚಾರರು, ಜಾನುವಾರುಕಟ್ಟೆಯವರ ದಾರಿಯಲ್ಲಿ ಸಾಗಿದವರಿಲ್ಲ.
ಯಕ್ಷಗಾನದಲ್ಲಿ ಆಧುನಿಕ ಅಭಾಸಗಳು ಮತ್ತು ಪರಿಹಾರ (ಭಾಗ-1)
ಸೃಜನಶೀಲತೆಯಿಂದಾಗಿ ನಿತ್ಯ ನೂತನತೆಯಿದ್ದು ಮನರಂಜನೆಯಷ್ಟೇ ಅಲ್ಲದೆ ಮನೋಧರ್ಮ ಪ್ರಯೋಗಕ್ಕೂ ಅವಕಾಶವಿರುವುದೇ ಯಕ್ಷಗಾನದ ವಿಶೇಷತೆ. ಈಗ ಕಾಲಚಕ್ರದ ಉರುಳುವಿಕೆಗೆ ಸಿಕ್ಕಿ ಇತಿಹಾಸವಾಗುತ್ತಿದೆ. ಈ ವಿಶಿಷ್ಟತೆಯೇ ಯಕ್ಷಗಾನ ಕಲೆಯ ಜೀವಾಳ. ಕಲೆಗಳಿಗೆ ಮರುಹುಟ್ಟು ನೀಡುವುದು ಅಸಾದ್ಯ. ಆದ್ದರಿಂದ ಯಕ್ಷಗಾನ ಇತಿಹಾಸ ಸೇರುವ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕಲೆಯ ಸಾಂಪ್ರದಾಯಕ ಸ್ವರೂಪ ಉಳಿಯುವಂತೆ ಮಾಡುವ ಸವಾಲು ನಮ್ಮ ಮುಂದಿದೆ. ಇದು ಸಾದ್ಯವೇ? ಇದು ಯಾರಿಗಾಗಿ? ಇದು ಹೇಗಾಗಬೇಕು? ಯಾರಿದನ್ನು ಮಾಡುವವರು? ಮುಂತಾದ ಪ್ರಶ್ನೆಗಳು ಸಾಧುವಾದದ್ದೆ.
ಹಾರಾಡಿ ಮನೆತನದ ಕೊನೆಯ ಕೊಂಡಿ : ಹಾರಾಡಿ ಸರ್ವೋತ್ತಮ ಗಾಣಿಗ
ಹಾರಾಡಿ ಇಂದು ಯಕ್ಷಗಾನದ ವಲಯಕ್ಕೆ ಸಂಬಂಧಿಸಿದ ಹಾಗೆ ಊರ ಹೆಸರಾಗಿ ಉಳಿದಿಲ್ಲ. ಅದೊಂದು `ವ್ಯಕ್ತಿ ನಾಮ`. ಹಾರಾಡಿ ಎಂಬ ಮೂರಕ್ಷರವು ಯಕ್ಷಪ್ರಿಯರ ಮೈ ರೋಮಾಂಚನಗೊಳಿಸುವಷ್ಟು ಧೃಡವಾದದ್ದು. ಬಡಗುತಿಟ್ಟು ಯಕ್ಷಗಾನದಲ್ಲಿ ಹಾರಾಡಿ ತಿಟ್ಟು ಎನ್ನುವ ಹೊಸ ಶೈಲಿಯನ್ನು ಹುಟ್ಟು ಹಾಕಿದ ಕೀರ್ತಿ ಈ ಕುಟುಂಬಕ್ಕಿದೆ. ಹಾರಾಡಿ ರಾಮ ಗಾಣಿಗರು, ಕುಷ್ಟ ಗಾಣಿಗರು, ನಾರಾಯಣ ಗಾಣಿಗರು ತಮ್ಮ ಜೀವಿತದಲ್ಲೆ ದಂತಕಥೆಯಾದವರು. ಅವರ ಸಂತತಿಯಲ್ಲಿ ಯಕ್ಷಗಾನ ಇನ್ನೂ ಜೀವಂತವಾಗಿ ಉಳಿದಿದೆ. ಅಂತಹ ಅಪೂರ್ವ ಕಲಾವಿದರಲ್ಲಿ ಹಾರಾಡಿ ಸರ್ವ ಗಾಣಿಗರು ಹಾರಾಡಿ ಕುಟು೦ಬದ ಕೊನೆಯ ಕಲಾವಿದರಾಗಿ ಇಂದು ರಂಗದಲ್ಲಿ ಗುರುತಿಸಲ್ಪಡುತ್ತಾರೆ. ಎಲ್ಲಾ ಹಿರಿಯ ಹಾರಾಡಿ ಕಲಾವಿದರ ಹಾಗೆ ಶ್ರಿ ಮ೦ದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಈಗ ಸೇವೆ ಸಲ್ಲಿಸುತಿದ್ದಾರೆ.
ಸಿರಿ ಆರದ ಮೋಡಿಗಾರ ಶಿರಿಯಾರ ಮಂಜು ನಾಯ್ಕರು
ಬಡಗು ತಿಟ್ಟಿನ ಅಭಿಜಾತ ಕಲಾವಿದನಾಗಿ, ಪ್ರಸಿದ್ದ ಪುರುಷವೇಷಧಾರಿಯಾಗಿ ಸುಮಾರು ಅರ್ದ ದಶಕಗಳಕಾಲ ನಡುತಿಟ್ಟಿನ ಪ್ರಾತಿನಿಧಿಕ ಕಲಾವಿದನಾಗಿ ಮೆರೆದವರು ಶಿರಿಯಾರ ಮಂಜುನಾಯ್ಕರು. ಬಡಗುತಿಟ್ಟಿನ ಸುಪ್ರಸಿದ್ದ ಕಲಾವಿದರಲ್ಲಿ ಶಿರಿಯಾರ ಮಂಜುನಾಯ್ಕರದ್ದು ಮೇಲ್ಪಂಕ್ತಿಯ ಹೆಸರು. ಬದುಕಿದ್ದರೆ ಅವರಿಗೆ ಈಗ ಸುಮಾರು ಎಂಬತ್ನಾಲ್ಕರ ಸಂಬ್ರಮ. ಸುಮಾರು 25 ವರ್ಷದ ಹಿಂದೆ ಮಣಿಪಾಲದ ಗೋಲ್ಡನ್ ಜುಬಿಲಿ ಹಾಲ್ ನಲ್ಲಿ ನೆಡೆದ ಪ್ರದರ್ಶನವೊಂದರಲ್ಲಿ ಬೀಷ್ಮ ವಿಜಯದ ಅವರ ನೆಚ್ಚಿನ ಪುರುಷವೇಷವಾದ ಪರಶುರಾಮನಾಗಿ ರಂಗಸ್ಥಳ ಪ್ರೇವೇಶಿಸಿದ ನಾಯ್ಕರು ಸಹಸ್ರಾರು ಪ್ರೇಕ್ಷಕರ ಎದುರಿಗೆ ಕುಸಿದು ಬಿದ್ದು ರಂಗಸ್ಥಳದಲ್ಲೇ ಇಹಲೋಕದ ಯಾತ್ರೆ ಮುಗಿಸಿದರು.
ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ಪ್ರಕ್ಷಿಬ್ಧ ಪ್ರಸಂಗಗಳು
``ಪ್ರಸಂಗ`` ವೆಂದರೆ ಪದ್ಯಗಳ ಮೂಲಕ ಹೆಣೆಯಲ್ಪಡುವ ಕಥಾ ಸನ್ನಿವೇಷ. ಇದು ಪ್ರದರ್ಶನದ ಪಠ್ಯವೂ ಹೌದು. ಕಥೆಯ ನೆಡೆಗೆ ಇದುವೇ ಆದಾರ. ಕಥೆಯನ್ನು ಆರಿಸಿ ಕೊಳ್ಳುವಾಗ ಕವಿಯ ಹೊಣೆಗಾರಿಕೆ ಮಹತ್ವದ್ದು. ಅದು ಕೇವಲ ರಂಜನೆಯಾಗಿರದೆ ಸತ್ವ ಭರಿತವಾಗಿರಬೇಕು. ಪುರಾಣ ಕಥೆಗಳಲ್ಲಿ ಸಾರ್ವಕಾಲಿಕ ಮೌಲ್ಯವುಳ್ಳವುಗಳಾದರೆ ಸಮಕಾಲೀನ ಸಮಾಜಕ್ಕೆ ಉಪಯುಕ್ತವಾಗಿರುವಂತಾದರೆ ಅದನ್ನು ಹಾಗೆ ಮುಂದಿಡಬಹುದು. ಹಳೆಯ ಕೆಲವು ಸವಕಲು ಅರ್ಥಶೂನ್ಯ ವಿಚಾರಗಳನ್ನು ಇಂದು ಮೌಲ್ಯಗಳೆಂದು ಕರೆಯುವಂತಿಲ್ಲ. ಇಂಥಹ ಸಂದರ್ಭದಲ್ಲಿ ಇಂದಿನ ದ್ರಷ್ಟಿ ದೋರಣೆಗಳಿಗೆ ಸರಿಯಾಗಿ ಪುರಾಣ ಘಟನೆಗಳನ್ನು ಪುನರ್ ರಚಿಸ ಬೇಕಾಗುತ್ತದೆ.
ಹಿಂದೂಸ್ತಾನಿ ಸಂಗೀತಗಳ ಸಮನ್ವಯ ಭಾಗವತ - ಸುಬ್ರಹ್ಮಣ್ಯ ಧಾರೇಶ್ವರ
ಸುಬ್ರಹ್ಮಣ್ಯ ಧಾರೇಶ್ವರ ಎಂದಾಗ ಬಡಗುತಿಟ್ಟಿನ ಯಕ್ಷಗಾನದ ಭಾಗವತಿಕೆಯ ಆಸಕ್ತರ ಗಮನ ಸೆಳೆಯುದು ಸರಿ ಸುಮಾರು ಮೂವತ್ತಕ್ಕೂ ಅದಿಕ ಸ೦ವತ್ಸರ ಕಾಲ ಬಡಗಿಗಿನ ರಂಗಸ್ಥಳದಲ್ಲಿ ತನ್ನ ಸುಮದುರ ಧ್ವನಿಯಿಂದ ಸಹಸ್ರಾರು ಪ್ರೇಕ್ಷ್ಶಕರ ಮನಸೂರೆಗೊಂಡ ವಿಸ್ಮಯಕಾರಿ ಭಾಗವತರೊಬ್ಬರ ಹೆಸರು. ಪೆರ್ಡೂರು ಮೇಳ ಪ್ರಾರಂಭದಿಂದ ನಿರಂತರ ಇಪ್ಪತ್ತಾರು ವರ್ಷ ತನ್ನ ಅದ್ಭುತ ಶಾರೀರ ಮತ್ತು ಶರೀರದಿಂದ ಯಕ್ಷಗಾನ ಮತ್ತು ಹಿಂದೂಸ್ತಾನಿ ಸಂಗೀತಗಳ ಸಮನ್ವಯ ಭಾಗವತರೆಂದು ಖ್ಯಾತಿ ಪಡೆದು ಯಕ್ಷಗಾನಾಸಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತವರು. ಕಳೆದ ವರ್ಷದ ತಿರುಗಾಟದಿಂದ ವೃತ್ತಿ ರಂಗಭೂಮಿಗೆ ವಿದಾಯ ಹಾಡಿರುವ ಭಾಗವತರ ನಿರ್ಗಮನ ಅಭಿಮಾನಿಗಳಿಗೆ ನಿರಾಸೆ ತಂದರೂ ಆರೋಗ್ಯ ಮತ್ತಿತರ ಕಾರಣದಿಂದ ನಿವೃತ್ತಿ ಅನ್ನುವುದು ವ್ಯಕ್ತಿಯೊಬ್ಬರ ಜೀವನದಲ್ಲಿ ಅನಿವಾರ್ಯ ಅನ್ನುವುದು ಸರ್ವವಿದಿತ. ನಿವೃತ್ತಿಯ ನಂತರವೂ ದುಡಿದು ಮುಂದಿನ ಪೀಳಿಗೆಯವರಿಗೆ ಅವಕಾಶ ನೀಡಬಯಸದೆ ನಿರುದ್ಯೋಗ ಸಮಸ್ಯಗೆ ಪರೋಕ್ಶವಾಗಿ ಕಾರಣರಾಗುತ್ತಿರುವ ವಿದ್ಯಾವಂತರನೇಕರಿಗೆ ಇದೊಂದು ಪಾಠವೂ, ಆದರ್ಶವೂ ಹೌದು.
ಮರೆಯಲಾರದ ಕಾರ್ಯಕ್ರಮ - ಕಲಾಪ್ರಕಾಶ ಪ್ರತಿಷ್ಟಾನದ ರಜತೋತ್ಸವ ಸಂಭ್ರಮ
ಬೃಹನ್ಮುಂಬಯಿಯ ಮಹಾಜನತೆಗೆ ಕಳೆದ 25 ವರ್ಷದಿಂದ ಯಕ್ಷಗಾನದ ವಿವಿದ ಪ್ರಾಕಾರಗಳ ಸವಿಯನ್ನು ಉಣಿಸಿಕೊಂಡು ಬರುತ್ತಿರುವ, ಗೌರವಾನ್ವಿತ ಕಲಾಸಂಘಟಕ ಪ್ರಕಾಶ್ ಎಂ. ಶೆಟ್ಟಿ ಸುರತ್ಕಲ್ ಸಾರಥ್ಯದ ಸಾಂಸ್ಕ್ರತಿಕ ಸಂಘಟನೆ ಕಲಾಪ್ರಕಾಶ ಪ್ರತಿಷ್ಟಾನದ ಬೆಳ್ಳಿ ಹಬ್ಬ ಕಾರ್ಯಕ್ರಮ ಮುಂಬೈ ಕುರ್ಲಾ ಪೂರ್ವ ಬಂಟರ ಭವನದಲ್ಲಿ ವೈವಿದ್ಯಮಯ ಯಕ್ಷಗಾನ ಸಂಬಂದಿ ಕಾರ್ಯಕ್ರಮದೊಂದಿಗೆ ದಿನಪೂರ್ತಿ ನೆಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷರಂಗದ ಕೌರವ : ಗೋಡೆ ನಾರಾಯಣ ಹೆಗಡೆ
ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಗದಾಯುದ್ದ ಪ್ರಸಂಗದ ಕೌರವ ಎಂದಾಗ ತಟ್ಟನೆ ನೆನಪಾಗುವುದು ಆ ಪಾತ್ರಕ್ಕೊಂದು ಹೊಸ ಆಯಾಮ ನೀಡಿದ ಗೋಡೆ ನಾರಾಯಣ ಹೆಗಡೆಯವರ ಹೆಸರು. ಕವಿರತ್ನ ರನ್ನನು ಚಿತ್ರಿಸಿದ ಕೌರವನ ಪಾತ್ರಕ್ಕೆ ಯಕ್ಷರಂಗದಲ್ಲಿ ಅದೇ ಚಿತ್ರಣವನ್ನು ನೀಡಿದ ಕೀರ್ತಿ ಗೋಡೆಯವರಿಗೆ ಸಲ್ಲಬೇಕು. ದೀರೋದ್ದಾತ ನಾಯಕನಾದ ಛಲದಂಕ ಚಕ್ರೇಶ್ವರನನ್ನು ಮಹಾಭಾರತದ ನಾಯಕನನ್ನಾಗಿ ಯಕ್ಷಗಾನದಲ್ಲಿ ಗೋಡೆಯವರು ಚಿತ್ರಿಸಿದ ರೀತಿಯೇ ಒಂದು ಇತಿಹಾಸ. ಅದರಿಂದಲೇ ಎಪ್ಪತ್ತರ ದಶಕದಲ್ಲಿ ದಿ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಗೋಡೆಯವರ ಗದಾಯುದ್ದ ಪ್ರಸಂಗದ ಕೌರವನ ಅರ್ಥಗಾರಿಕೆಯಿರುವ ದ್ವನಿಸುರುಳಿ ದಾಖಲೆಯ ಮಾರಾಟ ಕಂಡಿದೆ.
ಬಡಗುತಿಟ್ಟು ಯಕ್ಷಗಾನ : ಪಾತ್ರದಾರಿಗಳಿಂದ ಪದ್ಯದ ಎತ್ತುಗಡೆ ಒಂದು ಜಿಜ್ಙಾಸೆ
ಯಕ್ಷಗಾನ ದಿನದಿಂದ ದಿನಕ್ಕೆ ತನ್ನ ಮೌಲ್ಯವನ್ನು ಕಳೆದು ಕೊಳ್ಳುತ್ತಿದೆ ಎಂಬ ಕೂಗು ಒಂದಡೆ ಯಾದರೆ ಪರಂಪರೆಯನ್ನು ಉಳಿಸುವ ಕೆಲಸ ಸಾಕಷ್ಟು ಅಲ್ಲಲ್ಲಿ ಆಗುತ್ತಿವೆ ಎಂಬ ಸಮಾದಾನ ಇನ್ನೊಂದಡೆ .

ಪರಂಪರೆ ಎಂದಾಗ ಎಲ್ಲವೂ ಕಲಾಪೂರ್ಣವೆನ್ನಲಾಗದು. ಯಾವುದು ಕಲೆಯ ಸೌಂದರ್ಯಕ್ಕೆ ಅಗತ್ಯವೊ, ಅದನ್ನು ಉಳಿಸಿ ಕೊಳ್ಳುವುದು ಅತ್ಯಗತ್ಯ. ಈ ಪರಂಪರೆಯ ಮೌಲ್ಯ ನಶಿಸುವುದಕ್ಕೆ ಕಲಾವಿದರಷ್ಟೆ ಕಾರಣರಲ್ಲ; ಪ್ರೆಕ್ಷಕರ ಪಾಲುದಾರಿಕೆಯೂ ಇದರಲ್ಲಿದೆ ಯಕ್ಷಗಾನ ರಂಗವಿಂದು ಕಳೆದುಕೊಳ್ಳುತ್ತಿರುವ ``ಪದ್ಯದ ಎತ್ತುಗಡೆ`` ಯ ಬಗ್ಗೆ ಒಂದಿಷ್ಟು ವಿವೇಚಿಸಿದಾಗ ಈ ವಿಷಯ ಸ್ಪಟ್ಟವಾಗುತ್ತದೆ
ಒಡ್ಡೋಲಗ - ರಂಗಭೂಮಿಯ ಅವಿಬಾಜ್ಯ ಅಂಗ
``ಒಡ್ಡೋಲಗ`` ಎಂಬುದು ಯಕ್ಷಾಗಾನ ರಂಗಭೂಮಿಯ ಒಂದು ಮಹತ್ತ್ವಪೂರ್ಣ ಅಂಗ.ಕಥಾ ಪ್ರೆವೇಶಕ್ಕೆ ಆವರಣ ಸ್ರಸ್ಟಿ ಇಲ್ಲಿಂದಲೆ.ಹಲವು ಬಗೆಯ ನ್ರತ್ಯ ವೈವಿದ್ಯವನ್ನು ಇಲ್ಲೇ ಕಾಣ ಬಹುದು.ಇಲ್ಲಿ ಮಾತಿಲ್ಲದೆ ಹೋಗ ಬಹುದು,ಆದರೆ ನ್ರತ್ಯದ ಬಾಷೆಯಿದೆ ಎಂಬುದನ್ನು ಮರೆಯಲಾಗದು.ಕನಿಷ್ಟ ಅರ್ದ ಗಂಟೆಯಾದರೂ ಈ ಭಾಗವಿರಬೇಕು.ಒಡ್ಡೋಲಗ ಸೌಂದರ್ಯಾಸ್ವಾದನೆಗೆ ಸಿದ್ದನಾಗದ ಪ್ರೇಕ್ಷಕನಿಗೆ ಈ ಬಾಗ ನೀರಸವಾದೀತು.ಹಾಗೆಂದು ಒಡ್ಡೋಲಗವಿಲ್ಲದೆ ಪ್ರಸದರ್ಶನ ನೀಡುವುದು ``ಭವ್ಯ`` ಎನಿಸದು.
ಬಡಗುತಿಟ್ಟಿನ ಐಸಿರಿ ಐರ್ ಬೈಲು ಆನಂದ ಶೆಟ್ಟಿ
ಬಡಗುತಿಟ್ಟಿನ ಮದ್ಯಪ್ರಾಂತ್ಯದ ಬಯಲಾಟದ ರಂಗಸ್ಥಳದ, ಸಮಕಾಲೀನ ಐವತ್ತರ ವಯೋಮಿತಿಯ ಆಸುಪಾಸಿನ ಎರಡನೇ ವೇಷದಾರಿಗಳಾದ ಉಪ್ಪುಂದ ನಾಗೇಂದ್ರ, ನರಾಡಿ ಬೋಜರಾಜ ಶೆಟ್ಟಿ, ಆಜ್ರಿ ಗೋಪಾಲಗಾಣಿಗ, ಕೋಡಿ ವಿಶ್ವನಾಥಗಾಣಿಗ ಮುಂತಾದವರ ಸಾಲಿನಲ್ಲಿ ಗುರುತಿಸಲ್ಪಡುವ ಇನ್ನೊಂದು ಹೆಸರು ಐರ್ ಬೈಲು ಆನಂದ ಶೆಟ್ಟಿಯವರದ್ದು. ಮದ್ಯಮ ತಿಟ್ಟಿನ ಗಾಂಬೀರ್ಯಬದ್ದ ರಂಗನೆಡೆಯಲ್ಲಿ ವಿಜ್ರಂಭಿಸುವ ಇವರಲ್ಲಿ ಗುರು ವೀರಭದ್ರ ನಾಯಕರ ಮಟ್ಪಾಡಿ ತಿಟ್ಟಿನ ಕುಣಿತವನ್ನು ಗಮನಿಸಬಹುದು.

ಇವರು ಯಕ್ಷಗಾನ ನ್ರತ್ಯ ಅಭ್ಯಾಸ ಮಾಡಿದ್ದು ವೀರಭದ್ರ ನಾಯ್ಕರ ಶಿಷ್ಯರಾದ ಹಾರಾಡಿ ಸರ್ವೋತ್ತಮ ಗಾಣಿಗರಲ್ಲಿ ಮಾತ್ರವಲ್ಲದೇ, ಮಾರಣಕಟ್ಟೆ ಮೇಳದಲ್ಲಿ ವೀರಭದ್ರ ನಾಯ್ಕರ ನ್ರತ್ಯ ಶೈಲಿಯನ್ನು ಬಾಲಕಲಾವಿದನಾಗಿ ಅದೇ ಮೇಳದಲ್ಲಿ ನಾಯ್ಕರ ನ್ರತ್ಯದ ಸೂಕ್ಷ್ಮಾತಿಸೂಕ್ಷ್ಮವನ್ನು ಅರಿತುಕೊಂಡವರು.
ಬಡಗುತಿಟ್ಟಿನ ಹಿರಿಯ ಬಣ್ಣದ ವೇಷದಾರಿ - ಎಳ್ಳಂಪಳ್ಳಿ ಜಗನ್ನಾಥ ಆಚಾರ್
ಬಣ್ಣದ ವೇಷದಿಂದ ಬಡವಾಗಿರುವ ಬಡಗುತಿಟ್ಟಿಗೆ ಎಳ್ಳಂಪಳ್ಳಿಯ ಜಗನ್ನಾಥ ಆಚಾರ್ಯರು ಏಕಮೇವ ಆಶಾಕಿರಣ.ಯಕ್ಷಗಾನದಲ್ಲಿ ಭಾಗವತಿಕೆ,ಹಿಮ್ಮೇಳ ಪರಿಕರ, ಮುಮ್ಮೇಳದ ವಿವಿದ ರೀತಿಯ ವೇಷಗಳು ಇಂದು ಬಹಳಷ್ಟು ಸುಧಾಹರಣೆಯೊಂದಿಗೆ ಆಕರ್ಷಣೀಯವಾಗಿ ಬೆಳೆಯುತಿದ್ದರೂ ಬಡಗುತಿಟ್ಟಿನ ಮಟ್ಟಿಗೆ ಬಣ್ಣದ ವೇಷದ ಪ್ರಾಮುಖ್ಯ ನಶಿಸುತ್ತಿದೆ ಎನ್ನುವುದು ಖೇದಕರ.ತೆಂಕು ತಿಟ್ಟಿಗೆ ಹೋಲಿಸಿದಾಗ ಬಡಗಿನಲ್ಲಿ ಬಣ್ಣದ ವೇಷದಾರಿಗಳು ಬೆರಳೆಣಿಕೆಯಷ್ಟು ಮಾತ್ರ.ಇಂತಹ ಕಾಲಘಟ್ಟದಲ್ಲಿ ಹಿರಿಯ ಬಣ್ಣದ ವೇಷದಾರಿ, ಯಕ್ಷಲೋಕದಲ್ಲಿ ಸುದೀರ್ಘ ನಲವತ್ತ ಒಂದು ಸಂವತ್ಸರಕಾಲ ಬಣ್ಣದ ವೇಷದಾರಿಯಾಗಿ ಮೆರೆದ ಆಚಾರ್ಯರು ನಮ್ಮ ಗಮನಸೆಳೆಯುತ್ತಾರೆ.
ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ