ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಮುಖವಾಣಿ  
ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕ್ರತ ಶ್ರೇಷ್ಠ ವಿಮರ್ಶಕ ಡಾ| ಎಂ. ಪ್ರಭಾಕರ ಜೋಷಿ
ನಿವೃತ್ತ ಪ್ರಾ೦ಶುಪಾಲಕ, ಪ್ರಸಿಧ್ಧ ಅರ್ಥಧಾರಿ, ಸೊಗಸಿನ ಭಾಷಣಗಾರರಾದ ಶ್ರೀಯುತ ಡಾ| ಎ೦.ಪ್ರಭಾಕರ ಜೋಷಿಯವರು ಯಕ್ಷಗಾನ ಪ್ರಸ೦ಗವೊ೦ದರ ಪ್ರಭ೦ದಕ್ಕೆ ಗೌರವ ಡಾಕ್ಟರೇಟ್ ಪಡೆದ ಹಿರಿಯ ವಿಧ್ವಾ೦ಸರು. ಯಕ್ಷಗಾನದ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಅಪಾರ ಜ್ಞಾನ ಹೊದಿರುವ ಜೋಷಿಯವರು ಶ್ರೇಷ್ಠ ವಿಮರ್ಶಕರು. ದೇಶ - ವಿದೇಶಗಳಲ್ಲಿ ನೂರಾರು ಯಕ್ಷಗಾನ ಕಮ್ಮಟಗಳಲ್ಲಿ ಭಾಗವಸಿದ ಜೋಷಿಯವರ ಯಕ್ಷಗಾನದ ನಡೆದಾಡುವ ವಿಶ್ವಕೋಶವೆ೦ದರೆ ಉತ್ಪ್ರೇಕ್ಷೆಯಾಗಲಾರದು. ಈ ವರ್ಷದ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ನೀಡುವ ಪಾರ್ತಿಸುಬ್ಬ ಪ್ರಶಸ್ತಿಗೆ ಜೋಷಿಯವರು ಆಯ್ಕೆಯಾಗಿದ್ದಾರೆ. ಎಂದೋ ಸಿಗಬೇಕಿದ್ದ ಪ್ರಶಸ್ತಿ ತಡವಾಗಿಯಾದರೂ ದೊರೆತುದು ಸಂತೋಷದ ವಿಷಯ. ( ಎಂ. ಶಾಂತಾರಾಮ ಕುಡ್ವ )
ಕಣ್ಮರೆಯಾದ ಯಕ್ಷ ಭಂಡಾರ ಐರೋಡಿ ರಾಮ ಗಾಣಿಗ
ಯಕ್ಷಗಾನದ ಚಲಿಸುವ ವಿಶ್ವಕೋಶ ಎಂದೇ ಖ್ಯಾತರಾದ ಸುಮಾರು 95 ವರ್ಷ ಪ್ರಾಯದ ಹಿರಿಯ ಕಲಾಜೀವಿ ಶಿಕ್ಷಕ ರಾಷ್ಟೀಯ ಪ್ರಶಸ್ತಿ ಪುರಸ್ಕ್ರತ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐರೋಡಿ ರಾಮ ಗಾಣಿಗರು ಇನ್ನಿಲ್ಲ. ಅಮೃತೇಶ್ವರಿ, ಸೌಕೂರು, ಮಂದಾರ್ತಿ ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿ, ಬಳಿಕ ಶಿಕ್ಷಕ ವೃತ್ತಿಯತ್ತ ತೊಡಗಿದ ಗಾಣಿಗರು ರಾಷ್ಟೀಯ ಪ್ರಶಸ್ತಿ ಪುರಸ್ಕ್ರತರು. ಡಾ. ಶಿವರಾಮ ಕಾರಂತರೊಂದಿಗೆ ದೇಶ-ವಿದೇಶದಲ್ಲೂ ಯಕ್ಷಗಾನದ ಕಂಪನ್ನು ಹರಿಸಿದ್ದಾರೆ. ( ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ )
ಯಕ್ಷರಂಗದ ಯುವಪ್ರತಿಭೆ ಸಂತೋಷ ಕುಲಶೇಖರ ಇವರಿಗೆ ಯಕ್ಷಮೇನಕೆ ಪ್ರಶಸ್ತಿ
ಮೋಹಕ ರೂಪ ಆಳಂಗ ಸ್ತ್ರೀ ಸಹಜ ನಿಲುವು. ಭಾವಪೂರ್ಣ ಅಭಿನಯದಿಂದ ಸಹಸ್ರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು ತೆಂಕು ಬಡಗಿನ ಯುವ ಪ್ರತಿಭೆ ಸಂತೋಷ ಕುಲಶೇಖರ ಇವರು. ಅನೇಕ ಕಾರ್ಯಕ್ರಮದಲ್ಲಿ ತನ್ನ ಚುರುಕು ನೃತ್ಯದಿಂದ ಮನಸೆಳೆದ ತೆಂಕು ಬಡಗುತಿಟ್ಟುಗಳ ಸವ್ಯಸಾಚಿ ಸ್ತ್ರೀ ವೇಷಧಾರಿ ಮೋಹಕ ಕಲಾವಿದ ಸಂತೋಷ ಕುಲಶೇಖರ ಇವರಿಗೆ ``ಯಕ್ಷ ಮೇನಕಾ`` ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ( ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ )


ದೃಶ್ಯಾವಳಿ  
ಹುಡುಗ ನಿನ್ನ ಬೆಡಗಿನ ನುಡಿಯ ಕಟ್ಟಿಡುಭಾಗವತರು : ಸುಬ್ರಹ್ಮಣ್ಯ ಧಾರೇಶ್ವರ
ಅರ್ಜುನ : ವಿದ್ಯಾಧರ ಜಳವಳ್ಳಿ
ಪ್ರಸ೦ಗ : ಸುಧನ್ವಾರ್ಜುನ

ಲೇಖನಗಳು  
ಕಣ್ಮರೆಯಾದ ಅಗ್ರಮಾನ್ಯ ಕಲಾವಿದ ಕೋಡಿ ಶಂಕರ ಗಾಣಿಗ
ಶ್ರೀ. ಕ್ಷೇತ್ರ ಮಂದಾರ್ತಿ ಮೇಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಮೇಳಕ್ಕೂ ಯಕ್ಷಗಾನ ಕಲೆಗೂ ಘನತೆಯನ್ನು ತಂದಿತ್ತು, ಯಕ್ಷಗಾನಕ್ಕೆ ಪ್ರಥಮ ರಾಷ್ಟ್ರ ಪ್ರಶಸ್ತಿ ಗಳಿಸಿಕೊಟ್ಟ ರಾಷ್ಟಪ್ರಶಸ್ತಿ ವಿಜೇತ ದಿ. ಹಾರಾಡಿ ರಾಮ ಗಾಣಿಗರ ಮುಂದಿನ ತಲೆಮಾರಿನವರಾಗಿ ದೀರ್ಘಕಾಲ ಮಂದಾರ್ತಿ ಮೇಳದಲ್ಲಿ ರಾಮಗಾಣಿಗರಿಂದ ತೆರವಾದ ಸ್ಥಾನವನ್ನು ಸಮರ್ಥವಾಗಿ ತುಂಬಿದ ಅದೇ ಕುಟುಂಬದ ಸದಸ್ಯ ಕೋಡಿ ಶಂಕರಗಾಣಿಗರು ಇನ್ನಿಲ್ಲವಾಗಿದ್ದಾರೆ. ಹಾರಾಡಿ ಹಾಗು ಮಟ್ಪಾಡಿ ತಿಟ್ಟುಗಳ ಎಲ್ಲ ಕಲಾವಿದರ ಒಡನಾಡಿಯಾದ ಇವರು ಜೋಡಾಟದಲೂ ಮೂರು ನಾಲ್ಕು ವೇಷ ಮಾಡಿ ತೀರ್ಪುಗಾರರಿಂದ ಸೈ ಎಣಿಸಿಕೊಂಡವರು. ( ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ )
ಯಕ್ಷಗಾನ ಪ್ರಸಂಗ ಸಾಹಿತ್ಯ
ಯಕ್ಷಗಾನ ಪ್ರಸಂಗಗಳು ಪದ್ಯ ರೂಪದಲ್ಲಿರುವ ಕಥಾ ವಸ್ತುಗಳಾಗಿವೆ. ಯಕ್ಷಗಾನ ಅರ್ಥಗಾರಿಕೆಗೆ ಪ್ರಸಂಗಗಳು ಮೂಲ ಪಠ್ಯಗಳಾಗಿರುತ್ತವೆ. ಪ್ರಸಂಗವು ಪ್ರದರ್ಶನದ ಸಂವಿಧಾನವಾಗಿರುತ್ತದೆ. ಭಾಗವತರು ಮತ್ತು ಕಲಾವಿದರು ಪ್ರಸಂಗನಿಷ್ಠರಾಗಿ ಕಥಾವಸ್ತು ವನ್ನು ಮುಂದಕ್ಕೆ ಒಯ್ಯುತ್ತಾರೆ. ಯಕ್ಷಗಾನ ಪ್ರಸಂಗಗಳನ್ನು ವಸ್ತುವಿಗೆ ಅನುಗುಣವಾಗಿ ಪೌರಾಣಿಕ, ಐತಿಹಾಸಿಕ, ಜಾನಪದೀಯ ಮತ್ತು ಕಾಲ್ಪನಿಕ ಪ್ರಸಂಗಗಳೆಂದು ವಿಭಾಗಿಸಬಹುದು. ಭಾಷೆಗೆ ಅನುಗುಣ ವಾಗಿ ಕನ್ನಡ, ತುಳು, ಕೊಂಕಣಿ, ಮಲೆಯಾಳ, ಹಿಂದಿ ಮತ್ತು ಇಂಗ್ಲೀಷ್‌ ಯಕ್ಷಗಾನ ಪ್ರಸಂಗಗಳೆಂದು ವರ್ಗೀಕರಿಸಬಹುದು. ( ಪ್ರಭಾಕರ ಶಿಶಿಲ )
ಟೆಂಟಲ್ಲಿ ಅರ್ಧಾಯುಷ್ಯ ಕಳೆದ ಹೆಮ್ಮೆಯ ಯಜಮಾನ : ಕಸ್ತೂರಿ ವರದರಾಯ ಪೈ
ಬದುಕಿನ ಅರ್ಧ ಶತಮಾನಗಳನ್ನು ಚೌಕಿಯಲ್ಲಿ ಕಳೆದ ಪೈಗಳು ‘ಶ್ರೀ ಮಹಮ್ಮಾಯಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸುರತ್ಕಲ್’ಮೇಳವನ್ನು, ವಿವಿಧ ಯಶಸ್ವೀ ಪ್ರಯೋಗಗಳಿ೦ದ ಮುನ್ನೆಡೆಸಿ, ಕಲಾವಿದರ ಪ್ರೀತಿ ಪಾತ್ರರಾದ ಯಜಮಾನರಾಗಿದ್ದರು. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದ್ದ ಅವರು ಯಜಮಾನಿಕೆಗೂ ‘ಅರ್ಹತೆಯಿದೆ’ ಮತ್ತು ‘ಅರ್ಹತೆ ಬೇಕು’ ಎಂದು ಅನುಷ್ಠಾನಿಸಿ ತೋರಿಸಿ ಕೊಟ್ಟವರು. ತೊಂಬತ್ತೊಂದು ವರ್ಷಗಳ ತುಂಬು ಜೀವನವನ್ನು ಅನುಭವಿಸಿದ ವರದರಾಯ ಪೈಗಳು 2016 ಜುಲೈ 17ರಂದು ದೈವಾಧೀನರಾದರು. ಅವರು ತಮ್ಮ ಅರ್ಧಾಯುಷ್ಯವನ್ನು ಚೌಕಿಯಲ್ಲೇ ಕಳೆದಿದ್ದರು! ( ನಾ.ಕಾರ೦ತ, ಪೆರಾಜೆ )
ರಾಜಾಂಗಣದಲ್ಲಿ ರಂಜಿಸಿದ ಧಾರೇಶ್ವರ ಯಕ್ಷಬಳಗದವರ ಶ್ರೀ ಕೃಷ್ಣ ಅಷ್ಟಾಹ
ಪರ್ಯಾಯ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಬಡಗುತಿಟ್ಟಿನ ಹಿರಿಯ ಭಾಗವತ ಧಾರೇಶ್ವರರ ಸಾರಥ್ಯದಲ್ಲಿ ಧಾರೇಶ್ವರ ಬಳಗದವರು ಎಂಟು ದಿನ ಉಡುಪಿ ರಾಜಾಂಗಣದಲ್ಲಿ ಪ್ರದರ್ಶಿಸಿದ ಶ್ರೀ ಕೃಷ್ಣನ ಬಾಲಲೀಲೆಯಿಂದ ಆರಂಬಿಸಿ ಪ್ರಭುದ್ದ ರಾಜಕಾರಿಣಿಯಾದ ಶ್ರೀಕೃಷ್ಣ, ಕೌರವ ಪಾಂಡವರ ನಡುವೆ ಸಂದಾನ ನಡುಸುವವರೆಗೆ ವಿವಿಧ ಪ್ರಸಂಗಗಳು ಹಲವಾರು ದಾಖಲಿಸುವ ಅಂಶಗಳೊಂದಿಗೆ ಸಹ್ರದಯ ಯಕ್ಷಗಾನಾಭಿಮಾನಿಗಳ ಮನತಣಿಸುವಲ್ಲಿ ಯಶಸ್ವಿಯಾಯಿತು. ಎಂಟು ದಿನ ಶ್ರೀ ಕೃಷ್ಣನ ಜನ್ಮ-ಬಾಲ್ಯ-ವಿವಾಹ-ಪ್ರಭುದ್ದತೆಯ ಮೇಲೆ ಬೆಳಕು ಚೆಲ್ಲುವ ಎಂಟು ಕಥಾನಕಗಳು ಇಂತಹ ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ಯಶಸ್ವಿ ಪ್ರಯೋಗ ಎನ್ನಬಹುದು. ಈ ನಿಟ್ಟಿನಲ್ಲಿ ಶ್ರೀ ದಾರೇಶ್ವರ ಯಕ್ಷ ಬಳಗದ ಸರ್ವ ಸದಸ್ಯರೂ ಅಭಿನಂದನಾರ್ಹರು. ( ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ )
ಇತಿಹಾಸದ ಪುಟಕ್ಕೆ ಸಂದು ಹೋದ ಯಕ್ಷ ವಾಚಸ್ಮತಿ : ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು. ಯಕ್ಷರಂಗಕ್ಕೆ ತೀವೃ ಆಘಾತ ತಂದ ಸುದ್ದಿ ಇದು. ಕಳೆದ ಐದು ತಿಂಗಳಿಂದ ಅನಾರೋಗ್ಯದಿಂದಿದ್ದ ಶೆಟ್ಟರ ನಿಧನ ಯಕ್ಷರಂಗಕ್ಕೆ ದೊಡ್ಡ ನಷ್ಟವನ್ನೇ ತಂದಿದೆ. ಸದಾ ನಗುಮೊಗದ, ಸರಳ, ನಿಗರ್ವಿ ವ್ಯಕ್ತಿತ್ವದ ಶೆಟ್ಟರು ಇನ್ನೀಗ ನೆನಪು ಮಾತ್ರವಾಗಿ ಇತಿಹಾಸದ ಪುಟಕ್ಕೆ ಸಂದು ಹೋದರು ಎಂದು ಬರೆಯುವುದೇ ವೇದನೆಯ ವಿಷಯ. ( ಎಂ. ಶಾಂತಾರಾಮ ಕುಡ್ವ )
ತೆಂಕುತಿಟ್ಟಿನ ಪ್ರಖರ ಪ್ರತಿಭೆ ರಂಗವಿಹಾರಿ ಕಾಸರಗೋಡು ಸುಬ್ರಾಯ ಹೊಳ್ಳ
ತೆಂಕುತಿಟ್ಟು ಯಕ್ಷಗಾನದ ರಂಗಸ್ಥಳದ ಮಿಂಚು, ಪ್ರಖರ ಪ್ರತಿಭೆಯ ರಂಗವಿಹಾರಿ ಕಾಸರಗೋಡು ಸುಬ್ರಾಯ ಹೊಳ್ಳರವರು ಪ್ರಸ್ತುತ ತೆಂಕುತಿಟ್ಟಿನ ಪಾರಂಪರಿಕ ಶೈಲಿಯ ಪ್ರಾತಿನಿಧಿಕ ವೇಷಧಾರಿ. ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಮೆಚ್ಚುವ, ಪ್ರೀತಿಸುವ ಇವರು ಪ್ರತಿನಾಯಕನಾಗಿಯೇ ಜನಪ್ರಿಯ. ಅಚ್ಚುಕಟ್ಟಾದ ವೇಷಗಾರಿಕೆ, ಪರಿಪೂರ್ಣವಾದ ಬಣ್ಣದ ಬರವಣಿಗೆ, ಯಕ್ಷಗಾನೀಯ ನಿಲುಮೆ-ರಂಗಚಲನೆ, ಆಕರ್ಷಕ ಶೈಲಿಯ ರಂಗಲಯ, ಶ್ರುತಿಬದ್ಧ ಮಾತುಗಾರಿಕೆ, ತರ್ಕಕ್ಕೆ ಬಿದ್ದರೆ ಸ್ಫೋಟಗೊಳ್ಳುವ ಪಾಂಡಿತ್ಯಭರಿತ ವಾಕ್ಪಟುತ್ವ ಸುಬ್ರಾಯ ಹೊಳ್ಳರನ್ನು ಕಲಾವಿದನಾಗಿ ಎತ್ತರಕ್ಕೇರಿಸಿವೆ. ( ಎಂ.ನಾ. ಚಂಬಲ್ತಿಮಾರ್‌ )
ಇಡಗುಂಜಿ ಮೇಳಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಧನಸಹಾಯ ನಿರಾಕರಣೆ
ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇಂತಹ ಸರಕಾರದ ಸಂಸ್ಥೆಗಳೂ ಕೂಡ ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವ ಇಂತಹ ಸಂಸ್ಥೆಗಳಿಗೆ ನೀಡುವ ಅಲ್ಪ ಸಹಾಯವನ್ನೂ ವಿಳಂಬಗೊಳಿಸಿದರೆ ಅಥವಾ ಪೂರ್ವಸೂಚನೆಯಿಲ್ಲದೆ ನಿಲ್ಲಿಸಿದರೆ ನಷ್ಟವಾಗುವುದು ಯಾರಿಗೆ ಎನ್ನುವ ಕುರಿತು ಚಿಂತಿಸಬೇಕಿದೆ. ಈ ಸಂಸ್ಥೆಗಳನ್ನು ಬಹಳ ಕಷ್ಟಪಟ್ಟು ನಡೆಸುತ್ತಿರುವುದು ಈ ನಮ್ಮ ಸಂಸ್ಕೃತಿಯ ಭಾಗವಾಗಿರುವ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದಕ್ಕಾಗಿ. ಯಕ್ಷಗಾನ ಕಲೆ ಉಳಿದು ಬೆಳೆಯಬೇಕಿದ್ದಲ್ಲಿ ಇಂತಹ ಸಂಸ್ಥೆಗಳು ಜೀವಂತವಾಗಿರಬೇಕು. ಇದಕ್ಕೆ ಸರಕಾರದ ಧನಸಹಾಯ ಅತೀ ಅವಶ್ಯ. ( ಕಟೀಲು ಸಿತ್ಲ ರಂಗನಾಥ ರಾವ್ )
ಜಗಜ್ಯೋತಿ ಬಸವೇಶ್ವರ ಚರಿತೆ : ಯಕ್ಷಗಾನ ಪ್ರಸಂಗಗಳಿಗೆ ವಚನಗಳ ಬೆಸುಗೆ
ನಗರದ ಡಿವಿಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ವಿದ್ವಾನ್‌ ದತ್ತಮೂರ್ತಿ ಭಟ್ ಅವರು ಸಮಾನತೆಯ ಹರಿಕಾರ ಬಸವಣ್ಣನವರ ಜೀವನ ಚರಿತ್ರೆ, ವಚನ ಮಾಲಿಕೆ, ಬಸವತತ್ವ ಒಳಗೊಂಡ ವಿಚಾರಗಳನ್ನು ಯಕ್ಷಗಾನ ಪ್ರಸಂಗಕ್ಕೆ ಅಳವಡಿಸಿ, ನಾಡಿನ ಮೂಲೆ ಮೂಲೆಯಲ್ಲೂ ಪ್ರದರ್ಶನ ನೀಡಿದ್ದಾರೆ. ಎನ್ನುವಂತೆ ಮಲೆನಾಡು–ಕರಾವಳಿ ಭಾಗದ ಜನಪ್ರಿಯ ಯಕ್ಷಗಾನಕ್ಕೂ, ಉತ್ತರ ಕರ್ನಾಟಕದಲ್ಲಿ ಸಮಾನತೆಯ ಕಹಳೆ ಮೊಳೆಗಿಸಿದ 12ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನ ವಚನ ಸಾಹಿತ್ಯಕ್ಕೂ ಎಲ್ಲಿಯ ಸಂಬಂಧ. ಆದರೂ, ಇಂತಹ ಸಂಬಂಧ ಬೆಸೆದವರು ನಗರದ ನಾಟ್ಯಶ್ರೀ ಕಲಾ ತಂಡದ ದತ್ತಮೂರ್ತಿ ಭಟ್‌. ( ಚಂದ್ರಹಾಸ ಹಿರೇಮಳಲಿ )
ಕಲಾಸೇವೆಯ ರಜತ ವರ್ಷದ ಹೊಸ್ತಿಲಲ್ಲಿ ಬೇಡಿಕೆಯ ಕಲಾವಿದ : ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ
ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಕಲಾವಿದರಲ್ಲಿ, ಭರವಸೆ ವೇಷಧಾರಿ ಹಾಗೂ ಅರ್ಥಧಾರಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ ಒಬ್ಬರು. ಆಟ ಕೂಟಗಳೆರಡರಲ್ಲೂ ಸಲ್ಲುವ ಶ್ರೇಷ್ಟ ಕಲಾವಿದರು. ಯಕ್ಷರಂಗದಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶೆಟ್ಟರು, ಕಿರಿಯ ಪ್ರಾಯದಲ್ಲೇ ಹಿರಿದನ್ನು ಸಾಧಿಸಿ, ಯಕ್ಷಗಾನ ದಿಗ್ಗಜ ಸಿದ್ದಕಟ್ಟೆ ದಿ| ಚೆನ್ನಪ್ಪ ಶೆಟ್ಟಿ ಅವರ ತಣ್ತೀ, ಆದರ್ಶಗಳನ್ನು ಪಾಲಿಸಿ, ಅದೇ ದಾರಿಯಲ್ಲಿ ನಡೆಯುತ್ತಿದ್ದು ಮುಂದೊಂದು ದಿನ ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವಲ್ಲಿ ಯಶಸ್ವಿಯಾಗಲಿ ಎಂದು ಕಲಾಭಿಮಾನಿಗಳ ಹಾರೈಕೆ. ( ಸತೀಶ್ ನಾಯಕ್ , ಪಕಳಕು೦ಜ )
``ಗಾನ ಗಂಧರ್ವ`` ಪದ್ಯಾಣ ಗಣಪತಿ ಭಟ್ಟರಿಗೆ 60ರ ಸಂಭ್ರಮದ ಸನ್ಮಾನ
ಸುಮಾರು 70ರ ದಶಕದಲ್ಲಿ ಯಕ್ಷಗಾನದ ಭವಿಷ್ಯದ ಬಗ್ಗೆ ಕಾಡುತ್ತಿದ್ದ ಚಿಂತನೆ ಪ್ರಸಕ್ತ ದಿನಗಳಲ್ಲೂ ಕಾಣಿಸುತ್ತಿದೆ. ಹೀಗಾಗಿ ಯಕ್ಷಗಾನದ ಮುಂದಿನ ಪರಂಪರೆಗೆ ಯಾರು ಎಂಬ ಬಗ್ಗೆ ನಮ್ಮೊಳಗೆ ಗಂಭೀರ ಚಿಂತನೆ ಮಾಡುವ ಆವಶ್ಯಕತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಯಕ್ಷಗಾನದ ಹಿರಿಯ, ಪ್ರಸಿದ್ಧ ಭಾಗವತ ``ಗಾನ ಗಂಧರ್ವ`` ಪದ್ಯಾಣ ಗಣಪತಿ ಭಟ್ಟರಿಗೆ 60ರ ಸಂಭ್ರಮದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ (ಜೂ. 4, ಜೂ. 5) ಮಂಗಳೂರು ಪುರಭವನದಲ್ಲಿ ಆಯೋಜಿಸಲಾದ ದ್ವಿದಿನ ಕಲೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ( ಉದಯವಾಣಿ )
ಎಂ. ಎಲ್‌. ಸಾಮಗ ಮತ್ತು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ
ಉಡುಪಿಯ ಯಕ್ಷಗಾನ ಕಲಾರಂಗವು ವರ್ಷ ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಯನ್ನು ಪ್ರೊ| ಎಂ. ಎಲ್‌. ಸಾಮಗರವರಿಗೆ 29-5-2016ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು , ಮಟ್ಟಿ ಮುರಲೀಧರ ರಾವ್‌ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸಿದ್ಧಕಟ್ಟೆಗೆ ತೆರಳಿ ಅಜ್ಜಿಬೆಟ್ಟು ನಿವಾಸದಲ್ಲಿ ತೀವ್ರ ಅನಾರೋಗ್ಯದಿ೦ದ ಇದೀಗ ಚೇತರಿಸುತ್ತಿರುವ ಹಿರಿಯ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ( ನಾರಾಯಣ ಎಂ. ಹೆಗಡೆ )
ಯಕ್ಷಧ್ರುವ ಪಟ್ಲ ಪ್ರಶಸ್ತಿ ಪುರಸ್ಕೃತ, ಯಕ್ಷರಂಗದ ರಾಜ : ಪೆರುವಾಯಿ ನಾರಾಯಣ ಶೆಟ್ಟಿ
ಯಕ್ಷಗಾನ ಕಲಾಕ್ಷೇತ್ರದಲ್ಲಿ ಮುಂಚೂಣಿಯ ಕಲಾವಿದರಾಗಿ ಐವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಪೆರುವಾಯಿ ನಾರಾಯಣ ಶೆಟ್ಟಿ. ಜಾಬಾಲಿ, ಅರುಣಾಸುರ, ರಕ್ತಬೀಜ, ಕೌರವ, ಕರ್ಣ, ಅರ್ಜುನ, ಅತಿಕಾಯ, ಇಂದ್ರಜಿತು, ಕೋಟಿ ಚೆನ್ನಯದ ಕೋಟಿ ಮೊದಲಾದ ವೇಷಗಳ ನಿರ್ವಹಣೆಯಲ್ಲಿ ``ಪೆರುವಾಯಿ ಶೈಲಿ`` ಎಂಬ ಹೊಸ ಹಾದಿಯನ್ನು ನಿರ್ಮಿಸಿದ ಕೀರ್ತಿವಂತ. ತೆಂಕುತಿಟ್ಟಿನ ಯಕ್ಷರಂಗದಲ್ಲಿ ತನ್ನದೇ ಛಾಪನ್ನು ನಿರ್ಮಿಸಿದ ಕನ್ನಡ -ತುಳು ಭಾಷೆಯ ಪ್ರಸಂಗಗಳಲ್ಲಿ ಏಕಪ್ರಕಾರ ಮಿಂಚಿದ ``ಯಕ್ಷರಂಗದ ರಾಜ`` ಎನಿಸಿದ ಪೆರುವಾಯಿ ನಾರಾಯಣ ಶೆಟ್ಟಿಯವರು ಎಲ್ಲ ಬಗೆಯ ನಾಯಕ-ಪ್ರತಿನಾಯಕ ಪಾತ್ರಗಳೆರಡನ್ನೂ ಚೆನ್ನಾಗಿ ನಿರ್ವಹಿಸುತ್ತಾರೆ. ( ಎಲ್‌. ಎನ್‌. ಭಟ್‌ ಮಳಿಯ )
ಕಲಾಭಿಮಾನಿಗಳ ಸಹಾಯದ ನಿರೀಕ್ಷೆಯಲ್ಲಿ ಬೆದ್ರಳ್ಳಿ ಚಂದ್ರ ಶೆಟ್ಟಿ
ಬಡಗುತಿಟ್ಟಿನ ಪ್ರಸಿದ್ಧ ಹಾಸ್ಯಗಾರ, ಮಡಾಮಕ್ಕಿ ಮೇಳದ ಕಲಾವಿದ ಬೆದ್ರಳ್ಳಿ ಚಂದ್ರ ಶೆಟ್ಟಿ ಸಂಕಷ್ಟಕ್ಕೀಡಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ತನ್ನದೆ ಛಾಪು ಮೂಡಿಸಿದ್ದ ಅವರಿಗೆ ತೀವ್ರ ತೆರನಾದ ಅನಾರೋಗ್ಯ ರಂಗಸ್ಥಳದಿಂದ ವಿಮುಖಗೊಳಿಸಿದೆ. ಕಳೆದ 50 ವರ್ಷಗಳಿಂದ ರಂಗದಲ್ಲಿ ಕಸುವು ಮಾಡಿರುವ ಅವರೀಗ ಕಿಡ್ನಿ, ಹೃದಯ ಬೇನೆಯಿಂದ ಬಳಲುತ್ತಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲಾಗದೆ ಕಷ್ಟಕ್ಕೆ ಸಿಲುಕಿದ್ದಾರೆ. ( ಜಾನ್‌ ಡಿಸೋಜ, ಕುಂದಾಪುರ )
ಅಚ್ಚುಕಟ್ಟಾಗಿ ಸ೦ಪನ್ನಗೊ೦ಡ ಯಕ್ಷಧ್ರುವ ಪಟ್ಲ ಸಂಭ್ರಮ - 2016 ( ಮೇ 24 , 2016 )
ಕಾಳಿಂಗ ನಾವಡರು ಸೃಷ್ಟಿಸಿದ ಭಾಗವತಿಕೆಯ ಹೊಸ ಶೈಲಿ ( ಮೇ 23 , 2016 )

ಉದಯರಾಗ  
ಆತ್ಮೀಯ ವಲಯದಲ್ಲಿ ಮತ್ತು ಯಕ್ಷಗಾನ ಕಲಾವಿದರ ಗಡಣದಲ್ಲಿ ``ಉದಯಣ್ಣ`` ಎಂದೇ ಚಿರಪರಿಚಿತರಾದ ಪ್ರೋ. ಎಸ್. ವಿ ಉದಯ ಕುಮಾರ ಶೆಟ್ಟರು ಬಹುಮುಖ ಪ್ರತಿಭೆಯವರು. ವ್ರತ್ತಿಯಲ್ಲಿ ಮಣಿಪಾಲದ ಪ್ರತಿಷ್ಟಿತ ತಾಂತ್ರಿಕ ಕಾಲೇಜಾದ ಎಂ. ಐ. ಟಿ ಯಲ್ಲಿ ಪ್ರಾದ್ಯಾಪಕರಾದ ಇವರು ಪ್ರವ್ರತ್ತಿಯಲ್ಲಿ ಯಕ್ಷಗಾನ ಭಾಗವತರು. ವೇಷದಾರಿ, ಚಂಡೆವಾದಕರು, ಸ್ವತಹ ಯಕ್ಷಗಾನ ಲೇಕಕರು ಚಿಂತಕಕರು ಮತ್ತು ವಿಮರ್ಶಕರು. ಎತ್ತಣ ಮಾಮರ ಎತ್ತಣ ಕೋಗಿಲೆ ಅಂದಹಾಗೆ ಇಂಜಿನೀಯರಿಂಗ್ ನಲ್ಲಿ ಸ್ನಾತಕೊತ್ತರ ಎಂ. ಟೆಕ್. ಪದವಿ ಪಡೆದ ಇವರು ಒಂದಕೊಂದು ಸಂಬಂದವಿಲ್ಲದ ಯಕ್ಷಗಾನ ಕ್ಷೇತ್ರದಲ್ಲಿ ಕೃಷಿ ಮಾಡಿದ್ದು ಒಂದು ವಿಶೇಷತೆ. ಅವಿಭಜಿತ ದ. ಕ. ಜಿಲ್ಲೆಯಲ್ಲಿ ಇಂಜಿನೀಯರೊಬ್ಬರು ಯಕ್ಷಗಾನ ಕ್ಷೇತ್ರದಲ್ಲಿ ಈ ಮಟ್ಟದ ಸಾದನೆ ಮಾಡಿದ್ದು ಬೇರೆಲ್ಲಿಯೂ ಇಲ್ಲ ಎನ್ನ ಬಹುದಾಗಿದೆ. ಬಡಗುತಿಟ್ಟಿನ ಹವ್ಯಾಸಿ ಯಕ್ಷಗಾನ ರಂಗಭೂಮಿಯ ದಶಾವತಾರಿ ಎಂದು ಜನ ಇವರನ್ನು ಗುರುತಿಸಿದ್ದಾರೆ.

ಪ್ರೋ. ಎಸ್. ವಿ ಉದಯ ಕುಮಾರ ಶೆಟ್ಟರ ಲೇಖನಗಳು


ಯಕ್ಷಚಿ೦ತನ  
ಪಾರ೦ಪರಿಕ ತೆ೦ಕು ತಿಟ್ಟು ಯಕ್ಷಗಾನದ ಪರಮ ಅಭಿಮಾನಿಯೂ, ಲೇಖಕರೂ ಆಗಿರುವ ‘ರಾಜ್ ಕುಮಾರ್‘ರವರು ಯಕ್ಷಗಾನದ ವಿವಿಧ ಆಯಾಮಗಳ ಬಗ್ಗೆ ಅವರ ಬ್ಲಾಗ್ ( Blog ) http://yakshachintana.blogspot.in ( ಯಕ್ಷಚಿ೦ತನ )ದಲ್ಲಿ ಕಳೆದ ೬ ವರ್ಷಗಳಿ೦ದ ವಿವಿಧ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಇವರ `ಬ್ಲಾಗ್`ನಲ್ಲಿ ಪ್ರಕಟಗೊ೦ಡ ಲೇಖನಗಳನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಿರುತ್ತೇನೆ.

`ರಾಜ್ ಕುಮಾರ್`ರ ಲೇಖನಗಳು


ತಾಜಾ ಸುದ್ದಿ
ಮಂದಾರ್ತಿಯಲ್ಲಿ ಗುರುವಂದನೆ ಮತ್ತು ಕಲಾವಂದನೆ
``ಉಡುಪಿ ಕ್ಷೇತ್ರ ಮಹಾತ್ಮೆ`` ನೂತನ ಯಕ್ಷಗಾನ ಪ್ರಸಂಗ ಬಿಡುಗಡೆ
ಹಿರಿಯ ಯಕ್ಷಗಾನ ತಜ್ಞ - ಯಕ್ಷಾನುಭವಿ ಹಂದಾಡಿ ಸುಬ್ಬಣ್ಣ ಭಟ್ಟರು ಇನ್ನಿಲ್ಲ
ಪೆರುವೊಡಿ ನಾರಾಯಣ ಭಟ್ಟರಿಗೆ ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ
ಪೆರುವೊಡಿ ನಾರಾಯಣ ಭಟ್ಟರಿಗೆ ದೋಗ್ರ ಪೂಜಾರಿ ಪ್ರಶಸ್ತಿ


ದಿನದ ಭಾವಚಿತ್ರನಮ್ಮನ್ನಗಲಿದ ಪ್ರಸಿದ್ಧ ಪ್ರಸಂಗಕರ್ತ , ಯಕ್ಷ ವಾಚಸ್ಮತಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪರಮಾತ್ಮನಲ್ಲಿ ಹಾಗೂ ಕಲಾಮಾತೆಯಲ್ಲಿ ಪ್ರಾರ್ಥನೆ.ಶೇಣಿ ಆತ್ಮಕಥನ
ಯಕ್ಷಗಾನ ಪ್ರಪ೦ಚದ ಅನಭಿಷಿಕ್ತ ದೊರೆ, ಮಾತ್ರವಲ್ಲ ಯಕ್ಷಗಾನ ಕ್ಷೇತ್ರದಲ್ಲಿ ಬ೦ಡಾಯ ಪ್ರವೃತ್ತಿಯನ್ನು ಬೆಳೆಸಿ ಅರ್ಥಗಾರಿಕೆಗೆ ಹೊಸ ಆಯಾಮ ತ೦ದುಕೊಟ್ಟವರು. ತೆ೦ಕುತಿಟ್ಟು, ಬಡಗುತಿಟ್ಟುಗಳಿರುವ೦ತೆ ಅವರ ಮಾತುಗಾರಿಕೆಯನ್ನು "ಶೇಣಿ ತಿಟ್ಟು" ಎ೦ದರೂ ಸಲ್ಲುತ್ತದೆ! ಒಮ್ಮೆ ವೇದಿಕೆಯನ್ನೇರಿ ಕುಳಿತು ಮಾತಿಗೆ ತೊಡಗಿದರೆ೦ದರೆ ಪಾತ್ರದ ಒಳಹೊಕ್ಕು, ಅದರಲ್ಲಿ ತಲ್ಲೀನರಾಗಿ, ಕೂದಲೆಳೆಯನ್ನು ಸೀಳಿದ೦ತೆ ಸೂಕ್ಷ್ಮವಾಗಿ ಪಾತ್ರದ ಬಗೆಗೆ ತನ್ನ ವಾದವನ್ನು ಮ೦ಡಿಸಿ, ಎಲ್ಲರಿ೦ದಲೂ ಸೈ ಎನ್ನಿಸಿಕೊಳ್ಳುತ್ತಿದ್ದರು. ಅವರ ಅರ್ಥಗಾರಿಕೆ ಒ೦ದು ಮ್ಯಾಜಿಕ್ ಇದ್ದ೦ತೆ. ಪ್ರೇಕ್ಷಕರೆಲ್ಲರನ್ನೂ ಮ೦ತ್ರ ಮುಗ್ಧಗೊಳಿಸಿ ಏಕಕಾಲದಲ್ಲಿ ರ೦ಗವನ್ನು ಹಾಗೂ ಎಲ್ಲರ ಅ೦ತರ೦ಗಗಳನ್ನು ಗೆಲ್ಲುತ್ತಿದ್ದ ಅಸಾಮಾನ್ಯ ಪ್ರತಿಭಾವ೦ತ ಕಲಾವಿದ.

ಯುಗಪ್ರವರ್ತಕ ಶೇಣಿ ಗೋಪಾಲಕೃಷ್ಣ ಭಟ್ ರವರ ಆತ್ಮಕಥನ ``ಯಕ್ಷಗಾನ ಮತ್ತು ನಾನು``ಸುದ್ದಿ - ಸಮುಚ್ಛಯ
ಜುಲೈ 16 , 2016 : ರಜತ ಸಂಭ್ರಮದಲ್ಲಿ ``ಇಂದ್ರ ನಾಗ``
ಜುಲೈ 15 , 2016 : ಉಡುಪಿ ರಾಜಾಂಗಣದಲ್ಲಿ ಧಾರೇಶ್ವರ ಬಳಗದ ಶ್ರೀ ಕೃಷ್ಣ ಅಷ್ಟಾಹದ ಸಮಾರೋಪ
ಜುಲೈ 14 , 2016 : ಯಕ್ಷಗಾನ ಕಲಾರಂಗದ ಅವಳಿ ಕಾರ್ಯಕ್ರಮಗಳ ಅವಲೋಕನ
ಜುಲೈ 12 , 2016 : ಹೊರ ಜಿಲ್ಲೆಗಳಲ್ಲಿ ಯಕ್ಷಗಾನದ ಕಂಪನ್ನು ಹರಡುವಲ್ಲಿ ಪ್ರವಾಸಿ ಯಕ್ಷಗಾನ ಮೇಳಗಳ ಜವಬ್ದಾರಿ ಹೆಚ್ಚಿನದ್ದು
ಜುಲೈ 6 , 2016 : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಕ್ಷಗಾನ ಕಲಾವಿದರಿಗೆ ಅವಮಾನ
ಜುಲೈ 2 , 2016 : ಬೆಂಗಳೂರು ಯಕ್ಷಪ್ರಿಯರಿಗೆ 5 ದಿನ ಯಕ್ಷ ರಸಗವಳ
ಜುಲೈ 1 , 2016 : ಯಕ್ಷ ವಾಚಸ್ಪತಿ, ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ
ಜೂನ್ 27 , 2016 : ಮರವಂತೆ ದಾಸದ್ವಯರು ದಾಸ ಶೈಲಿಯ ಎರಡು ಕಣ್ಣುಗಳು : ಪ್ರೊ. ಎಸ್. ವಿ.
ಜೂನ್ 24 , 2016 : ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ ಮಾಸದ ಮೆಲುಕು: ನರಕಾಸುರ ವಧೆ ಯಕ್ಷಗಾನ
ಜೂನ್ 22 , 2016 : ಕುಂಬ್ಳೆ ಸುಂದರ ರಾವ್‌ಗೆ ಉಡುಪಿ ತೆಂಕುತಿಟ್ಟು ವೇದಿಕೆ ಪ್ರಶಸ್ತಿ ಪ್ರದಾನ
ಜೂನ್ 19 , 2016 : ಜನಪ್ರಿಯ ಯಕ್ಷಗಾನ ಕಲಾ ಮಂಡಳಿಗೆ 60


ಯಕ್ಷಧ್ವನಿ
ಇತ್ತೀಚಿನ ಲೇಖನಗಳು


ಸ್ವಗತ

ಇದು ಯಕ್ಷಗಾನಕ್ಕೆ ಮೀಸಲಿಟ್ಟಿರುವ ಅ೦ತರ್ಜಾಲವಾದುದರಿ೦ದ ಬಯಲಾಟ.ಕಾ೦ ಎ೦ಬುದು ನನ್ನ ಮೊದಲ ಆಯ್ಕೆ ಆಗಿರಿರಲಿಲ್ಲ. ಆದರೆ ಅ೦ತರ್ಜಾಲದ ಗ್ರಾಹಕರಿಗೆ ಅತಿ ಸುಲಭವಾಗಿ ನೆನಪಿಡಬಲ್ಲ ಹಾಗೂ ಯಾವುದೇ ಒತ್ತಕ್ಷರಗಳಿಲ್ಲದ bayalata ಶಬ್ದವನ್ನು ಆರಿಸಿರುತ್ತೇನೆ.

ಯಕ್ಷಗಾನಕ್ಕೆ ಸ೦ಭ೦ಧಿಸಿದ ಎಲ್ಲಾ ಮಾಹಿತಿಗಳು ಚದುರಿ ಹೋಗದೆ, ಒ೦ದೇ ಸೂರಿನಡಿ (ಬಯಲಾಟ.ಕಾ೦) ಎಲ್ಲರಿಗೂ ತಲುಪಲು, ಅ೦ತರ್ಜಾಲದ ಸಾಮಾಜಿಕ ತಾಣಗಳಲ್ಲಿ, ’ಬ್ಲಾಗ್’ಗಳಲ್ಲಿ, ಕೆಲವು ಪ್ರಕಟಿತ ಪುಸ್ತಕಗಳಲ್ಲಿ ಹಾಗೂ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಗೊ೦ಡ ಲೇಖನಗಳನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಿರುತ್ತೇನೆ.

ಬಯಲಾಟ.ಕಾ೦ ಕೇವಲ ಯಕ್ಷಗಾನ ಕಲೆಯ ಮಾಹಿತಿ ಹಾಗೂ ಪ್ರಚಾರಕ್ಕಾಗಿ ಮೀಸಲಿಡುವ ತಾಣವಾಗಿದ್ದು, ಯಾವುದೇ ಆರ್ಥಿಕ ಲಾಭದ ಉದ್ದೇಶವನ್ನು ಹೊ೦ದಿರುವುದಿಲ್ಲ. ಮು೦ದೆ..ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ